Document

ಬಾಲಕಿಯರ ವಸತಿ ಶಾಲೆಯ ಅವ್ಯವಸ್ಥೆ ಕಂಡು ಪೊರಕೆ ಹಿಡಿದು ಸ್ವಚ್ಛತೆಗೆ ಮುಂದಾದ ಲೋಕಾಯುಕ್ತ ಅಧಿಕಾರಿಗಳು..!

Janataa24 NEWS DESK

IMG 20230707 WA0015

ಪಾವಗಡ


ಪಾವಗಡ ಕಸ್ತೂರ ಬಾ ಬಾಲಕಿರ ವಸತಿ ಶಾಲೆಯಲ್ಲಿ ನೈರ್ಮಲ್ಯದಿಂದ ಕೂಡಿದ ವಸತಿ ನಿಲಯ ಕಂಡು ಲೋಕಾಯುಕ್ತ ಇನ್ಸ್ಪೆಕ್ಟರ್ ಸಲೀಂ ಅಹಮದ್ ಹಾಗೂ ಸಿಬ್ಬಂದಿ ಪೊರಕೆ ಹಿಡಿದು ಸ್ವಚ್ಛತೆಗೆ ಇಳಿದ ದೃಶ್ಯ ವಿಶೇಷವಾಗಿತ್ತು.

IMG 20230707 WA0013



ಪಾವಗಡ ಕರ್ತವ್ಯ ನಿರತ ಲೋಕಾಯುಕ್ತ ಇನ್ಸ್ಪೆಕ್ಟರ್ ಹಾಗೂ ತಂಡದವರು ಶುಕ್ರವಾರ ಬೆಳಿಗ್ಗೆ ಏಕ ಏಕಿ ಸರ್ಕಾರಿ ಆಸ್ಪತ್ರೆಗೆ ಬೇಟಿ ನೀಡಿ ಪರಿಶೀಲಿಸಿ ನಂತರ ಪಕ್ಕದಲ್ಲಿರುವ ಹೆಣ್ಣು ಮಕ್ಕಳ ಕಸ್ತೂರ ಬಾ ಬಾಲಕಿಯರ ವಸತಿ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ನೀಡಬೇಕಾದ ಮೂಲಭೂತ ಸೌಕರ್ಯ ವಂಚಿತಗೊಂಡಿರುವ ಹಿನ್ನೆಲೆಯಲ್ಲಿ ಮುಖ್ಯ ಶಿಕ್ಷಕರಿಗೆ ಹಾಗೂ ವಸತಿ ಶಾಲೆಯ ಸಿಬ್ಬಂದಿಗಳಿಗೆ ಮಾಹಿತಿ ಕೇಳಿದರು ಸರಿಯಾದ ಮಾಹಿತಿ ನೀಡಿಲ್ಲ.

IMG 20230707 WA0012



ಈ ವಸತಿ ಶಾಲೆಯಲ್ಲಿ ಸುಮಾರು 250ಹೆಣ್ಣು ಮಕ್ಕಳಿಗೆ ಮೂಲಭೂತ ಸೌಕರ್ಯ ನೀಡದೆ ವಂಚಿಸಲಾಗಿದೆ.

ಸ್ವಚ್ಛತೆ ಇಲ್ಲದೆ ಇರೋದನ್ನು ಕಂಡು ಸ್ವತಃ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಯವರು ಸ್ವಚ್ಛತೆ ಮಾಡಲು ಮುಂದಾಗಿದ್ದು ವಿಶೇಷವಾಗಿತ್ತು.

ಉತ್ತಮ ಶೌಚಾಲಯ ಇಲ್ಲ ಮಲಗಲು ವ್ಯವಸ್ಥೆ ಸಂಪೂರ್ಣವಾಗಿ ಹದೆಗೆಟ್ಟಿದೆ.

IMG 20230707 WA0011



ಮಕ್ಕಳೂ ಮಲಗುವ ಮಂಚದ ಮೇಲೆ ಬಟ್ಟೆ ಇಡುವ ಟ್ಯಾಂಕ್ಗಳು ಇಡುವ ವ್ಯವಸ್ಥೆ ಮಾಡಲಾಗಿದೆ.

ವಸತಿ ಶಾಲೆಯಲ್ಲಿ ಉತ್ತಮ ಬೆಳಕು ಇಲ್ಲ ಸರಿಯಾದ ಕುಡಿಯುವ ನೀರು ವ್ಯವಸ್ಥೆ ಯಾವುದು ಸಹ ನೀಡದೇ ಇರುವ ಬಗೆ ನೇರವಾಗಿ ಕಂಡ ಇನ್ಸ್ಪೆಕ್ಟರ್ ಕೊಠಡಿ ಸ್ವಚ್ಚತೆ ಮಾಡಿ ಎಷ್ಟು ವರ್ಷಗಳು ಕಳೆದಿದೆ ಎಂಬುದಾಗಿ ಹೇಳಿ ಟಿವಿ. ಮತ್ತು ಸಿಸಿ ಟಿವಿ ಮೇಲೆ ಇದ್ದ ಧೂಳನ್ನು ಬಟ್ಟೆ ತೆಗೆದುಕೊಂಡು ಸ್ವತಃ ಒರೆಸುವ ಮೂಲಕ ಸಿಬ್ಬಂದಿಗೆ ಮಾದರಿಯಾದರು.

IMG 20230707 WA0016



ಕುಡಿಯುವ ನೀರಿನ ಟ್ಯಾಂಕಲ್ಲಿ ಸ್ವಚ್ಛತೆ ಇಲ್ಲ ಶೌಚಾಲಯ ಸ್ವಚ್ಛತೆ ಇಲ್ಲ ಸಂಪೂರ್ಣ ಸ್ವಚ್ಛತೆ ಇಲ್ಲದ ಕಂಡು ಬೇಸರ ವ್ಯಕ್ತಪಡಿಸಿದ ಲೋಕಾಯುಕ್ತ ಇನ್ಸ್ಪೆಕ್ಟರ್ ಸಲೀಂ.

ಮಕ್ಕಳಿಗಾಗಿ ಬಳಕೆಯಾಗಬೇಕಾದ ಮೇಜು ಕುರ್ಚಿಗಳು ಹಾಸಿಗೆಗಳು ಗುಜರಿಯಲ್ಲಿ ಕೊಳೆಯುವ ರೀತಿಯಲ್ಲಿ ಬಿದ್ದಿವೆ.



ಈ ಶಾಲೆಯಲ್ಲಿ ತಂದೆ ಅಥವಾ ತಾಯಿ ಇಲ್ಲಾ ಹಾಗೂ ಹಸಿದು ಹೋದಂತಹ ಪೋಷಕರ ಮಕ್ಕಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಾರೆ.

ಮಕ್ಕಳಿಗೂ ಮತ್ತು ಶಿಕ್ಷಕರಿಗೂ ಜೀವನದಲ್ಲಿ ಯಾವರೀತಿ ಗುರ್ತಿಸಿ ಕೊಳ್ಳಬೇಕು ಎಂಬುದಾಗಿ ಬುದ್ಧಿ ಮಾತು ಹೇಳಿದರು.

IMG 20230707 WA0014



ಹೋಗುವ ವೇಳೆ ಸ್ವಚ್ಚತೆ ಕಾಪಾಡಿ ಮಕ್ಕಳ ಆರೋಗ್ಯ ಕಾಪಾಡಿ ಇಲ್ಲದಿದ್ದರೆ ಮತ್ತೆ ನಾನೇ ಬಂದು ಸ್ವಚ್ಛತೆ ಮಾಡುತ್ತೇನೆ ಎಂಬುದಾಗಿ ಮುಖ್ಯ ಶಿಕ್ಷಕರ ಸಿಬ್ಬಂದಿಗೆ ಹೇಳುವ ಮೂಲಕ ಹಿಂತಿರುಗಿದ್ದು ವಿಶೇಷವಾಗಿತ್ತು.

ವರದಿ

ಇಮ್ರಾನ್ ಉಲ್ಲಾ.ಪಾವಗಡ.

Document

Leave a Reply

Your email address will not be published. Required fields are marked *