Document

Turuvekere: ಲೋಕ ಅದಾಲತ್ ನಲ್ಲಿ ಮುನಿಸು ಮರೆತು ಮತ್ತೆ ಒಂದಾದ ಜೋಡಿಗಳು. 

Janataa24 NEWS DESK 

 

 

Turuvekere: ಲೋಕ ಅದಾಲತ್ ನಲ್ಲಿ ಮುನಿಸು ಮರೆತು ಮತ್ತೆ ಒಂದಾದ ಜೋಡಿಗಳು.

Turuvekere: ಲೋಕ ಅದಾಲತ್ ನಲ್ಲಿ ಮುನಿಸು ಮರೆತು ಮತ್ತೆ ಒಂದಾದ ಜೋಡಿಗಳು. 

ತುರುವೇಕೆರೆ: “ತಾಲೂಕು ಕಾನೂನು ಸೇವಾ ಸಮಿತಿ ತುರುವೇಕೆರೆ” ವತಿಯಿಂದ ಸೆ.13ರ ಶನಿವಾರ ನಡೆದ “ರಾಷ್ಟ್ರೀಯ ಲೋಕ ಅದಾಲತ್” ನಲ್ಲಿ 2 ಕೌಟುಂಬಿಕ ವ್ಯಾಜ್ಯಗಳು ರಾಜಿ-ಸಂಧಾನದ ಮೂಲಕ ಇತ್ಯರ್ಥಗೊಂಡಿದ್ದು, ಎರಡು ಜೋಡಿ ದಂಪತಿಗಳು, ವ್ಯಾಜ್ಯ ಮರೆತು ಪುನಃ ಕೂಡಿ ಬಾಳಲು ಒಪ್ಪಿಕೊಂಡ ಪ್ರಸಂಗ ಪಟ್ಟಣದ “ನ್ಯಾಯಾಲಯ”ದಲ್ಲಿ ನಡೆಯಿತು.

 

ಹಿಂದೂ ಮದುವೆ ಕಾಯ್ದೆ ಸೆಕ್ಷನ್ 13ರ ಅಡಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ದಾಖಲಾಗಿದ್ದ ಎರಡು ಕುಟುಂಬಗಳ ವ್ಯಾಜ್ಯಗಳು ಈ ದಿನ ರಾಷ್ಟ್ರೀಯ ಲೋಕ ಅದಾಲತ್ ವೇಳೆಯಲ್ಲಿ ರಾಜಿ ಸಂಧಾನ ಮೂಲಕ ಸಾರ್ಥಕವಾಗಿ ಇತ್ಯರ್ಥಗೊಂಡವು. ಬಾಳಲು ಬೇರ್ಪಟ್ಟಿದ್ದ ಎರಡು ಕುಟುಂಬದ ದಂಪತಿಗಳು ನ್ಯಾಯಾಧೀಶರ ಹಾಗೂ ವಕೀಲರ ಮಧ್ಯಸ್ಥಿಕೆಯಿಂದ ವಾದ-ವಿನಿಮಯ ಮುಗಿಸಿ ಪುನಃ ಕೂಡಿ ಬಾಳಲು ಒಪ್ಪಿಕೊಂಡದ್ದಾರೆ ಮತ್ತು ಅದಾಲತ್ ನಲ್ಲಿ ಅತಿ ಹೆಚ್ಚು ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳು ಸಹ ಇತ್ಯರ್ಥ ಪಡಿಸಲಾಗಿದೆ ಎಂದು ತಿಳಿಸಲಾಗಿದೆ.

 

ಅದಾಲತ್ ನಲ್ಲಿ ಗೌರವಾನ್ವಿತ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಶ್ರೀಮತಿ ಎಂ.ಡಿ.ಪವಿತ್ರರವರು ಮತ್ತು ಕಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶರದ ಗೌರವಾನ್ವಿತ ಶ್ರೀ ದೀಪು ಬಿ.ಸಿ. ರವರು ಉಪಸ್ಥಿತರಿದ್ದು, ತಾಲೂಕು ಕಾನೂನು ಸೇವಾ ಸಮಿತಿಯವರು. ತಾಲೂಕು ವಕೀಲರ ಸಂಘದ ಅಧ್ಯಕ್ಷರಾದ ನಟರಾಜು. ಉಪಾಧ್ಯಕ್ಷರಾದ

ಹೆಚ್.ಕೆ.ನಂಜೇಗೌಡ. ಕಾರ್ಯದರ್ಶಿ ಕುಮಾರ್.ಮತ್ತು ವಕೀಲರಾದ ದೇವರಾಜು. ಎಂ.ಡಿ.ನಟರಾಜು.

ಶಾಮ್ ಪ್ರಸಾದ್. ಎಚ್.ಎನ್ .ಸುನಿಲ್ ,ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು, ಸದಸ್ಯರು ಮತ್ತು ಮುಂತಾದ ವಕೀಲರು, ಕಛೇರಿಯ ಸಿಬ್ಬಂದಿಗಳು ಮುಂತಾದವರು ಪಾಲ್ಗೊಂಡಿದ್ದರು.

 

 

ವರದಿ: ಮಂಜುನಾಥ್ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *