Janataa24 NEWS DESK

ಮಧುಗಿರಿ: ವೈದ್ಯರ ದಿನಾಚರಣೆ ಅಂಗವಾಗಿ ಮಧುಗಿರಿ ನಗರದ ಕಾರ್ಡಿಯಲ್ ಇಂಟರ್‌ನ್ಯಾಶನಲ್ ಶಾಲೆಯ ಮಕ್ಕಳಿಂದ ವಿಶೇಷವಾಗಿ ವೈದ್ಯರ ದಿನವನ್ನು ಆಚರಿಸಲಾಯಿತು.

ಮಧುಗಿರಿಯ ಹಲವು ಆಸ್ಪತ್ರೆಗಳಿಗೆ ಕಾರ್ಡಿಯಲ್ ಶಾಲೆಯ ಮಕ್ಕಳು ಭೇಟಿ ನೀಡಿ ಹಲವಾರು ವೈದ್ಯರಿಗೆ ವಿಶೇಷವಾಗಿ ಗೌರವಿಸಲಾಯಿತು.

ವೈದ್ಯರ ದಿನಾಚರಣೆಯ ನಿಮಿತ್ತ ಕಾರ್ಡಿಯಲ್ ಇಂಟರ್‌ನ್ಯಾಶನಲ್ ಸ್ಕೂಲ್ ಆಡಳಿತಾಧಿಕಾರಿ ಮಧುಕರ್ ಸೂಡ, ಪ್ರಾಂಶುಪಾಲ ವಿನೋದ್ ಕುಮಾರ್ ಪಿ ಎಸ್, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿವರ್ಗ ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.
