
ಲಂಚ ಪ್ರಕರಣದಲ್ಲಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪನ (MADAL VIRUPAKSHAPPA) ಪುತ್ರನ ಕಚೇರಿ ಹಾಗೂ ಮನೆ ಮೇಲೆ ನಡೆದ ಲೋಕಾಯುಕ್ತ ದಾಳಿ ಅಂತ್ಯವಾಗಿದೆ.

ಸತತ 18 ಗಂಟೆಗಳ ಕಾಲ ನಡೆದ ಶೋಧ ಕಾರ್ಯಾಚರಣೆಯಲ್ಲಿ ಎಂಎಲ್ಎ ಮಗನ ಕಚೇರಿ ಹಾಗೂ ನಿವಾಸದಲ್ಲಿ ಬರೋಬ್ಬರಿ 8 ಕೋಟಿಗೂ ಅಧಿಕ ಅಕ್ರಮ ಹಣ ಪತ್ತೆಯಾಗಿದೆ. ಈ ಅಕ್ರಮ ಹಣ ಸಂಗ್ರಹಿಸುವಲ್ಲಿ ಪಾತ್ರವು ಇದೆ ಎಂಬುವುದು ಹೊರ ಬಿದ್ದಿದೆ. ಮಾಡಾಳು ವಿರೂಪಾಕ್ಷಪ್ಪ ಮೇಲೆ ಅನುಮಾನ ಪಡುತ್ತಿದ್ದಂತೆ ಯಾವುದೇ ಸುಳಿವು ನೀಡದೆ ಮನೆಯವರಿಗೂ ಮಾಹಿತಿ ನೀಡಿದೆ ಹೊರ ಉಳಿದ್ದಾರೆ.ಎರಡು ದಿನದಿಂದ ಮೊಬೈಲ್ ಸ್ವಿಚ್ ಅಫ್ ಮಾಡಿಕೊಂಡು ಬಿಜೆಪಿ ಎಂ ಎಲ್ ಎ ಮಾಡಾಳು ತಲೆಮರೆಸಿಕೊಂಡಿದ್ದಾರೆ.

ಲೋಕಾಯುಕ್ತ ಅಧಿಕಾರಿಗಳು ವಿರೂಪಾಕ್ಷಪ್ಪನ ನಿವಾಸದಲ್ಲಿ ವಶಪಡಿಸಿಕೊಂಡ ದಾಖಲೆಗಳ ಮಾಹಿತಿ.
8 ಕೋಟಿ ನಗದು ಹಣದ ಜೊತೆಗೆ ಸಿಕ್ಕಿದ್ದು ನೂರಾರು ಕೋಟಿ ಬೆಲೆ ಬಾಳುವಂತಹ ಆಸ್ತಿಯ ದಾಖಲೆ ಪತ್ರಗಳು ಹೀಗಿವೆ.
ಚಿತ್ರದುರ್ಗ ಜಿಲ್ಲೆಯಲ್ಲಿ 232 ಎಕರೆ ಜಮೀನು: ಹೊಳಲ್ಕೆರೆ ತಾಲೂಕಿನ ಕುಡಿನೀರ ಕಟ್ಟೆಯಲ್ಲಿ 52 ಎಕರೆ ಜಮೀನು, ಹೊಸದುರ್ಗ ತಾಲೂಕು ಬೆಲಗೂರು ಬಳಿ 180 ಎಕರೆ.

ಶಿವಮೊಗ್ಗದ ಭದ್ರಾವತಿ ತಾಲೂಕಿನ ಮಂಗೋಟಿ ಬಳಿ 60 ಎಕರೆ.
ದಾವಣಗೆರೆ ತಾಲೂಕಿನ ಚಿಕ್ಕ ತೊಗಲೇರಿ ಬಳಿ 64 ಎಕರೆ.
ವಿಜಯನಗರ ಜಿಲ್ಲೆಯ ಜಂಗಮ ತುಂಬಿಕೆರೆ ಗ್ರಾಮದಲ್ಲಿ 52 ಎಕರೆ
ಚೆನ್ನಗಿರಿ ಮತ್ತು ದಾವಣಗೆರೆಯಲ್ಲಿ ನಾಲ್ಕು ಕಡೆ ಶಾಸಕರ ಹೆಸರಿನಲ್ಲಿಯೇ ಅಡಕೆ ತೋಟ.
ಆಸ್ತಿ ತನಿಖೆಯಾಗಿ ಲೋಕಾಯುಕ್ತ ಅಧಿಕಾರಿಗಳಿಂದ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
ಸಿಕ್ಕಿರುವ ಬೂ ದಾಖಲೆಗಳ ಪರಿಶೀಲನೆ ಲೋಕಾಯುಕ್ತ ಅಧಿಕಾರಿಗಳಿಂದ ತ್ವರಿತವಾಗಿ ಮುಕ್ತಾಯವಾಗಲಿದೆ.

ಶಾಸಕರ ಆಸ್ತಿಯ ದಾಖಲೆಗಳನ್ನು ಕಂಡು ಲೋಕಾಯುಕ್ತ ಅಧಿಕಾರಿಗಳು ದಂಗಾಗಿರುವಂತಹ ಘಟನೆ ನಡೆದಿದೆ.