Janataa24 NEWS DESK
CN Halli: ಸುಪ್ರೀಂ ಕೋರ್ಟ್‌ನ CJI ಗವಾಯಿ ರವರಿಗೆ ಶೂ ಎಸೆದ ವಕೀಲನ ವಿರುದ್ಧ ಕಠಿಣ ಕ್ರಮಕ್ಕೆ ಭೀಮ್ ಸೇನೆಯ ಆಗ್ರಹ.

ಚಿಕ್ಕನಾಯಕನಹಳ್ಳಿ,: ಭಾರತದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಅವರ ಮೇಲೆ ಅಕ್ಟೋಬರ್ 6, 2025ರಂದು ನ್ಯಾಯಾಲಯದ ಕಲಾಪದ ವೇಳೆ ಶೂ ಎಸೆದ ಘಟನೆ ದೇಶದ ನ್ಯಾಯಾಂಗದ ಗೌರವಕ್ಕೆ ಧಕ್ಕೆಯಾಗಿದೆ ಎಂದು ಕರ್ನಾಟಕ ಭೀಮ್ ಸೇನೆ (ರಿ) ತಾಲ್ಲೂಕು ಸಮಿತಿಯ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ಸಂಘಟನೆಯ ಪರವಾಗಿ ಇಂದು ತಾಲ್ಲೂಕು ಕಚೇರಿಯಲ್ಲಿ ತಹಸೀಲ್ದಾರ್ ಅವರ ಮೂಲಕ ಕೇಂದ್ರ ಗೃಹ ಸಚಿವರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಲಾಗಿದೆ .
ಮನವಿಯಲ್ಲಿ, “ಸಂವಿಧಾನ ವಿರೋಧಿ ಮತ್ತು ಜಾತಿವಾದಿ ಮನೋಭಾವದ ಹಿರಿಯ ವಕೀಲ ಕಿಶೋರ್ ಕುಮಾರ್ ಅವರನ್ನು ತಕ್ಷಣ ಬಂಧಿಸಿ ಜೈಲಿಗೆ ಕಳುಹಿಸಬೇಕು ಹಾಗೂ ಗಡಿಪಾರು ಮಾಡಬೇಕು. ಇಂತಹ ಕೃತ್ಯಗಳು ನ್ಯಾಯಾಂಗದ ಸ್ವಾತಂತ್ರ್ಯವನ್ನು ಧಿಕ್ಕರಿಸುವಂತಿವೆ ಮತ್ತು ಸಂವಿಧಾನವನ್ನು ದಿಕ್ಕು ತಪ್ಪಿಸಲು ಉದ್ದೇಶಿತವಾದ ಷಡ್ಯಂತ್ರದ ಭಾಗವಾಗಿವೆ,” ಎಂದು ಭೀಮ್ ಸೇನೆ ಮನವಿ ಪತ್ರದಲ್ಲಿ ಉಲ್ಲೇಖಿಸಿದೆ.
ಇದಲ್ಲದೆ, “ಈ ವಕೀಲನ ಹಿಂದಿರುವ ಶಕ್ತಿ ಕೇಂದ್ರಗಳು ಯಾರು, ಸಂವಿಧಾನದ ವಿರೋಧಿಗಳು ಹಾಗೂ ದೇಶದ ದ್ರೋಹಿಗಳು ಯಾರ್ಯಾರು ಎಂಬುದರ ಕುರಿತು ಕೇಂದ್ರ ತನಿಖಾ ಸಂಸ್ಥೆಗಳ ಮೂಲಕ ನಿಖರ ತನಿಖೆ ನಡೆಸಬೇಕು,” ಎಂದು ಸಂಘಟನೆ ಆಗ್ರಹಿಸಿದೆ.
ಸಮಾಜ ಮಾಧ್ಯಮಗಳಲ್ಲಿ ಜಾತಿವಾದಿ ಕಾಮೆಂಟ್‌ಗಳು ಮಾಡುತ್ತಿರುವವರ ಹಾಗೂ ಆರೋಪಿಗೆ ಬೆಂಬಲ ವ್ಯಕ್ತಪಡಿಸುತ್ತಿರುವವರ ಮೇಲೂ ಪ್ರಕರಣ ದಾಖಲಿಸಬೇಕೆಂದು ಅವರು ಸರ್ಕಾರವನ್ನು ಒತ್ತಾಯಿಸಿದರು.
ತಾಲ್ಲೂಕು ಸಮಿತಿ ಅಧ್ಯಕ್ಷ ರಂಗನಾಥ್ ಅವರು ಪತ್ರಿಕಾ ಹೇಳಿಕೆಯಲ್ಲಿ,
“ಕೇಂದ್ರ ಸರ್ಕಾರ ತಕ್ಷಣ ಕಠಿಣ ಕ್ರಮ ಕೈಗೊಳ್ಳದಿದ್ದರೆ, ದೆಹಲಿಯ ಜಂತರ್ ಮಂತರ್‌ನಲ್ಲಿ ರಾಷ್ಟ್ರಮಟ್ಟದ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುವುದು,” ಎಂದು ಎಚ್ಚರಿಸಿದರು.
ಮನವಿ ಸಲ್ಲಿಸುವ ವೇಳೆ ನವೀನ್ ಲಕ್ಕೇನಹಳ್ಳಿ, ಬಸವರಾಜು ಹೊಸಹಳ್ಳಿ, ಶಶಿಕುಮಾರ್ ಯಲ್ಲದಕೆರೆ, ನಾಗರಾಜು ತೀರ್ಥಪುರ, ಗೋವರ್ಧನ್ ಸೇರಿದಂತೆ ಹಲವು ಕಾರ್ಯಕರ್ತರು ಹಾಜರಿದ್ದರು.
“ನ್ಯಾಯದ ಮೇಲೆ ದಾಳಿ ಅಂದರೆ ಸಂವಿಧಾನದ ಹೃದಯದ ಮೇಲೆ ಹಲ್ಲೆ,” ಎಂದು ಕಾರ್ಯಕರ್ತರು ಘೋಷಿಸಿದರು.
ವರದಿ: ದೇವರಾಜ್ ಆರ್ ಚಿಕ್ಕನಾಯಕನಹಳ್ಳಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.