Document

Turuvekere: ಫೆಬ್ರವರಿ 17ರಂದು ಶ್ರೀ ಆದಿಚುಂಚನಗಿರಿ ಸಮುದಾಯ ಭವನ ಲೋಕಾರ್ಪಣೆ.

Janataa24 NEWS DESK 

 

Turuvekere: ಫೆಬ್ರವರಿ 17ರಂದು ಶ್ರೀ ಆದಿಚುಂಚನಗಿರಿ ಸಮುದಾಯ ಭವನ ಲೋಕಾರ್ಪಣೆ.

 
Turuvekere Janataa24 NEWS

 

ತುರುವೇಕೆರೆ: ದಿನಾಂಕ 17-02-2025 ರ ಸೋಮವಾರದಂದು ಮಾಯಸಂದ್ರ ಟಿ ಬಿ ಕ್ರಾಸ್ ನ ತುಮಕೂರು ರಸ್ತೆಯಲ್ಲಿ ಶ್ರೀ ಆದಿಚುಂಚನಗಿರಿ ಮಠದಿಂದ ನಿರ್ಮಾಣವಾಗಿರುವ ಶ್ರೀ ಆದಿಚುಂಚನಗಿರಿ ಸಮುದಾಯ ಭವನದ ಲೋಕಾರ್ಪಣ ಸಮಾರಂಭವು ನಡೆಯಲಿದ್ದು, ಈ ಸಮಾರಂಭದ ರೂಪುರೇಷೆಗಳ ಬಗ್ಗೆ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರ ಅಧ್ಯಕ್ಷತೆಯಲ್ಲಿ ಕೆಲ ಮುಖಂಡರೊಂದಿಗೆ ಚರ್ಚಿಸಿದ್ದು,

 

ಇದೇ ವೇಳೆ ತುರುವೇಕೆರೆಯ ಮಯೂರ ಶಾಲಾ ಕಾಲೇಜುಗಳ ಆಡಳಿತಾಧಿಕಾರಿಯಾದ ಪ್ರೊಫೆಸರ್ ಪುಟ್ಟರಂಗಪ್ಪ ಮಾತನಾಡಿ ಈ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು, ಮಠಾಧೀಶರು, ಸಾರ್ವಜನಿಕರು, ವಿವಿಧ ಭಾಗಗಳಿಂದ ಆಗಮಿಸಿ ಪಾಲ್ಗೊಳ್ಳುವುದರಿಂದ ಇದೇ ತಿಂಗಳು ದಿನಾಂಕ 30-01-2025 ರ ಗುರುವಾರ ಬೆಳಿಗ್ಗೆ 8 ಗಂಟೆಗೆ ಮಾಯಸಂದ್ರ ಟಿ ಬಿ ಯಲ್ಲಿರುವ ಶ್ರೀ ಯವರ ಕುಟೀರದಲ್ಲಿ ಹೋಬಳಿಯ. ಎಲ್ಲಾ ಮುಖಂಡರು, ಒಳಗೊಂಡಂತೆ ಪೂರ್ವಭಾವಿ ಸಭೆಯೊಂದನ್ನು ಕರೆಯಲಾಗಿದ್ದು, ಈ ಸಭೆಗೆ ಮಾಯಸಂದ್ರ ಹೋಬಳಿಯ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರು, ಅಧ್ಯಕ್ಷರು, ಹಾಗೂ ಆಯಾ ಗ್ರಾಮದ ಗುಡಿ ಗೌಡರು, ನಾಯಕರು ಮುಖಂಡರು ಹಿರಿಯರು, ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಏನೆಲ್ಲ ರೂಪುರೇಷುಗಳ ಬಗ್ಗೆ ಚರ್ಚಿಸಲು ಪೂಜ್ಯರಾದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರು ನೇರವಾಗಿ ನಮ್ಮಗಳೊಂದಿಗೆ ಚರ್ಚಿಸಲಿದ್ದು ಶ್ರೀಗಳ ಸೂಚನೆಯಂತೆ ತಾವುಗಳೆಲ್ಲ ದಯಮಾಡಿ ಈ ಸಭೆಗೆ ಆಗಮಿಸಿ ತಮ್ಮ ಅಮೂಲ್ಯ ಸಲಹೆ ಮತ್ತು ಮಾರ್ಗದರ್ಶನಗಳನ್ನು ನೀಡುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕೆಂದು ವಿನಂತಿಸಿದರು.

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.


 

Document

Leave a Reply

Your email address will not be published. Required fields are marked *