Document

Turuvekere: ರಸ್ತೆ ಅಪಘಾತ KSRTC ಬಸ್ ಗುದ್ದಿ ಸ್ಥಳದಲ್ಲೇ ಯುವಕ ಸಾವು

Turuvekere: ರಸ್ತೆ ಅಪಘಾತ KSRTC ಬಸ್ ಗುದ್ದಿ ಸ್ಥಳದಲ್ಲೇ ಯುವಕ ಸಾವು

 

ತುರುವೇಕೆರೆ: ಮಂಜುನಾಥ್

ತುರುವೇಕೆರೆಯಿಂದ ಮಾಯಸಂದ್ರ ಹೋಗುವ ಮಾರ್ಗ ಮಧ್ಯೆ ಚಿಕ್ಕೋನಹಳ್ಳಿ ಗೇಟ್ ಬಳಿ ರಸ್ತೆ ಅಪಘಾತವಾಗಿದ್ದು, ತುರುವೇಕೆರೆ ಪಟ್ಟಣದಲ್ಲಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ (I T I) ವ್ಯಾಸಂಗ ಮಾಡುತ್ತಿದ್ದ ಶಶಿಧರ್ ಎಂಬ(19) ವರ್ಷದ ಯುವಕ ಇಂದು ಬೆಳಗ್ಗೆ 8:15ಕ್ಕೆ ತಮ್ಮ ಶಾಲೆಯಲ್ಲಿ ಪರೀಕ್ಷೆ ಬರೆಯಲು ತನ್ನ ದ್ವಿಚಕ್ರವಾಹನದಲ್ಲಿ ಸ್ವಗ್ರಾಮವಾದ ಮುದಿಗೆರೆ ಪಾಳ್ಯದಿಂದ ಹೊರಟು ರಾಷ್ಟ್ರೀಯ ಹೆದ್ದಾರಿ 150 ಎ ರಸ್ತೆಗೆ ಕಲ್ಪಿಸುವ ಚಿಕ್ಕೋನಹಳ್ಳಿ ಗೇಟ್ ಬಳಿ ತನ್ನ ಬೈಕ್(passion pro) ನಲ್ಲಿ ತಿರುವುಗೊಳ್ಳುವಾಗ ತುರುವೇಕೆರೆ ಕಡೆಯಿಂದ ಮೈಸೂರು ಕಡೆಗೆ ಸಂಚರಿಸುತ್ತಿದ್ದ ತಿಪಟೂರು ಘಟಕದ ಕೆ ಎಸ್ ಆರ್ ಟಿ ಸಿ ಬಸ್ಸು ಮತ್ತು ಬೈಕ್ ನಡುವೆ ಚಿಕ್ಕೋನಹಳ್ಳಿ ಗೇಟ್ ಬಳಿ ಈ ಅಪಘಾತ ವಾಗಿದ್ದು, ಬೈಕ್ ಚಾಲನೆ ಮಾಡುತ್ತಿದ್ದ ಯುವಕ (ಶಶಿಧರ್) 19 ವರ್ಷದ ಯುವಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

WhatsApp Image 2022 11 22 at 10.09.18 AM

ಇನ್ನು ಆ ಯುವಕನ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಚಿಕ್ಕೋನಹಳ್ಳಿ ಗೇಟ್ ಬಳಿ ಅಲ್ಲೇ ಸಮೀಪವಿರುವ ತುರುವೇಕೆರೆ ತಾಲೂಕಿನ ಶಾಸಕರಾದ ಮಸಾಲ ಜೈರಾಮ್ ರವರು ತಮ್ಮ ಫಾರಂ ಹೌಸ್ ನಲ್ಲಿ ಇದ್ದು ಅವರಿಗೆ ದೂರವಾಣಿ ಮೂಲಕ ಸ್ಥಳೀಕರು ಅಪಘಾತದ ಬಗ್ಗೆ ಮಾಹಿತಿ ನೀಡಿದ್ದು ಖುದ್ದು ಶಾಸಕರೇ ಸ್ಥಳಕ್ಕೆ ಆಗಮಿಸಿ ಸಾವನಪ್ಪಿದ ಯುವಕನ ಶವವನ್ನು ಶಾಸಕರು ಮತ್ತು ಸ್ಥಳಿಕರು ಸೇರಿ ತುರುವೇಕೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ, ಯುವಕನ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಇನ್ನು ಇದರ ಸಂಬಂಧ ತುರುವೇಕೆರೆ ಪಟ್ಟಣದ ಆರಕ್ಷ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಈ ಅಪಘಾತದ ಬಗ್ಗೆ ಮಾಹಿತಿ ಪಡೆದಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Screenshot 2022 11 22 113339
Document

Leave a Reply

Your email address will not be published. Required fields are marked *