Janataa24 NEWS DESK
Turuvekere: ಎರಡನೇ ವರ್ಷದ ಶಿವರಾತ್ರಿ ಸಂಭ್ರಮ ಇಷ್ಟಾರ್ಥ ಸಿದ್ದಿಗೆ ಮುನೇಶ್ವರ ಸ್ವಾಮಿಯಲ್ಲಿ ಭಕ್ತರ ಪ್ರಾರ್ಥನೆ.

ತುರುವೇಕೆರೆ: ತಾಲೂಕಿನ ಟಿ ಬಿ ಕ್ರಾಸ್ ಗ್ರಾಮದಲ್ಲಿರುವ ಶ್ರೀ ಮುನೇಶ್ವರ ಸ್ವಾಮಿಗೆ ವಿಶೇಷ ಪೂಜಾ ವಿಧಿ ವಿಧಾನವನ್ನು ಅರ್ಚಕರಿಂದ ನೆರವೇರಿಸಲಾಯಿತು ಇವತ್ತಿನ ವಿಶೇಷ ದಿನ ಕಳೆಗಟ್ಟಿದ ಶಿವರಾತ್ರಿ ಸಂಭ್ರಮ ನಾಡಿನಾದ್ಯಂತ ಆಚರಿಸುತ್ತಿದ್ದು, ತುರುವೇಕೆರೆ ತಾಲೂಕಿನ ಟಿ ಬಿ ಕ್ರಾಸ್ ಗ್ರಾಮದ ಮುನೇಶ್ವರ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ಹುತ್ತಕ್ಕೆ ವಿವಿಧ ಬಗೆಯ ಪುಷ್ಪದಿಂದ ಅಲಂಕಾರ ಮಾಡಿ ಹುತ್ತಕ್ಕೆ ಹಾಲನ್ನೆರದು ಗಣಪತಿ ಹೋಮವನ್ನು ಮಾಡಿ ಇಸ್ಟಾರ್ಥಸಿದ್ಧಿಗೆ ಅರ್ಚಕ ವೃಂದದಿಂದ ಪೂಜಾ ಕಾರ್ಯವನ್ನು ನೆರವೇರಿಸಲಾಯಿತು, ಇನ್ನು ಇದೇ ದಿನ ರಾತ್ರಿ ವಿಶೇಷವಾಗಿ ಶ್ರೀ ಮುನೇಶ್ವರ ಸ್ವಾಮಿಗೆ ದೀಪಾಲಂಕಾರದೊಂದಿಗೆ ಪೂಜಾ ಪೂಜಾ ಕೈಂಕರ್ಯ ನಡೆಯಲಿದ್ದು ಬೆಳಗಿನಿಂದಲೂ ಭಕ್ತರ ದಂಡು ಆಗಮಿಸುತ್ತಿದೆ, ಇಂದು ರಾತ್ರಿ ನಡೆಯುವ ವಿಶೇಷ ದೀಪಾಲಂಕಾರದ ಪೂಜೆಯನ್ನು ನೂರಾರು ಭಕ್ತಾದಿಗಳು ಶಿವರಾತ್ರಿ ಹಬ್ಬದ ಪ್ರಯುಕ್ತ ಸಡಗರ ಸಂಭ್ರಮವನ್ನು ಕಣ್ತುಂಬಿಸಿಕೊಳ್ಳಲಿದ್ದಾರೆ, ಇದರ ಜೊತೆಗೆ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗಾಗಿ ಅನ್ನ ದಾಸೋಹ ಕಾರ್ಯಕ್ರಮವು ಸಹ ಆಯೋಜನೆ ಮಾಡಲಾಗಿದ್ದು, ಭಕ್ತಾದಿಗಳಿಗೆ ವಿವಿಧ ಬಗೆಯ ಅನ್ನದಾನ ಬೂರಿ ಭೋಜನವಾದ ಒಬ್ಬಟ್ಟಿನ ಊಟ ಸಿದ್ಧವಾಗಿದ್ದು ಶಿವರಾತ್ರಿ ಸಂಭ್ರಮ ಜೋರಾಗಿದ್ದು ಶಿವರಾತ್ರಿ ಹಬ್ಬದ ಪ್ರಯುಕ್ತ ಈ ಎಲ್ಲಾ ಕಾರ್ಯಕ್ರಮದ ಆಯೋಜನೆಯನ್ನು ಗ್ರಾಮದ ಕರಿಯಣ್ಣ ಗೌಡರ ವಂಶಸ್ಥರು ಆಯೋಜಿಸಿದ್ದಾರೆ.
ಒಟ್ಟಾರೆ ಶಿವರಾತ್ರಿ ಹಬ್ಬದ ಪ್ರಯುಕ್ತ ಶ್ರೀ ಮುನೇಶ್ವರ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗುತ್ತಿದ್ದು, ಭಕ್ತರು ಮುಂಜಾನೆಯಿಂದ ದೇವಸ್ಥಾನಕ್ಕೆ ಆಗಮಿಸಿ, ಸರದಿ ಸಾಲಿನಲ್ಲಿ ನಿಂತು ಕುಟುಂಬ ಸಮೇತವಾಗಿ ಭಕ್ತರು ಶ್ರೀ ಮುನೇಶ್ವರ ಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು, ಭಕ್ತರು ತಮ್ಮಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಮಾಡುತ್ತಾ ಮುನೇಶ್ವರ ಸ್ವಾಮಿ ನಾಮ ಸ್ಮರಣೆ ಮಾಡುವ ಮೂಲಕ ದೇವರ ಕೃಪೆಗೆ ಪಾತ್ರರಾದರು, ಆಯೋಜಕರು ಯಾವುದೇ ಅಹಿತಕರ ಘಟನೆ ನಡೆಯದಂತೆ ಭಕ್ತರ ಆಗಮನ ಸೇರಿ ನಿರ್ಗಮನಕ್ಕೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದು, ಭಕ್ತರ ಮೆಚ್ಚುಗೆಗೆ ಪಾತ್ರರಾದರು. ಒಟ್ಡಿನಲ್ಲಿ ಶಿವರಾತ್ರಿ ಸಂಭ್ರಮ ಎಲ್ಲೆಯಡಿಯು ಮನೆ ಮಾಡಿದೆ, ತಾಲೂಕಿನಲ್ಲಿ ವಿವಿಧ ಹಲವು ದೇವಸ್ಥಾನಗಳಿಗೆ ಶಿವರಾತ್ರಿ ಹಬ್ಬದ ಪ್ರಯುಕ್ತ ತಾಲೂಕಿನ ಭಕ್ತರು ಕುಟುಂಬ ಸಮೇತರಾಗಿ ತೆರಳಿ ವಿಶೇಷ ಪೂಜೆ ಪ್ರಾರ್ಥನೆಯಲ್ಲಿ ತಲ್ಲೀನರಾಗಿರುವ ದೃಶ್ಯಗಳು ಸಾಮಾನ್ಯವಾಗಿವೆ.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.