Document

Turuvekere: ಸರ್ಕಾರಿ ಶಾಲೆಯಲ್ಲಿ ನಡೆದ 76ನೇ ಗಣರಾಜ್ಯೋತ್ಸವ, ಪುಟ್ಟ ಮಕ್ಕಳಿಂದ ಭಾಷಣ ಮತ್ತು ಮನೋರಂಜನೆ.

Janataa24 NEWS DESK 

 

Turuvekere: ಸರ್ಕಾರಿ ಶಾಲೆಯಲ್ಲಿ ನಡೆದ 76ನೇ ಗಣರಾಜ್ಯೋತ್ಸವ, ಪುಟ್ಟ ಮಕ್ಕಳಿಂದ ಭಾಷಣ ಮತ್ತು ಮನೋರಂಜನೆ.
Turuvekere, Republic Day 2025

 

ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿ ಸೊರವನಹಳ್ಳಿ ಜಿ ಎಲ್ ಪಿ ಎಸ್ ಶಾಲೆಯಲ್ಲಿ 76 ನೇ ಗಣರಾಜೋತ್ಸವ ವನ್ನ ಆಚರಿಸಲಾಯಿತು ಮೊದಲಿಗೆ ಡಾ. ಬಿ ಆರ್ ಅಂಬೇಡ್ಕರ್ ಹಾಗೂ ಮಹಾತ್ಮಗಾಂಧಿ ಜಿ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಹೂವು ಅರ್ಪಣೆ ಮಾಡುವುದರ ಮೂಲಕ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಂಜುನಾಥ್ ಕೆ ಎ ಅವರು ಧ್ವಜಾರೋಹಣ ನೆರವೇರಿಸಿದರು, ಇದೇ ವೇಳೆ ಪುಟ್ಟ ವಿದ್ಯಾರ್ಥಿಗಳ ಡ್ರಮ್ಸ್ ವಾದ್ಯ ಬಾರಿಸುವುದರ ಮೂಲಕ 76ನೇ ರಾಜ್ಯೋತ್ಸವದಲ್ಲಿ ವಿದ್ಯಾರ್ಥಿಗಳೆಲ್ಲ ಬಹಳ ಶಿಸ್ತಿನಿಂದ ಧ್ವಜಾರೋಹಣದಲ್ಲಿ ಪಾಲ್ಗೊಂಡಿದ್ದರು.

 

ಮೊದಲಿಗೆ ಸಂವಿಧಾನ ಪೀಠಿಕೆಯೊಂದಿಗೆ ಗಣರಾಜ್ಯೋತ್ಸವ ಆಚರಣೆ ಕಾರ್ಯಕ್ರಮ ಆರಂಭವಾಗಿ ನಂತರ ಕಾರ್ಯಕ್ರಮ ಕುರಿತು ಶಾಲೆಯ ಮುಖ್ಯ ಶಿಕ್ಷಕರಾದ ಶಂಕರಪ್ಪ ಮಾತನಾಡಿ ನಮ್ಮ ದೇಶಕ್ಕೆ ಸ್ವತಂತ್ರ ಸಿಕ್ಕ ನಂತರ ನಮ್ಮ ದೇಶಗಳಲ್ಲಿ ಸಾಕಷ್ಟು ಬದಲಾವಣೆ ಹೊಂದಿದೆ,ಅರ್ಥಿಕ ,ಸದ್ರುಡ ಸಭಲತೆಯಲ್ಲಿ ಮತ್ತು ವಿದ್ಯೆಯಲ್ಲಿ ನಮ್ಮ ದೇಶ ಮುoದಾಗುತ್ತಿದೆ ಎಂಬ ಭಾಷಣದೊಂದಿಗೆ ವಿದ್ಯಾರ್ಥಿಗಳಿಗೆ ಅರಿಯುವಂತೆ ಒಂದು ಪುಟ್ಟ ಕಥೆಯ ಮೂಲಕ ಗಣರಾಜ್ಯೋತ್ಸವದ ಆಚರಣೆಯ ಹಿನ್ನೆಲೆ, ಸಂವಿಧಾನ ಅಂಗೀಕಾರ, ಸ್ವತಂತ್ರ ಹೋರಾಟಗಾರರ ಹೋರಾಟದ ವಿವರಗಳನ್ನು ತಿಳಿಸುತ್ತಾ ಇಂದಿನ ಮಕ್ಕಳು ನಾಳಿನ ಪ್ರಜೇಗಳಾಗಿ ಬೇಳೆಯಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.

 

ಅದೇ ರೀತಿ ಒಂದರಿಂದ ಐದನೇ ತರಗತಿಯ ವಿದ್ಯಾರ್ಥಿಗಳಿಂದ 76ನೇ ಗಣರಾಜ್ಯೋತ್ಸವ ಕುರಿತು ಭಾಷಣ, ವಿವಿಧ ಬಗೆಯ ಜಾನಪದ, ಬಾವಾಗೀತೆಗಳು ಏಕಪಾತ್ರಭಿನಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

 

ಈ ಸಂದರ್ಭದಲ್ಲಿ ಸಹ ಶಿಕ್ಷಕರಾದ ಶ್ರೀಮತಿ ಯಶೋಧ, ಅಡುಗೆ ಸಿಬ್ಬಂದಿಯಾದ ಮಾಲಮ್ಮ ಹಾಗೂ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.

Document

Leave a Reply

Your email address will not be published. Required fields are marked *