Document

Pavagada: ರೊಪ್ಪ ಗ್ರಾಮ ಪಂಚಾಯಿತಿ ಸದಸ್ಯನ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ.

Janataa24 NEWS DESK 

 

Pavagada: ರೊಪ್ಪ ಗ್ರಾಮ ಪಂಚಾಯಿತಿ ಸದಸ್ಯನ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ.
Pavagada: ರೊಪ್ಪ ಗ್ರಾಮ ಪಂಚಾಯಿತಿ ಸದಸ್ಯನ ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ.

 

ಪಾವಗಡ ಪಟ್ಟಣದ ರೊಪ ಗ್ರಾಮ ಪಂಚಾಯತಿ ನಡೆರುವಂತಹ ಹಗರಣ ಭ್ರಷ್ಟಾಚಾರದ ಬಗ್ಗೆ ಅದೇ ಪಂಚಾಯತಿಯ ಸದಸ್ಯನಾದ ಜಿ.ಎನ್. ಹನುಮಂತರಾಯಪ್ಪ ಕಳೆದ ಮೂರು ದಿನಗಳಿಂದ ಪಂಚಾಯಿತಿ ಎದುರು ಟೆಂಟ್ ಹಾಕಿಕೊಂಡು ಪ್ರತಿಭಟನೆಗೆ ಕುಳಿತು ಇಂದಿಗೆ ಮೂರು ದಿನ ಆಗಿದೆ.

 

ದಿನೇ ದಿನೇ ಕಳೆದಂತೆ ಭ್ರಷ್ಟಾಚಾರ ಆಗಿರುವ ಹೊಸ ಹೊಸ ವಿಚಾರಗಳು ಹೊರ ಹಾಕುತ್ತಿರುವ ಸದಸ್ಯ ಹನುಮಂತರಾಯಪ್ಪ.

 

ಕಾನೂನು ಉಲ್ಲಂಘನೆ ಮಾಡಿರುವ ಲೇಔಟ್ ಮಾಫಿಯಾಗಳು.

 

ಬೇಕಾಬಿಟ್ಟಿ ಬಿಲ್ಲುಗಳು ಮಾಡಿರುವ ವಿಚಾರವಾಗಿ ಮತ್ತು 15 ನೇ ಹಣಕಾಸಿನಲ್ಲಿ ಆಗಿರುವವರ ಅವ್ಯವಹಾರ ಬಗ್ಗೆ.

 

ಶಿರಾ ರಸ್ತೆಯಲ್ಲಿ ನಿರ್ಮಾಣವಾಗಿರುವ ಸರ್ವೇ ನಂಬರ್ 94/3 ರಲ್ಲಿ ಬೃಹತ್ ಲೇಔಟಿನ ಸಿ ಎ ಸೈಟ್ ಗುಡ್ಡದ ಮೇಲೆ ನೀಡಿರುವುದು ತನಿಖೆ ಆಗಬೇಕು.

 

ಈ ಪಂಚಾಯತಿಯಲ್ಲಿ ಹಣ ಡ್ರಾ ಆದಮೇಲೆ ಆ ವಿಚಾರವಾಗಿ ಸಭೆಗೆ ವಿಷಯ ಇಡುವುದು ಇದೇ ಮೊದಲ ಬಾರಿಗೆ ನೋಡಿದ್ದೇವೆ.

 

ಪಂಚಾಯತಿ ವಿಚಾರಗಳ ಬಗ್ಗೆ ಸದಸ್ಯರಾಗಿ ನಾ ಕೇಳಿದರು ಸಹ ಕೊಡುವುದಿಲ್ಲ.

 

ಮೂರುದಿನಗಳ ನಂತರ ಪ್ರತಿಭಟನಾ ಸ್ಥಳಕ್ಕೆ ತಾಲೂಕ್ ಪಂಚಾಯತಿ ಏಡಿ ಭೇಟಿ ನೀಡಿ ಮಾಹಿತಿ ಪಡೆದರು.

 

ಅಧ್ಯಕ್ಷ, ಪಿಡಿಒ ಇಬ್ಬರ ಭ್ರಷ್ಟಾಚಾರದ ಕುರಿತು ಸಂಬಂಧ ಪಟ್ಟವರಿಗೆ ದೂರು ದಾಖಲಿಸಿದ್ದೇನೆ. ಇದಕ್ಕೊಂದು ತಾರ್ಕಿಕ ಅಂತ್ಯ ಕಾಣುವ ತನಕ ಹೋರಾಟ ಮುಂದುವರೆಸುತ್ತೇನೆ ಎಂದು ತಿಳಿಸಿದರು

 

ರೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ರೂಪ ರವರು ಅಧಿಕಾರ ವಹಿಸಿಕೊಂಡ ದಿನದಿಂದ ಇಂದಿನವರೆಗೂ ಹಲವಾರು ಬಡಾವಣೆಗಳು ನಿರ್ಮಾಣ ಮಾಡಲು ಅನುಮೋದನೆ ಕೊಡಲಾಗಿದೆ,ಸರ್ವೆ ನಂಬರ್ ಶಶಿಕುಮಾರ್ ವಿ. 98/1 A 22 ಎಕೆರೆ, ಸರ್ವೆ ನಂಬರ್ 221 /1/22/ 2 ಮೀನಾ ನರಸಿಂಹ 5 ಎಕೆರೆ,ಸರ್ವೆ ನಂಬರ್ 128/1 ಶೀಲಾ 2 ಎಕೆರೆ 23 ಗುಂಟೆ,ಉಮಾಶಂಕರ್ ನಾಯ್ಕ್ ಸ.ನಂ 335 /4, 335/5 2 ಎಕೆರೆ,ವೆಂಕಟಲಕ್ಷ್ಮಮ್ಮ 332/1 4 ಎಕರೆ 20 ಗುಂಟೆ,ಪರಮೇಶ್ವರಪ್ಪ ಸ.ನಂ 129 /29 2 ಎಕರೆ,ಹನುಮಂತರೆಡ್ಡಿ ಸ.ನಂ 240/2, 240/4 7 ಎಕರೆ 20 ಗುಂಟೆ,ಶ್ರೀನಿವಾಸ 129/19 , 1 ಎಕರೆ 20 ಗುಂಟೆ, ಅನಿಲ್ ಕುಮಾರ್ ಸ .ನಂ 335/2 , 4 ಎಕರೆ, ರವಿ ಸ.ನಂ.129/27, 129/28, 3 ಎಕರೆ 10 ಗುಂಟೆ ಭೂಪರಿವರ್ತನೆಯಾದ ಜಮೀನುಗಳನ್ನು ಬಡಾವಣೆ ಖಾತೆಗಳಿಗೆ ಅನುಮೋದನೆ ನೀಡಲಾಗಿದೆ,

ಪಂಚಾಯಿತಿ ಅಬಿವೃದ್ಧಿ ಅಧಿಕಾರಿಯಾಗಿ ವಿಜಯ್ ಕುಮಾರ್ ಬಂದಾಗಿನಿಂದ ಒಟ್ಟು 56 ಎಕರೆ 30 ಗುಂಟೆ ಭೂಪರಿವರ್ತನೆಯಾದ ಜಮೀನುಗಳನ್ನು ಬಡಾವಣೆ ಮಾಡಿ ಖಾತೆ ಮಾಡಲು ಅನುಮೋದನೆ ನೀಡಲಾಗಿದೆ, ಯಾವುದೇ ರೀತಿಯ ದಾಖಲೆಗಳನ್ನು ಟಪಾಲು ಗೆ ಕೊಟ್ಟು ಸ್ವೀಕೃತಿ ಪಡೆಯದೇ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಮಾಡಿದ್ದಾರೆ ಆದರೆ ಶ್ರೀನಿವಾಸ್ ಮಾಲಿಕತ್ವದ ಸ.ನಂ 112/2, 3 ಎಕರೆ 35 ಗುಂಟೆ ಜಮೀನಿನ ಬಡಾವಣೆಗೆ ಸಂಬಂದಿಸಿದ ಎಲ್ಲಾ ದಾಖಲೆಗಳನ್ನು ಕೊಟ್ಟು ಸ್ವೀಕೃತಿ ಪಡೆಯಲಾಗಿದೆ ಆದರೆ ಬೇರೆ ಬಡಾವಣೆಗಳಿಗೆ ಇಲ್ಲದಿರುವ ಕಾನೂನು ಈ ಬಡಾವಣೆಗೆ ಮಾತ್ರ ಯಾಕೆ ?

 

ಭ್ರಷ್ಟಾಚಾರ ಆಗಿರುವ ಬಗ್ಗೆ ತನಿಖೆ ಆಗಬೇಕು ರಾಜಕೀಯ ಮಾಡಿಕೊಂಡು ಇರುವ ಪಿಡಿಒ ಅಮಾನತು ಗೊಳಿಸಬೇಕು ಇಲ್ಲದ ವರ್ಗಾವಣೆ ಗಳಿಸಿ.

 

ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಜಾನಕಿ ರಾಮ್ ಈ ಹಿಂದೆ ಕನ್ನಮೆಡಿ ಪಂಚಾಯತಿ. ರಾಜವಂತಿ ಪಂಚಾಯಿತಿ ಸಿಕೆಪುರ ಪಂಚಾಯತಿ ಗಳಲ್ಲಿ ನಡೆದಂತಹ ಭ್ರಷ್ಟಾಚಾರ ಮಾಡಿರುವ ಪಿಡಿಒಗಳ ಬಗ್ಗೆ ಕ್ರಮ ಕೈಗೊಂಡು ಸಸ್ಪೆಂಡ್ ಮಾಡಿಸಿದರು ಅದರೆ ಪಕ್ಕದಲ್ಲಿರುವ ರೊಪ್ಪ ಪಂಚಾಯಿತಿ ಬಗ್ಗೆ ಹಲವು ಬಾರಿ ದಾಖಲೆ ಸಮೇತ ದೂರು ನೀಡಿದರು ಯಾಕೆ ಚಕಾರ ಎತ್ತುವುದಿಲ್ಲ ಇದರ ಒಳ ವರ್ಮ ಏನು ಎಂಬುದು ಸದಸ್ಯನ ಆರೋಪ.

 

ವರದಿ: ಇಮ್ರಾನ್ ಉಲ್ಲಾ. ಪಾವಗಡ

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.

Document

Leave a Reply

Your email address will not be published. Required fields are marked *