ಕಾಂಗ್ರೆಸ್ ತೊರೆದು ನೂರಾರು ಮಂದಿ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ ಎಂದು ಮಾಜಿ ಶಾಸಕ ಕೆ.ಎಮ್.ತಿಮ್ಮಾರಾಯಪ್ಪ ತಿಳಿಸಿದ್ದಾರೆ.

ಪಾವಗಡ:ಇಮ್ರಾನ್ ಉಲ್ಲಾ.
ಪಾವಗಡ ಪಟ್ಟಣದ ಮೆಹರ್ ಬಾಬಾ ದೇವಸ್ಥಾನದ ಸಭಾಂಗಣದಲ್ಲಿ ನಡೆದಂತಹ ಸೇರ್ಪಡೆ ಕಾರ್ಯಕ್ರಮ ಈ ಸಂದರ್ಭದಲ್ಲಿ ಸುಮಾರು ನೂರ ಕ್ಕೂ ಹೆಚ್ಚು ಮಂದಿ ಹಾಮಾಲಿ ಸಂಘದ ಸದಸ್ಯರ ಕುಟುಂಬಗಳು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಎಸ್ ಪಕ್ಷದ ಸಿದ್ಧಾಂತಗಳನ್ನು ಒಪ್ಪಿ ಸೇರ್ಪಡೆ ಕಾರ್ಯಕ್ರಮದ

ನಂತರ ಮಾದ್ಯಮ ಜೊತೆ ಯಲ್ಲಿ ಮಾತನಾಡಿ ಪಾವಗಡ ತಾಲೂಕಿನಲ್ಲಿ ದಿನೆ ದಿನೆ ನಮ್ಮ ಪಕ್ಷಕ್ಕೆ ಸೇರುವ ಸಂಖ್ಯೆ ಹೆಚ್ಚಾಗುತ್ತಿದ್ದು ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷಕ್ಕೆ ಸ್ವಯಂ ಪ್ರೇರಣೆಯಾಗಿ ಬರುತ್ತಿದ್ದಾರೆ.ಈಗಾಗಲೇ ಬಹಾಳಷ್ಟು ಮಾದ್ಯಮ ಸಮೀಕ್ಷೆಯಲ್ಲಿ ಜೆಡಿಎಸ್ ಮುಂದಿದೆ ಎಂಬುದಾಗಿ ಜನರೆ ಹೇಳುತ್ತಿದ್ದಾರೆ.ಅದರೆ ನಾನು ಜನರ ಮದ್ಯ ಹೋಗಿ ಮತ ಕೇಳುತ್ತಿದ್ದೆನೆ.ಜನರಲ್ಲಿ ನನ್ನಗೆ ನಂಬಿಕೆ ಇದೆ ಎಂದರು.

ಹಾಮಾಲಿ ಸಂಘದ ಅಧ್ಯಕ್ಷ ಈರಣ್ಣ ಮಾತನಾಡಿ ಈ ಹಿಂದೆ ನಮ್ಮ ಸಂಘದ ಕಾರ್ಮಿಕರಿಗಾಗಿ ವಸತಿ ಯೋಜನೆಗೆ ಜಾಗದ ಬಗ್ಗೆ ಮಾತು ನೀಡಿ ಮಾತು ಮರೆತ್ತಿದ್ದಾರೆ.ಕಾರ್ಮಿಕ ಸಚಿವರಾಗಿದ್ದ ವೇಳೆಯಲ್ಲಿ ಸಹ ನಮ್ಮ ಸಮಸ್ಯೆ ಗಳ ಬಗ್ಗೆ ಕೇಳು ನೀಡಿಲ್ಲ. ಶಾಸಕರ ಮಗ ಚುನಾವಣೆಯಲ್ಲಿ ನಿಂತಿದೆ ವೇಳೆಯಲ್ಲಿ ಸಹ ಸಹಕರಿಸಿದರು ಯಾವುದೇ ಪ್ರಯೋಜನ ವಾಗಿಲ್ಲ ಹಾಗಾಗಿ ಈ ಬಾರಿ ನಮ್ಮ ಹಾಮಾಲಿ ಕುಟುಂಬದ ಸದಸ್ಯರು ಜೆಡಿಎಸ್ ಸೇರಿದ್ದೆವೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದಂತಹ ಆರ್ ಸಿ ಅಂಜಿನಪ್ಪನವರು. ರಾಜ್ಯಉಪಾಧ್ಯಕ್ಷರಾದಂತಹ ತಿಮ್ಮಾರೆಡ್ಡಿ. ತಾಲೂಕು ಅಧ್ಯಕ್ಷರಾದಂತಹ ಬಲರಾಮ್ ರೆಡ್ಡಿ. ಕಾರ್ಯದರ್ಶಿ ಎನ್.ಎ.ಈರಣ್ಣ. ಗೌರವ ಅಧ್ಯಕ್ಷರಾದಂತಹ ರಾಜಶೇಖರ್. ವಕ್ತಾರ ಅಕ್ಕಲ್ಲಪ್ಪನಾಯ್ಡು . ರಾಮಕೃಷ್ಣನ್ ರೆಡ್ಡಿ. ಮಾಜಿ ಪುರಸಭೆ ಸದಸ್ಯರಾದ ಜಿ.ಎ.ವೆಂಕಟೇಶ್. ಮನು ಮಹೇಶ್.ಗೋಪಾಲ್. ಅಲ್ಪಸಂಖ್ಯಾತರ ಅಧ್ಯಕ್ಷ ಯೋನುಸ್. ಕೆ.ಟಿ.ಹಳ್ಳಿ ಮಂಜುನಾಥ್.ಜೆಡಿಎಸ್ ಮಹಿಳೆ ಘಟಕದ ಗೌರವ ಅಧ್ಯಕ್ಷೆ ನಾಗರತ್ಮಮ್ಮ ತಿಮ್ಮಾರಾಯಪ್ಪ. ಅಂಬಿಕಾ. ರಂಗಮ್ಮ.
ಹಲವಾರು ಮುಖಂಡರುಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.

