ಬಾಗಲಕೋಟೆ
ಬಾದಾಮಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೀಮಸೇನ ಚಿಮ್ಮನಕಟ್ಟಿ ಪರ ಬೈಕ್ ರ್ಯಾಲಿ ಮೂಲಕ ಅಪಾರ ಕಾರ್ಯಕರ್ತರು ಭರ್ಜರಿ ಬಿರುಸಿನ ಪ್ರಚಾರ.

ವಿಧಾನಸಭಾ ಚುನಾವಣೆಗೆ ಕೌಂಟ್ ಡೌನ್ ಶುರು ವಾಗಿದ್ದು ನಿನ್ನೆಯಷ್ಟೇ ಬಿ. ಜೆ. ಪಿ. ಪರ ಪ್ರಧಾನಿ ನರೇಂದ್ರ ಮೋದಿ ಬಾದಾಮಿಗೆ ಆಗಮಿಸಿ ಮಾತಾಯಾಚನೆ ಮಾಡಿದ ಬೆನ್ನಲ್ಲೇ ಬಾದಾಮಿ ಕಾಂಗ್ರೆಸ್ ಪಾಳ್ಯದಲ್ಲಿ ಅಪಾರ ಪ್ರಮಾಣದಲ್ಲಿ ಬೃಹತ್ ಬೈಕ್ ರ್ಯಾಲಿ ಮೂಲಕ ಭರ್ಜರಿ ಟಾಂಗ್ ಕೊಟ್ಟಿದೆ.
ಬಾದಾಮಿ ಮತಕ್ಷೇತ್ರದ ರಾಜಕಾರನದಲ್ಲಿ ಹುಲಿ ಎಂದೇ ಬಿಂಬಿತರಾಗಿರುವ ಮಾಜಿ ಸಚಿವ ಬಿ. ಬಿ. ಚಿಮ್ಮನ ಕಟ್ಟಿ ಯವರ ಪುತ್ರ ಯುವ ಮುಖಂಡ ಕಾಂಗ್ರೆಸ್ ನ ಅಭ್ಯರ್ಥಿ ಭೀಮಸೇನ ಚಿಮ್ಮನ ಕಟ್ಟಿ ಪರ ಚುನಾವನಾ ಪ್ರಚಾರಕ್ಕೆ ತಾಲೂಕಿನ ಚೋಳಚಗುಡ್ಡ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಿಂದ ಪೂಜೆ ಸಲ್ಲಿಸಿ ಮುಖಂಡರಾದ ಹೊಳಬಸು ಶಟ್ಟರ್, ಪಿ. ಆರ್. ಗೌಡರ್,ಎಂ. ಬಿ. ಹಂಗರಗಿ,ಆರ್. ಎಫ್. ಬಾಗವಾನ,ಮಧು ಯಡ್ರಾಮಿ ಸೇರಿದಂತೆ ಅನೇಕ ಮುಖಂಡರು ಜೊತೆಗಿದ್ದು ಚಾಲನೆ ನೀಡಿದರು.
ಬೈಕ್ ರ್ಯಾಲಿ ನೇತೃತ್ವವನ್ನು ಕಾಂಗ್ರೆಸ್ ನ ಯುವ ಮುಖಂಡರಾದ ರಂಗನಗೌಡ. ಪಿ. ಗೌಡರ್, ಆನಂದ್ ದೊಡಮನಿ ಚಿನ್ನಪ್ಪ. ಮೆಣಸಗಿ ,ಪ್ರಕಾಶ. ಎಸ್. ದೇಸಾಯಿ, ನಾಗರಾಜ್, ಪ್ರಕಾಶ ದೊಡಮನಿ ವಹಿಸಿಕೊಂಡಿದ್ದರು.
ಚೋಳಚಗುಡ್ಡ ದಿಂದ ಸಾಗಿ ಹಿರೇನಸಬಿ, ಬೇಲೂರ, ಹೊಸೂರ, ಜಾಲಿಹಾಳದಲ್ಲಿ ಮಹಾದಾಯಿ ಹೋರಾಟಗಾರ ಕಾಂಗ್ರೆಸ್ ನ ಹಿರಿಯ ಕಟ್ಟಾಳು ಮಾಜಿ ಶಾಸಕರು ದಿವಂಗತ ಬಿ. ಎಂ. ಹೊರಕೇರಿ ಸಾಹೇಬರ ವೃತ್ತಕ್ಕೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿ ಮಾದ್ಯಮ ಜೊತೆ ಮುಖಂಡರು ಯುವಕರು ಮಾದ್ಯಮದ ಜೊತೆ ಮಾತನಾಡಿ ಕಾಂಗ್ರೆಸ್ ಪಕ್ಷ ಬರುವುದು ಶತಸಿದ್ದ ಎಂದು ಮಾತು ಪ್ರಾರಂಭಿಸಿದರು.
ವರದಿ
ಬಾಗಲಕೋಟೆ :- ರಾಜೇಶ್. ಎಸ್. ದೇಸಾಯಿ