ಪಾವಗಡ: ಇಮ್ರಾನ್ ಉಲ್ಲಾ
ಪೋಲಿಸಪ್ಪನ ತಾಯಿಗೆ ಪೆನ್ಷನ್ ನೀಡುವುದಾಗಿ ಹೇಳಿ ಕಿವಿಯಲ್ಲಿದ್ದ ಓಲೆ ಕಸಿದು ಪರಾರಿ ಆಗುತ್ತಿದ್ದ ಆಂಧ್ರ ಮೂಲದ ನರೇಂದ್ರ (35)ಎಂಬುವನನ್ನು ಸ್ಥಳೀಯಯರು ಹಿಡಿದುಕೊಟ್ಟಿದ್ದಾರೆ.

ಪಾವಗಡ ತಾಲೂಕಿನ ಬೊದುಬೆಟ್ಟ ಗ್ರಾಮದ 80 ವರ್ಷ ವಯಸ್ಸಿನ ಗಂಗಮ್ಮ ಎಂಬುವ ವೃದ್ಧೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಪರಿಚಯವಾದ ನರೇಂದ್ರ ಎಂಬ ವ್ಯೆಕ್ತಿ ಮೂಲತಹ ಆಂದ್ರದ ಅನಂತಪುರ ಗ್ರಾಮದವನು ಎಂಬುದಾಗಿ ತಿಳಿದು ಬಂದಿದೆ.
ಈತ ವೃದ್ದೆಗೆ ಮೂವತ್ತು ಸಾವಿರ ಪೆನ್ಷನ್ ಕೊಡಿಸುವುದಾಗಿ ಹೇಳಿ ಬ್ರೈಟ್ ಫ್ಯೂಚರ್ ಕಂಪ್ಯೂಟರ್ ಕೆಂದ್ರಕ್ಕೆ ಕರೆದೋಯ್ದು ಅಲ್ಲಿ ವೃದ್ದೆಯ ಕಿವಿಯಲ್ಲಿ ಇದ್ದ ಸುಮಾರು ಹತ್ತು ಗ್ರಾಮ ಚಿನ್ನದ ಓಲೆಯನ್ನು ಯಾಮಾರಿಸಿಕೊಂಡು ಹೋಗುವಂತಹ ವೇಳೆಯಲ್ಲಿ ಸಾರ್ವಜನಿಕರ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾನೆ.
ನಂತರ ಸ್ಥಳಿಯರು ಪಾವಗಡ ಪೋಲಿಸರ ವಶಕ್ಕೆ ಈತನನ್ನು ಹಿಡಿದು ಕೊಟ್ಟಿರುತ್ತಾರೆ.