Janataa24 NEWS DESK
ತುರುವೇಕೆರೆ: ತಾಲೂಕಿನ ಅರೆ ಮಲ್ಲೆನಹಳ್ಳಿ ಪಂಚಾಯಿತಿ ವ್ಯಾಪ್ತಿಗೆ ಬರುವ ಕ್ಯಾಮಸಂದ್ರ ಬಳಿ ಜೈರಾಮ್ ಎಂಬುವರ ತೋಟದ ಪಂಪ ಹೌಸ್ ನಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದೆ .ಇನ್ನು ರೈತನಾದ ಜಯರಾಮ್ ಬೆಳಿಗ್ಗೆ ಎದ್ದು ಎಂದಿನಂತೆ ಸರಿಸುಮಾರು 7.30 ರ ವೇಳೆಗೆ ತೋಟಕ್ಕೆ ತೆರಳಿ ಅಲ್ಲೇ ಇದ್ದ ಪಂಪ ಹೌಸ್ ಒಳಗೆ ಹೋಗಿ ತೋಟದ ಕೆಲಸಕ್ಕಾಗಿ ಪಂಪ್ ಹೌಸ್ ಒಳಗೆ ಇದ್ದ ಕೆಲಸದ ಉಪಕರಣಗಳನ್ನು ತೆಗೆಯಲು ಹೋಗಿದ್ದಾಗ.

ಒಳಗೆ ಕತ್ತಲೆ ಇದ್ದಿದ್ದರಿಂದ ನೇರವಾಗಿ ಕೈ ಹಾಕಲಾಗಿ ಅವರ ಕೈಗೆ ಚಿರತೆಯ ಕಾಲು ತಾಗಿದೆ ಎನ್ನಲಾಗಿದೆ, ಏನಿದು ಮೃದುವಾಗಿದೆ ಎಂದು.
ಸ್ವಲ್ಪ ಹೊರಗಡೆ ಬಂದು ಪಕ್ಕದ ತೋಟದ ರೈತನೊಬ್ಬ ಅದೇ ದಾರಿಯಲ್ಲಿ ಬರುತ್ತಿದ್ದು ,ಆತನಿಗೂ ಕರೆದು ತೋರಿಸಿದಾಗ ಇದು ಚಿರತೆ ಎಂದು ತಿಳಿದು ತಕ್ಷಣ ಪಂಪ ಹೌಸ್ ಬಾಗಿಲು ಮುಚ್ಚಿ ತಕ್ಷಣ ಅರಣ್ಯ ಇಲಾಖೆಗೆ ದೂರವಾಣಿ ಮುಖಾಂತರ ಕರೆ ಮಾಡಿ ಚಿರತೆ ಇರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ರೈತ ಜಯರಾಮ್ ತಮ್ಮ ಪಂಪ್ ಹೌಸ್ ಬಾಗಿಲನ್ನು ಯಾವಾಗಲೂ ತೆರೆದಿಡುತ್ತಿದ್ದರು ಎಂದು ತಿಳಿದುಬಂದಿದೆ ,ಹಾಗಾಗಿ ಚಿರತೆ ಒಳಗೆ ಹೋಗಿರಬಹುದು ಎನ್ನಲಾಗಿದೆ, ಜೊತೆಗೆ ಚಿರತೆಯ ಬಲಗಾಲಿಗೆ ಪೆಟ್ಟು ಬಿದ್ದಿದ್ದು ನೋವನ್ನು ತಾಳಲಾರದೆ ಪಂಪ್ ಹೌಸ್ ಒಳಗೆ ಹೋಗಿರಬಹುದು ಎಂದು ಊಹಿಸಲಾಗಿದೆ.
ಒಟ್ಟಾರೆ ಅರಣ್ಯ ಇಲಾಖೆ ಚಿರತೆ ಹಿಡಿಯುವಲ್ಲಿ ಯಶಸ್ವಿಯಾಗಿದೆ ಎಲ್ಲೋ ಒಂದು ಕಡೆ ಅರಣ್ಯ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇದೆ ಎಂಬುದು ಕೂಡ ತಿಳಿದುಬಂದಿದ್ದು.

ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ತುರುವೇಕೆರೆ ತಾಲೂಕಿನಲ್ಲಿ ಅರಣ್ಯ ಇಲಾಖೆಗೆ ಸಂಬಂಧಪಟ್ಟ ಸಿಬ್ಬಂದಿಗಳನ್ನು ನಿಯೋಜನೆ ಮಾಡಬೇಕು, ಯಾಕೆಂದರೆ ತುರುವೇಕೆರೆ ತಾಲೂಕಿನ ಸುತ್ತಮುತ್ತ ಪದೇ ಪದೇ ಚಿರತೆಗಳು ಪ್ರತ್ಯಕ್ಷವಾಗಿ ರೈತರು ಸಾಕಿರುವ ಮೇಕೆ ಕುರಿ ಪ್ರಾಣಿಗಳನ್ನು ಬೇಟೆಯಾಡುತ್ತಿರುವುದು ಕಂಡು ಬಂದಿದೆ.

ಇದಕ್ಕೆ ಸಂಬಂಧಪಟ್ಟ ಇಲಾಖೆ ಯಾವ ರೀತಿ ಕ್ರಮ ಕೈಗೊಳ್ಳುತ್ತದೆ ಎಂದು ಕಾದುನೋಡಬೇಕು, ಇದೇ ವೇಳೆ ಅರಣ್ಯ ಇಲಾಖೆ ಸಿಬ್ಬಂದಿಗಳು ,ಆರಕ್ಷಕ ಸಿಬ್ಬಂದಿಗಳು, ನೂರಾರು ಸಾರ್ವಜನಿಕರು ಸ್ಥಳದಲ್ಲಿದ್ದರು.
ವರದಿ
ತುರುವೇಕೆರೆ: ಮಂಜುನಾಥ್