JANATAA24 NEWS DESK
Badami: ಚಕ್ಕಡಿಯ ಮೂಲಕ ಶಾಲೆಗೆ ಮಕ್ಕಳನ್ನು ಕರೆತಂದ ನವಚೇತನ ಎಜ್ಯುಕೇಶನ್ ಸೊಸೈಟಿ.

ಬಾದಾಮಿ: ನವಚೇತನ ಎಜ್ಯುಕೇಶನ್ ಸೊಸೈಟಿ (ರಿ) ಶಾಕಂಭರೀ ವಿದ್ಯಾನಿಕೇತನ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಚೊಳಚಗುಡ್ಡದಲ್ಲಿ ಇಂದು 2026 -27 ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವವನ್ನು ಅತಿ ಸಡಗರ ಹಾಗೂ ಸಂಭ್ರಮದಿಂದ ಡೊಳ್ಳು ಬಾರಿಸುವುದರೊಂದಿಗೆ ಚಕ್ಕಡಿಯ ಮೂಲಕ ಮಕ್ಕಳನ್ನು ಮೆರವಣಿಗೆ ಮಾಡಿಕೊಂಡು ಶಾಲಾ ಆವರಣಕ್ಕೆ ಕರೆತರಲಾಯಿತು. ಊರಿನ ಗುರುಹಿರಿಯರು ಸಮ್ಮುಖದಲ್ಲಿ ಹಾಗೂ ಚೊಳಚಗುಡ್ಡ ಗ್ರಾಮದ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಸರ್ವ ಸದಸ್ಯರೊಂದಿಗೆ ಶಾಲೆಯ ಸರ್ವ ಶಿಕ್ಷಕ ವೃಂದದವರು ಹಾಜರಿದ್ದರು.
ಊರಿನ ಹಿರಿಯರಾದ ಶ್ರೀ ಗುರುಪಾದಪ್ಪ ವಾಲಿ ಇವರು ರಿಬ್ಬನ್ ಕಟ್ ಮಾಡುವುದರೊಂದಿಗೆ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು. ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಶ್ರೀ ವೀರನಗೌಡರು ಪಾಟೀಲ ಸಂಗಪ್ಪ ಹೂಗಾರ ಆನಂದ್ ಜವಳಗದ್ದಿ ಮಹಾಂತೇಶ ಅಂಬಿಗೇರ ಅಶೋಕ ಜವಳಗದ್ದಿ ಹಾಗೂ ಊರಿನ ಪ್ರಮುಖರಾದ ವೀರಣ್ಣ ಸಾತಣ್ಣವರ ಕುಬೇರಗೌಡ ಪಾಟೀಲ ಹಾಗೂ ಇನ್ನು ಅನೇಕ ಮಹನೀಯರು ಉಪಸಿತರಿದ್ದರು.
ಅದೇ ರೀತಿ ಸಂಸ್ಥೆಯ ಚೇರ್ಮನ್ನರಾದ ಡಾಕ್ಟರ ಬಸವರಾಜ ಮುಲ್ಕಿಪಾಟೀಲ ಗೌರವ ಕಾರ್ಯದರ್ಶಿಗಳಾದಂತಹ ಡಾಕ್ಟರ ಗಿರೀಶ ದಾನಪ್ಪಗೌಡರ ಮುಖ್ಯ ಗುರುಗಳಾದಂತ ಪ್ರಶಾಂತ ಪಡಿಯಪ್ಪನವರ ಹಾಗೂ ಶಾಲೆಯ ಸರ್ವ ಶಿಕ್ಷಕ ವೃಂದದವರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ: ರಾಜೇಶ್. ಎಸ್. ದೇಸಾಯಿ ಬಾಗಲಕೋಟೆ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.