Document

ವಾಣಿಜ್ಯ ಸಂಕೀರ್ಣವನ್ನು ಉದ್ಘಾಟಿಸಿದ: ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಆರಗ ಜ್ಞಾನೇಂದ್ರ

HonnasiriMahindrapost03 2
ಜಾಹೀರಾತು/Advertisement

ತುರುವೇಕೆರೆ ಪಟ್ಟಣ ಪಂಚಾಯ್ತಿ ವತಿಯಿಂದ ನಿರ್ಮಿಸಲಾಗಿರುವ ವಾಣಿಜ್ಯ ಸಂಕೀರ್ಣವನ್ನು ಸೋಮವಾರ ಬೆಳಿಗ್ಗೆ 11-30 ಕ್ಕೆ ಉದ್ಘಾಟಿಸಲಾಗುವುದು ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಆರಗ ಜ್ಞಾನೇಂದ್ರ ಹಾಗೂ ಮಾನ್ಯ ಮಂತ್ರಿಗಳಾದ ಎಂ.ಟಿ.ಬಿ. ನಾಗರಾಜ್, ಮಾಧುಸ್ವಾಮಿ, ಬಿ.ಸಿ. ನಾಗೇಶ್ ರವರುಗಳು ನೆರವೇರಿಸಲಿದ್ದಾರೆ ಎಂದು ಶಾಸಕ ಮಸಾಲಾ ಜಯರಾಮ್ ತಿಳಿಸಿದರು.

Screenshot 2023 03 06 134658

ಶಾಸಕರು ಅವರ ತೋಟದ ಮನೆಯಲ್ಲಿ ಪತ್ರಿಕೆಯೊಂದಿಗೆ ಮಾತನಾಡಿ ಬಹಳ ವರ್ಷಗಳಿಂದ ಕಾಮಗಾರಿ ಪೂರ್ಣಗೊಳ್ಳದೆ ನೆನೆಗುದ್ದಿಗೆ ಬಿದ್ದಿದಂತಹ ವಾಣಿಜ್ಯ ಸಂಕೀರ್ಣದ ಕಾಮಗಾರಿಯನ್ನು ಈಗ ಪೂರ್ಣಗೊಳಿಸಿದ್ದು ಅದರ ಉದ್ಘಾಟನೆಯನ್ನು ನೆಡೆಸುತಿದ್ದೇವೆ ಈ ವಾಣಿಜ್ಯ ಸಂಕೀರ್ಣಕ್ಕೆ ಧೀಮಂತ ನಾಯಕ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಯವರ ಹೆಸರನ್ನು ಇಡಲಾಗುವುದು ಎಂದು ತಿಳಿಸಿ ಸಾರ್ವಜನಿಕರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ಮನವಿಮಾಡಿ ಜೆ.ಡಿ.ಎಸ್. ತೊರೆದು ಗುಡ್ಡೇನಹಳ್ಳಿ ಶಂಕರೇಗೌಡ, ಜೆ.ಡಿ.ಎಸ್. ಮುಖಂಡ ಉಮೇಶ್, ಮರಸರಕೊಟ್ಟಿಗೆಯ ಚಂದ್ರಣ್ಣ,ಸೂಳೆಕೆರೆ ಲೋಕೇಶ್ ಮುಂತಾದವರನ್ನು ಶಾಸಕರು ಪಕ್ಷಕ್ಕೆ ಬರಮಾಡಿಕೊಂಡರುಇದೇ ಸಂದರ್ಭದಲ್ಲಿ ಗುಡ್ಡೇನಹಳ್ಳಿ ಶಂಕರೇಗೌಡ ಮಾತನಾಡಿ ಶಾಸಕರ ಅಭಿವೃದ್ಧಿ ಕೆಲಸಗಳನ್ನು ನೋಡಿ ಬಿ.ಜೆ.ಪಿ. ಪಕ್ಷ ಸೇರ್ಪಡೆಯಾಗಿದ್ದೇನೆ ನಾನು ಒಂದು ವರ್ಷದ ಹಿಂದೆಯೇ ಜಯರಾಮಣ್ಣನವರ ಜೊತೆ ಹೋಗಲು ಚಿಂತನೆಯನ್ನು ನೆಡೆಸಿದ್ದೆವು ಅವರಲ್ಲಿನ ಒಳ್ಳೆಯತನ ಸರಳತೆ ಯನ್ನು ನೋಡಿ ಪಕ್ಷ ಸೇರ್ಪಡೆಗೊಂಡಿದ್ದೇವೆ ಜೆ.ಡಿ.ಎಸ್ ನಲ್ಲಿ ಆದ ಕೆಲವು ವಿದ್ಯಮಾನಗಳಿಂದ ಬೇಸತ್ತು ಪಕ್ಷವನ್ನು ತೊರೆದಿದ್ದೇವೆ ನಾವು ಕೃಷ್ಣಪ್ಪನವರ ಬಗ್ಗೆ ಮಾತನಾಡುವಷ್ಟು ದೊಡ್ಡವರಲ್ಲ ಎಂದುಹೇಳಿ ಕಳೆದ ಕೆಲವು ದಿನಗಳ ಹಿಂದೆ ನೆಡೆದ ಗೊಂದಲಗಳಿಗೆ ಕ್ಷಮೆ ಯಾಚಿಸಿ ಮುಂದೆ ಯಾವುದೇ ಅಥವಾ ಯಾರದೇ ಒತ್ತಡ ಬಂದರೂ ಸಹ ಜೆ.ಡಿ.ಎಸ್ ಗೆ ಮರಳುವ ಪ್ರಶ್ನೆಯೇ ಇಲ್ಲ ಏನಿದ್ದರೂ ಜಯರಾಮಣ್ಣನವರನ್ನು ಮುಂದಿನ ಚುನಾವಣೆಯಲ್ಲಿ ಗೆಲ್ಲಿಸುವುದು ನಮ್ಮ ಗುರಿ ಎಂದರು.

WhatsApp Image 2023 03 05 at 12.17.02 PM

ಮುಖಂಡ ಕೊಂಡಜ್ಜಿ ವಿಶ್ವನಾಥ್ ಮಾತನಾಡಿ ನಾವು ಶಂಕರೇಗೌಡರು ಸುಮಾರು 20 ವರ್ಷಗಳು ಜೆ.ಡಿ.ಎಸ್ ನಲ್ಲಿ ಒಟ್ಟಿಗೆ ಕೆಲಸ ಮಾಡಿದಂತವರು ಅವರ ಸೇರ್ಪಡೆ ಬಿ.ಜೆ.ಪಿ. ಪಕ್ಷಕ್ಕೆ ಆನೆಬಲ ಬಂದಂತಾಗಿದೆ ನಮ್ಮ ಪಕ್ಷದಿಂದ ಹೊರ ಹೋದಂತಹ ಕೆಲವು ಮುಖಂಡರುಗಳು ಕೆಲವು ಹೇಳಿಕೆಗಳನ್ನು ನೀಡಿದ್ದು ಅವರಿಗೆ ಹೇಳುತ್ತಿದ್ದೇನೆ ಕಳೆದ ಐದು ವರ್ಷಗಳಲ್ಲಿ ಆದ ಅಭಿವೃದ್ಧಿ ಏನು ಕೃಷ್ಣಪ್ಪನವರ ಕಾಲದಲ್ಲಿ ಆದ ಅಭಿವೃದ್ಧಿ ಏನು ಎಲ್ಲರಿಗೂ ಗೊತ್ತಿರುವ ವಿಚಾರ ನೀವುಗಳು ಹೋಗಿ ಅವರನ್ನು ಹೊಗಳುತ್ತಿದ್ದೀರಾ ಇನ್ನು ಮೂವತ್ತರಿಂದ ನಲವತ್ತು ದಿನಗಳಲ್ಲಿ ನಿಮಗೆ ಗೊತ್ತಾಗಲಿದೆ ಅಸಲಿಯತ್ತು ಎಂದು ಹೇಳಿ ಅತಿ ಹೆಚ್ಚು ಬ್ರಷ್ಟಾಚಾರ ಶುರುವಾಗಿದ್ದು ಕೃಷ್ಣಪ್ಪನವರ ಕಾಲದಲ್ಲಿ ಎಂದು ಆರೋಪಿಸಿ ಇವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ನೈತಿಕತೆಯಿಲ್ಲ ಜಯರಾಮಣ್ಣನವರು ಮಾಡಿದ ಅಭಿವೃದ್ಧಿ ಕಾರ್ಯಗಳು ನಾನು ಮಾಡಿದ್ದು ಎಂದು ಹೇಳುವುದು ಸರಿಯಲ್ಲ ಚುನಾವಣೆಯ ಹತ್ತಿರದಲ್ಲಿ ಜನರು ಈ ಸುಳ್ಳು ಮಾತುಗಳನ್ನು ನಂಬಲು ತಯಾರಿಲ್ಲ ಎಂದರು.

Screenshot 2023 03 06 135118


ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಮುತ್ತಣ್ಣ, ಮಾಜಿ ಅಧ್ಯಕ್ಷ ದುಂಡ ರೇಣುಕಪ್ಪ,ವಿ.ಬಿ. ಸುರೇಶ್, ಹರಿಕಾರನಹಳ್ಳಿ ಪ್ರಸಾದ್ , ಸಿದ್ದಪ್ಪಾಜಿ, ಮಲ್ಲೇಶ್, ಆಯರಹಳ್ಳಿ ಪಾಂಡು, ಕಾಳಂಜಿಹಳ್ಳಿ ಸೋಮಶೇಖರ್, ಜಿ.ವಿ. ಪ್ರಕಾಶ್ ಮತ್ತಿತರಿದ್ದರು.

Document

Leave a Reply

Your email address will not be published. Required fields are marked *