Janataa24 NEWS DESK
Womens Day: ಸಂವಿಧಾನಾತ್ಮಕ ಅವಕಾಶಗಳಿಂದ ಮಹಿಳೆಯರು ಅಭಿವೃಧ್ಧಿಯಾಗಬೇಕು: ಜಾನಕಿರಾಮ್

ಪಾವಗಡ: ಸ್ವತಂತ್ರ ಭಾರತದ ಸಂವಿಧಾನದಲ್ಲಿ ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳ ವೀಶೇಷ ಅವಕಾಶಗಳನ್ನು ನೀಡಿದ್ದಾರೆ ಈ ಅವಕಾಶಗಳಿಂದ ಅಭಿವೃದ್ಧಿಯಾಗಬೇಕು ಎಂದು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಜಾನಕಿರಾಮ್ ರವರು ಹೇಳಿದರು.
ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ(Womens Day)ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಮನೆಯ ಹೆಣ್ಣು ಮಕ್ಕಳು ಸಮಾಜದ ಮುಖ್ಯ ವಾಹಿನಿಗೆ ಬಂದು ಮಹಿಳೆಯರು ಮುಂದೆ ಬರಬೇಕು. ನಂತರ ಅಭಿವೃದ್ದಿ ಪಥದತ್ತ ಸಾಗಿದರೆ ಮಾತ್ರ ನಾವು ಅಭಿವೃದ್ಧಿ ಯಾಗಬಹುದು ಎಂದು ತಿಳಿಸಿದರು.
ಸಂಪ್ರದಾಯಗಳು ಇರಬೇಕು ಆದರೆ ಆ ಮೌಡ್ಯ ಸಂಪ್ರದಾಯಗಳಿಂದ ಜೀವಕ್ಕೆ ಕುತ್ತು ಬರುವಂತಿರಬಾರದು ಎಂದು ಎಲ್ಲಾ ಹೆಣ್ಣು ಮಕ್ಕಳು ಶಿಕ್ಷಣ ವಂತರಾಗಬೇಕು ಎಂದು ಆಭಿಪ್ರಾಯಪಟ್ಟರು.
ಗ್ರಾಮೀಣಾ ಭಾಗದಲ್ಲಿ ಕೃಷಿ ಕೂಲಿ ಚಟುವಟಿಕೆಗಳು ಬೆಳಗ್ಗೆಯಿಂದ ಸಂಜೆವರೆಗೂ ಕೆಲಸ ಮಾಡಿದರೂ ಕೇವಲ 200ರೂಪಾಯಿ ನೀಡುತ್ತಾರೆ. ಆದರೆ ಮನರೇಗಾ(MGNREGA)ದಲ್ಲಿ ಇಂಜಿನಿಯರ್ ರವರು ಗುರ್ತಿಸಿದ ಕೆಲಸವನ್ನು ನಾವು ಬಿಡುವಿನ ವೇಳೆಯಲ್ಲಿ ಕೆಲಸ ಮಾಡಬಹುದು, ದಿನಕ್ಕೆ 316 ರೂಪಾಯಿ ನೀಡಲಾಗುವುದು. ಪ್ರತಿಕುಟುಂಬಕ್ಕೆ
ವಾರ್ಷಿಕವಾಗಿ 31600 ಕೂಲಿ ಪಡೆಯುವ ಅವಕಾಶ ಇರುತ್ತದೆ. ಮನರೇಗಾ ಯೋಜನೆ ಹೆಣ್ಣು ಮಕ್ಕಳಿಗೆ ಶಕ್ತಿಯನ್ನು ನೀಡುತ್ತದೆ. ಮುಂದೆ ಯಾವುದೇ ಕಾರಣಕ್ಕೂ ಬೇರೆ ಯಾರಿಗೂ ಉದ್ಯೋಗ ಚೀಟಿ ಕೊಡ ಬಾರದು ನೀವೇ ಕೆಲಸ ಮಾಡು ಅಭಿವೃದ್ಧಿಯಾಗಬೇಕು ವಿವರಿಸಿದರು.
ನಂತರ ಜಿಲ್ಲಾ FES ಸಂಸ್ಥೆಯ ಜಿಲ್ಲಾ ಸಂಯೋಜಕರಾದ ಸೋಮ್ ಕುಮಾರ್ ರವರು ಮಾತನಾಡಿ, ಉದ್ಯಮ ಶೀಲ , ಹೈನುಗಾರಿಕೆ ಇತರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಬಲೀಕರಣವಾಗುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಸಮಾಜದ ಮುಖ್ಯವಾಹಿನಿಗೆ ಯಾವುದೇ ಲಿಂಗತಾರತಮ್ಯ ವಿಲ್ಲದೇ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿಕೊಡುವುದೇ ಮಹಿಳಾ ದಿನಾಚರಣೆಯ ಆಶಯವಾಗಿದೆ.
ಈ ವೇಳೆ ತಾಪಂ ಸಹಾಯಕ ನಿರ್ದೇಶಕರು ರಂಗನಾಥ , ತಾಪಂ ಯೋಜನಾಧಿಕಾರಿ ಮಲ್ಲಿಕಾರ್ಜುನ, ಮನರೇಗಾ ತಾಲ್ಲೂಕು ಐಇಸಿ ಸಂಯೋಜಕರು ಶ್ರೀಕಾಂತ್,FES ನ ಸಂಯೋಜಕರು ಗಂಗಾಮಣಿ ಆಶ್ವಿನಿ, NRLM ಸಿಬ್ಬಂದಿ ವಿಜಯ ಕೃಷ್ಣ, ಸರಿತಾ ಹಾಗೂ ಗ್ರಾಮಕಾಯಕ ಮಿತ್ರರು ಬಿಎಫ್ಟಿ ರವರು ಸಂಜೀವಿನಿ ಸಂಘದ ಸದಸ್ಯರು, ಮನರೇಗಾ ಕೂಲಿಕಾರರು ಇದ್ದರು.
ವರದಿ: ಇಮ್ರಾನ್ ಉಲ್ಲಾ ಪಾವಗಡ.
https://www.janataa24.com/swami-japananda-swami-is-saving-life-by-giving-water-to-the-dumb-creatures/
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ.
https://chat.whatsapp.com/Jf6jZ0gyQAEA5GBRpHnkrv
Subscribe YouTube