Janataa24 NEWS DESK
ಗುಬ್ಬಿ
ದಲಿತರ 40 ವರ್ಷಗಳ ನಿರಂತರ ಹೋರಾಟಕ್ಕೆ ಮನ್ನಣೆ ನೀಡಿ ಒಳ ಮೀಸಲಾತಿ ಜಾರಿ ಮಾಡಿದ್ದು ನಮ್ಮ ಡಬಲ್ ಇಂಜಿನ್ ಸರ್ಕಾರ ಎಂದು ಕೇಂದ್ರ ಸಚಿವ ಎ ನಾರಾಯಣಸ್ವಾಮಿ ತಿಳಿಸಿದರು.

ಪಟ್ಟಣದ ಬಾವಿ ಮನೆ ಕಲ್ಯಾಣ ಮಂಟಪದಲ್ಲಿ ಬುದ್ಧ, ಬಸವ,ಅಂಬೇಡ್ಕರ್, ಜಯಂತಿ ಆಚರಿಸಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರವು ದಲಿತ ಸಮುದಾಯಗಳಿಗೆ ಯಾವುದೇ ಮನ್ನಣೆಯನ್ನು ನೀಡಿಲ್ಲ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಮೀಸಲಾತಿ ಜಾರಿ ಮಾಡಬಹುದಾಗಿತ್ತು ಆದರೆ ಕಾಂಗ್ರೆಸ್ ಸರ್ಕಾರವು ದಲಿತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ.
ಕಾಂಗ್ರೆಸ್ ನಾಯಕರು ನಾವು ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ಒಳ ಮೀಸಲಾತಿಯನ್ನು ಬಿಜೆಪಿ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ರದ್ದುಗೊಳಿಸುತ್ತೇವೆ ಎಂದು ಮಾಧ್ಯಮಗಳಲ್ಲಿ ನೇರವಾಗಿ ತಿಳಿಸಿದ್ದಾರೆ. ಹಾಗಾಗಿ ದಲಿತರು ಎಚ್ಚೆತ್ತುಕೊಳ್ಳಬೇಕು.
ಮಹಾ ನಾಯಕ ಡಾ. ಬಿ ಆರ್ ಅಂಬೇಡ್ಕರ್ ರವರಿಗೂ ಅನ್ಯಾಯ ಮಾಡಿದ ಕಾಂಗ್ರೆಸ್ ಪಕ್ಷವು ದಲಿತರಿಗೂ ಅನ್ಯಾಯ ಮಾಡುತ್ತಾ ಬಂದಿದೆ. ಸಂವಿಧಾನ ಶಿಲ್ಪಿಗೆ ಕಾಂಗ್ರೆಸ್ ಪಕ್ಷದವರು ಭಾರತ ರತ್ನ ಪ್ರಶಸ್ತಿಯನ್ನು ನೀಡಲಿಲ್ಲ.
ಕಾಂಗ್ರೆಸ್ಸೇತರ ಸರ್ಕಾರ ಬಂದಾಗ ಭಾರತ ರತ್ನ ಪ್ರಶಸ್ತಿ ದೊರೆತಿದೆ. ಕಾಂಗ್ರೆಸ್ ಸರ್ಕಾರವು ದಲಿತರ ಮಕ್ಕಳ ಸ್ಕಾಲರ್ಷಿಪ್ನಲ್ಲೂ ಹಗರಣ ಮಾಡಿದೆ ಈಗಲೂ ಸಿಬಿಐ ತನಿಖೆ ನಡೆಯುತ್ತಿದೆ ಹಾಗಾಗಿ ದಲಿತರು ಕಾಂಗ್ರೆಸ್ ಗೆ ಮತ ನೀಡಬಾರದು 1947ರಲ್ಲಿ ಕಾಂಗ್ರೆಸ್ ಸರ್ಕಾರವು ಅಂಬೇಡ್ಕರ್ ರವರನ್ನು ನಡೆಸಿಕೊಂಡ ರೀತಿಯ ಬಗ್ಗೆ ಪುನರಾವರ್ತಿಸಿ ಮತದಾನ ಮಾಡಬೇಕು.

ಇಂತಹ ಬ್ರಷ್ಟಾಚಾರವನ್ನರಿತ ಬಿಜೆಪಿ ಸರ್ಕಾರವು ದಲಿತರಿಗೆ ನ್ಯಾಯಯುತವಾದ ಜನಸಂಖ್ಯಾ ಆಧಾರಿತವಾಗಿ ಮೀಸಲಾತಿ ನೀಡಬೇಕು ಎಂದು ದಲಿತರ 30 ವರ್ಷಗಳ ಸತತ ಹೋರಾಟವನ್ನರಿತ ಬಿಜೆಪಿ ಸರ್ಕಾರವು ನಿಷ್ಪಕ್ಷಪಾತವಾಗಿ ಪರಿಗಣಿಸಿ ಡಬಲ್ ಇಂಜಿನ್ ಸರ್ಕಾರವು ಒಳ ಮೀಸಲಾತಿಯನ್ನು ಜಾರಿ ಮಾಡಿದೆ ಬಿಜೆಪಿ ಸರ್ಕಾರವು ದಲಿತರ ಮತ ಬ್ಯಾಂಕ್ ಆಗಿ ಒಳ ಮೀಸಲಾತಿ ಜಾರಿ ಮಾಡಿಲ್ಲ, ದೀನ ದಲಿತರ ಉದ್ಧಾರಕ್ಕಾಗಿ ಒಳ ಮೀಸಲಾತಿ ಜಾರಿ ಮಾಡಿದೆ. ಹಾಗಾಗಿ ದಲಿತರು ಬಿಜೆಪಿ ಪಕ್ಷಕ್ಕೆ ಬೆಂಬಲಿಸಬೇಕು ತಾಲೂಕಿನಲ್ಲಿ ಎಸ್ ಡಿ ದಿಲೀಪ್ ಕುಮಾರ್ ಅವರಿಗೆ ಅತಿ ಹೆಚ್ಚು ಮತಗಳ ನೀಡುವ ಮೂಲಕ ಜಯಶೀಲರನ್ನಾಗಿ ಮಾಡಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹರಿಯಾಣ ಸಂಸದ ಸಂಜಯ್ ಬಾಟಿಯ, ಬಿಜೆಪಿ ಅಭ್ಯರ್ಥಿ ಎಸ್ ಡಿ ದಿಲೀಪ್ ಕುಮಾರ್, ಪ ಪಂ ಅಧ್ಯಕ್ಷ ಅಣ್ಣಪ್ಪ ಸ್ವಾಮಿ, ಶಿವಕುಮಾರ್, ಕೀರ್ತಿ ಕುಮಾರ್, ರಘು ಬಿಎಸ್, ನರಸಿಂಹ ಮೂರ್ತಿ, ಶಂಕ್ರಣ್ಣ, ವಿದ್ಯಾಸಾಗರ್ , ಮುದ್ದಣ್ಣ, ಸುರೇಶ್ ಎನ್ ಡಿ, ಸಾವಿರಾರು ಕಾರ್ಯಕರ್ತರು ಹಾಜರಿದ್ದರು.
ವರದಿ
ಗುಬ್ಬಿ:ಶ್ರೀಕಾಂತ್