Document

Turuvekere: ಗ್ರಾ.ಪಂ.ಕೇಂದ್ರಗಳಲ್ಲಿ ಅರಿವು ಕೇಂದ್ರ ನಾಮಫಲಕ ಅನಾವರಣ.

Janataa24 NEWS DESK

Turuvekere: Unveiling of ARIVU center nameplate in Gram Panchayath Kendras.

Turuvekere Unveiling of awareness center nameplate in Gram.P.Kendras.

ತುರುವೇಕೆರೆ: ರಾಜ್ಯಾದ್ಯಂತ ಎಲ್ಲಾ ಗ್ರಾಮ ಪಂಚಾಯಿತಿಯ ಅರಿವು ಕೇಂದ್ರಗಳ ಮುಂಭಾಗ ಆಗಸ್ಟ್ 12ರಂದು ಗ್ರಂಥಪಾಲಕರ ದಿನಾಚರಣೆಯ ನಿಮಿತ್ತ ಲಾಂಛನ ಸಹಿತ ಅರಿವು ಕೇಂದ್ರದ ನಾಮಫಲಕವನ್ನು ಅಳವಡಿಸಬೇಕೆಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.

 

ರಾಜ್ಯ ಸರ್ಕಾರದ ಸುತ್ತೋಲೆಯ ಹಿನ್ನೆಲೆ ಇಂದು ತುರುವೇಕೆರೆ ತಾಲೂಕಿನ ,ಮಾಯಸಂದ್ರ ಹೋಬಳಿಯ ಸೊರವನಹಳ್ಳಿ ಗ್ರಾಮ ಪಂಚಾಯಿತಿಯ ಡಿಜಿಟಲ್ ಗ್ರಂಥಾಲಯದ ಮುಂಭಾಗ ಇಂದು ಅರಿವು ಕೇಂದ್ರದ ನಾಮಫಲಕವನ್ನು ಗ್ರಂಥಾಲಯದ ಮೇಲ್ವಿಚಾರಕರಾದ ಪ್ರೇಮ್ ಕುಮಾರ್ ಇವರ ಉಪಸ್ಥಿತಿಯಲ್ಲಿ ಗ್ರಾಮದ ಮುಖಂಡರುಗಳಿಂದ ನಾಮಫಲಕವನ್ನು ಅನಾವರಣಗೊಳಿಸಲಾಯಿತು.

 

ಇದೆ ವೇಳೆ ಗ್ರಂಥಾಲಯದ ಮೇಲ್ವಿಚಾರಕರಾದ ಪ್ರೇಮಕುಮಾರ್ ಮಾತನಾಡಿ, ಭಾರತದ ಗ್ರಂಥಾಲಯ ಚಳುವಳಿಯ ಪಿತಾಮಹ ಡಾ. ಎಸ್ ಆರ್ ರಂಗನಾಥನ್(ಶಿಯಾಳಿ ರಾಮಾಮೃತ ರಂಗನಾಥನ್) ಇವರು ಲೇಖಕರು ಶೈಕ್ಷಣಿಕ ಗಣಿತಜ್ಞ ಮತ್ತು ಗ್ರಂಥಪಾಲಕರಾಗಿದ್ದ ಇವರ ಜನ್ಮದಿನದ ಸ್ಮರಣಾರ್ಥಕವಾಗಿ ಪ್ರತಿ ವರ್ಷ ಆಗಸ್ಟ್ 12ರಂದು ಗ್ರಂಥಪಾಲಕರ ದಿನವನ್ನು ಆಚರಿಸುತ್ತಿದ್ದು, ಸರ್ಕಾರದ ಆದೇಶದಂತೆ ಆಚರಣೆಯನ್ನು ಗೌರವಪೂರ್ವಕವಾಗಿ ಅಭಿನಂದನೆಯನ್ನು ಸಲ್ಲಿಸಲಾಗುತ್ತದೆ ಎಂದರು.

 

ಇದೇ ಸಂದರ್ಭದಲ್ಲಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಮಂಜುನಾಥ್ ಆರ್, ಯಾದವ ಮುಖಂಡ ಕೃಷ್ಣಸ್ವಾಮಿ, ಶಿವಣ್ಣ, ಸೋಮಶೇಖರ್, ಚಂದ್ರು, ಅಮಾಸಯ್ಯ, ಲಕ್ಷ್ಮಯ್ಯ, ಕಾಟಯ್ಯ, ಮಂಜುನಾಥ್, ನೀರು ವಿತರಕ ಶಿವರಾಮಯ್ಯ, ಇವರುಗಳು ಅರಿವು ಕೇಂದ್ರದ ನಾಮಫಲಕ ಅನಾವರಣದ ವೇಳೆ ಉಪಸ್ಥಿತರಿದ್ದರು.

 

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

Document

Leave a Reply

Your email address will not be published. Required fields are marked *