Janataa24 NEWS DESK

ಗುಬ್ಬಿ : ಕರಾಟೆ ಚಾಂಪಿಯನ್ ಶಿಪ್ ನಲ್ಲಿ ತುಮಕೂರು ಜಿಲ್ಲೆಯಲ್ಲಿ ಮೊಟ್ಟ ಮೊದಲ ಬಾರಿಗೆ ಚಿನ್ನದ ಪದಕ ಪಡೆದ ಅರುಣ್ ಕುಮಾರ್ ಎಚ್ ಎನ್ .
ಇತ್ತಿಚೆಗೆ ದೆಹಲಿಯಲ್ಲಿ ದಿನಾಂಕ 21ರಿಂದ ಜೂನ್ 23ರ ವರೆಗೆ ನಡೆದ ಕರಾಟೆ ಚಾಂಪಿಯನ್ ಶಿಪ್ ಆಲ್ ಇಂಡಿಯಾ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕದಿಂದ 17 ಮಂದಿ ಕ್ರೀಡಾಪಟುಗಳು ಆಯ್ಕೆಯಾಗಿದ್ದು ಅದರಲ್ಲಿ ಕರ್ನಾಟಕದಲ್ಲಿ ಆರು ಮಂದಿ ಕ್ರೀಡಾಪಟುಗಳು ಜಯಶೀಲರಾಗಿದ್ದಾರೆ.
ತುಮಕೂರು ಜಿಲ್ಲೆಯ ಅರುಣ್ ಕುಮಾರ್ ರವರು ಕರಾಟೆಯ (ಕುಮುತೆ ) ಯಲ್ಲಿ ಸೀನಿಯರ್ 84ಕೆ ಜಿ ವಿಭಾಗದಲ್ಲಿ ಕರ್ನಾಟಕದ ತುಮಕೂರು ಜಿಲ್ಲೆಗೆ ಚಿನ್ನದ ಪದಕವನ್ನು ತಂದುಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ.
ಆಗಸ್ಟ್ ನಲ್ಲಿ ನಡೆಯುವ ಏಶಿಯನ್ ಕರಾಟೆ ಚಾಂಪಿಯನ್ ಶಿಪ್ ಗೆ ಭಾಗವಹಿಸಲು ಹೆಚ್ಚಿಸಿದ್ದಾರೆ.
ಇಂತ ಗ್ರಾಮೀಣ ಪ್ರತಿಭೆಗಳಿಗೆ ಸಂಘ ಸಂಸ್ಥೆಗಳು ಆರ್ಥಿಕವಾಗಿ ನೆರವು ನೀಡಿದರೆ ಭಾರತ ದೇಶಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಾರೆ ಎಂದು ಕರಾಟೆ ಪ್ರಾಂಶುಪಾಲರಾದ(ಕಿಯೋಶಿ ) ಧನಂಜಯ ಎಸ್ ರವರು ಸಂತೋಷ ವ್ಯಕ್ತಪಡಿಸಿದರು .
ನಂತರ ಅರುಣ್ ಕುಮಾರ್ ಮಾತನಾಡಿ ಸುಮಾರು ಏಳು ವರ್ಷಗಳಿಂದ ತರಬೇತಿಯನ್ನು ಪಡೆಯುತ್ತಿದ್ದು ಎರಡು ಬಾರಿ ಸಿಲ್ವರ್ ಒಂದು ಬಾರಿ ಚಿನ್ನದ ಪದಕವನ್ನು ಗೆದ್ದಿದ್ದೇನೆ.
ಗುಬ್ಬಿಯಲ್ಲಿ ಕರಾಟೆ ತರಗತಿಯನ್ನು ಆರಂಭಿಸಿದ್ದೇನೆ ಗ್ರಾಮೀಣ ಭಾಗದ ಯುವಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು.ಏಷ್ಯಾ ದಲ್ಲಿ ನಡೆಯುವ ಕರಾಟೆ ಪಂದ್ಯದಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಯಾವುದಾದರೂ ಸಂಘ ಸಂಸ್ಥೆಗಳು ಆರ್ಥಿಕವಾಗಿ ಸಹಾಯ ನೀಡಿದರೆ ತರಬೇತಿ ಪಡೆಯಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ವರದಿ :ಶ್ರೀಕಾಂತ್ ಗುಬ್ಬಿ