
ಬೆಂಗಳೂರು: ಕಳೆದ ಎರಡು ದಿನಗಳ ಹಿಂದೆ ರಾಜ್ಯಾದ್ಯಂತ ಲೋಕಾಯುಕ್ತ ದಾಳಿ ನಡೆದಿದಿದೆ. ಈ ನಡುವೆ ಬೆಂಗಳೂರಿನ ಕೆ.ಆರ್.ಪುರಂ ತಹಶಿಲ್ದಾರ್ ಆಗಿರೋ ಅಜಿತ್ ಕುಮಾರ್ ರೈ ಮಾಲಾಡಿ ಆಸ್ತಿಯನ್ನು ನೋಡಿ ಲೋಕಾ ಆಧಿಕಾರಿಗಳೇ ಶಾಕ್ ಆಗಿದ್ದಾರೆ ಎನ್ನಲಾಗಿದೆ. ತಹಶಿಲ್ದಾರ್ ಅಜಿತ್ ರೈ ಬಳಿ 500 ಕೋಟಿ ಆಸ್ತಿ ಪತ್ತೆ ಯಾಗಿದ್ದು, ಇದರಲ್ಲಿ ಬಹುತೇಕವಾಗಿ ಬೇನಾಮಿಯವರ ಹೆಸರಿನಲ್ಲಿ ಇದೇ ಎನ್ನವು ಆರೋಪ ಕೇಳಿ ಬಂದಿದೆ.
ಮನೆ, ಕಾರು. ಆಸ್ತಿ ಎಲ್ಲಾವು ಕೂಡ ಬೇನಾಮಿ ಹೆಸರಿನಲ್ಲಿ ಪತ್ತೆಯಾಗಿದೆ ಅಂತ ಹೇಳಲಾಗುತ್ತಿದೆ. ಕೋಟ್ಯಂತರ ರೂ ಅಕ್ರಮ ಆಸ್ತಿ, ಲಕ್ಷಾಂತರ ರೂ ಹಣ, ಕೆ.ಜಿ ಗಟ್ಟಲೆ ಆಭರಣಗಳು, ಬೆಲೆಬಾಳುವ ವಿದೇಶಿ ಮದ್ಯ, ಐಶಾರಾಮಿ ಕಾರು, ಚಂದ್ರಾಲೇಔಟ್ ನಿವಾಸದಲ್ಲಿ ನಡೆದಿದೆ. ಈ ಬಗ್ಗೆ ಲೋಕಾಯುಕ್ತ ಪೋಲಿಸರು ದೂರು ದಾಖಲಿಸಿಕೊಂಡಿದ್ದು, ಸದ್ಯ ಅಜಿರ್ ರೈ ಅಧಿಕಾರಿಗಳು ಬಂಧಿಸಿದ್ದಾರೆ.