Janataa24 NEWS DESK

ಗುಬ್ಬಿ : ಯಾವುದೇ ಒಂದು ರಾಷ್ಟ್ರವು ಅಭಿವೃದ್ಧಿ ಯತ್ತ ಸಾಗಬೇಕಾದರೆ ಶಿಕ್ಷಣವು ಅತ್ಯ ಅಮೂಲ್ಯ ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದರು.
ತಾಲೂಕಿನ ಅದಲಗೆರೆ ಗ್ರಾಮದಲ್ಲಿ ನೂತನ ಶಾಲ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದವರು
ಪೋಷಕರು ಆಂಗ್ಲ ಶಾಲೆಗೆ ಮಾರುಹೊಗದೆ ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗೆ ಸೇರಿಸಬೇಕು.
ಸರ್ಕಾರವು ಮಕ್ಕಳಿಗೆ ಅನೇಕ ಸೌಲಭ್ಯಗಳನ್ನು ಹಾಗೂ ಮೂಲಭೂತ ಸೌಕರ್ಯಗಳನ್ನು ನೀಡುತ್ತಿದೆ.
ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿದಂತಹ ಎಷ್ಟೋ ಸಾಧಕರು ಮಹಾನ್ ನಾಯಕರಾಗಿದ್ದಾರೆ ಹಾಗಾಗಿ ಸರ್ಕಾರವು ಮಕ್ಕಳ ಉನ್ನತ ಭವಿಷ್ಯಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಶಿಕ್ಷಣದಿಂದ ಯಾವ ಮಕ್ಕಳು ಸಹ ವಂಚಿತರಾಗಬಾರದು ಯಾವುದೇ ಒಂದು ರಾಷ್ಟ್ರವು ಅಭಿವೃದ್ಧಿ ಪಥದತ್ತ ಸಾಗಬೇಕಾದರೆ ಶೈಕ್ಷಣಿಕವಾಗಿ ಸದೃಢರಾದರೆ ರಾಷ್ಟ್ರವು ಅಭಿವೃದ್ಧಿ ಪದದ ಸಾಗುತ್ತದೆ.
ಉದಾಹರಣೆಗೆ ಇರಾನ್,ಇರಾಕ್, ಕುವೈತ್, ರಾಷ್ಟ್ರಗಳಲ್ಲಿ ಅನೇಕ ರಾಷ್ಟ್ರಗಳಿಗೆ ತೈಲಗಳನ್ನು ನೀಡುತ್ತಿದ್ದರು ಆರ್ಥಿಕವಾಗಿ ಸದೃಢವಾಗಿದ್ದರೂ ಅವುಗಳು ಹಿಂದುಳಿದ ರಾಷ್ಟ್ರಗಳಾಗಿವೆ ಇದಕ್ಕೆ ಕಾರಣ ಶಿಕ್ಷಣ ಗುಣಮಟ್ಟದ ಕೊರತೆಯಿಂದಾಗಿ.
ಅಮೆರಿಕ, ಜಪಾನ್, ಆಸ್ಟ್ರೇಲಿಯಾ ಇವುಗಳು ಅತಿ ಹೆಚ್ಚು ಮುಂದುವರೆದಿರುವ ರಾಷ್ಟ್ರಗಳು ಏಕೆಂದರೆ ಈ ರಾಷ್ಟ್ರಗಳಲ್ಲಿ ರಾಷ್ಟ್ರದ ಪ್ರತಿಯೊಬ್ಬ ಪ್ರಜೆಯು ಉನ್ನತ ಶಿಕ್ಷಣ ಪಡೆದಿದ್ದಾರೆ. ಹಾಗಾಗಿ ಯಾವುದೇ ಒಂದು ರಾಷ್ಟ್ರವು ಸದೃಢವಾಗಬೇಕಾದರೆ ಶಿಕ್ಷಣವು ಅತ್ಯಂತ ಅಮೂಲ್ಯವಾದದ್ದು ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಮಾತನಾಡಿ ವಿವೇಕಾ ಯೋಜನೆಯಡಿಯಲ್ಲಿ ಕಳೆದ ವರ್ಷ ತಾಲೂಕಿಗೆ 37 ಕೊಠಡಿಗಳು ಮಂಜುರಾಗಿದ್ದು ಜನಪ್ರಿಯ ಶಾಸಕರು ಅ ದಲಗೆರೆ ಗ್ರಾಮಕ್ಕೆ ಎರಡು ಕೊಠಡಿಗಳಿಗೆ 37 ಲಕ್ಷ ರೂಗಳಷ್ಟು ಅನುದಾನವನ್ನು ಬಿಡುಗಡೆ ಮಾಡಿದ್ದಾರೆ. ಇನ್ನು ನಾಲ್ಕು ಕೊಠಡಿಗಳನ್ನು ಗಡಿ ಬಲಿತ ಪ್ರದೇಶ ಅಭಿವೃದ್ಧಿ ಯೋಜನೆ ಅಡಿ ನಾಲ್ಕು ಕೊಠಡಿಗಳನ್ನು ಮಂಜೂರು ಮಾಡಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಇಂದಿನ ಮಕ್ಕಳೇ ಭವಿಷ್ಯದ ಉನ್ನತ ಪ್ರಜೆಗಳು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ. ತ್ಯಾಗ ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬೈರಮ್ಮ ಈಶ್ವರಯ್ಯ, ಉಪಾಧ್ಯಕ್ಷ ವಿದ್ಯಾಧರ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವನಜಾಕ್ಷಿ, ಗ್ರಾಮ ಪಂಚಾಯತಿ ಸದಸ್ಯರಾದ. ಜಗದೀಶ್ ಕುಮಾರಸ್ವಾಮಿ.
ಮುಖಂಡರಾದ ಜುಂಜೇಗೌಡ, ಶೆಟ್ಟಾಳಪ್ಪ, ಮಹದೇವಯ್ಯ,ಸತೀಶ್. ದಲಿತ ಗಂಗಣ್ಣ, ರಾಜು ಬಿ ಎಸ್, ನವೀನ್ ಕುಮಾರ್ ಇತರರು ಹಾಜರಿದ್ದರು.
ವರದಿ :ಶ್ರೀಕಾಂತ್ ಗುಬ್ಬಿ