Document

Turuvekere: ಕೋರೇಗಾಂವ್ 207 ನೇ ವಿಜಯೋತ್ಸವ. ತದ್ರೂಪಿ 15 ಅಡಿ ವಿಜಯಸ್ತಂಬ ಸ್ಥಾಪಿಸಿ ಆಚರಣೆ.

Janataa24 NEWS DESK 

 

 

Turuvekere: ಕೋರೇಗಾಂವ್ 207 ನೇ ವಿಜಯೋತ್ಸವ. ತದ್ರೂಪಿ 15 ಅಡಿ ವಿಜಯಸ್ತಂಬ ಸ್ಥಾಪಿಸಿ ಆಚರಣೆ.

Turuvekere: ಕೋರೇಗಾಂವ್ 207 ನೇ ವಿಜಯೋತ್ಸವ. ತದ್ರೂಪಿ 15 ಅಡಿ ವಿಜಯಸ್ತಂಬ ಸ್ಥಾಪಿಸಿ ಆಚರಣೆ.
ತುರುವೇಕೆರೆ: ತಾಲೂಕು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಾಲೂಕು ಸಂಚಾಲಕ ಕೃಷ್ಣ ಮಾದರ್, ಚಲವಾದಿ ಮಹಾಸಭಾ ಕುಣಿಕೇನಹಳ್ಳಿ ಜಗದೀಶ್ ಇವರ ನೇತೃತ್ವದಲ್ಲಿ ಪಟ್ಟಣದ ಹೃದಯ ಭಾಗದಲ್ಲಿರುವ ಅಂಬೇಡ್ಕರ್ ಭವನದ ಮುಂಭಾಗ ಭೀಮ ಕೋರೆಂಗಾವ್ ವಿಜಯೋತ್ಸವವನ್ನು ಆಚರಿಸಲಾಯಿತು,

 

ಇದೇ ವೇಳೆ ಮಾತನಾಡಿದ ತಾಲೂಕು ಸಂಚಾಲಕ ಕೃಷ್ಣ ಮಾದರ್, ಬಹಳ ಮುಖ್ಯವಾಗಿ ಅಂಬೇಡ್ಕರ್ರವರು ರಚಿಸಿರುವ ಸಂವಿಧಾನದ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಣ ಇಲಾಖೆ ಕಂದಾಯ ಇಲಾಖೆ ತೋಟಗಾರಿಕೆ ಇಲಾಖೆ ಇನ್ನೂ ಹಲವು ಇಲಾಖೆಯಲ್ಲಿ ಸರ್ಕಾರಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬರೂ ಸಹ ಇಂತಹ ವಿಜಯೋತ್ಸವದಲ್ಲಿ ಪಾಲ್ಗೊಂಡು ಆಚರಿಸಬೇಕು ಆದರೆ ಪ್ರತಿ ವರ್ಷ ಜನವರಿಯಲ್ಲಿ ಹೊಸ ವರ್ಷ ಆಚರಣೆ ಮಾಡುವ ಸಲುವಾಗಿ ತಮ್ಮ ಸಮಯವನ್ನು ಕಳೆಯುತ್ತಿದ್ದಾರೆ ಎಂದು ಅಸಮಾಧಾನ ಪಡಿಸುತ್ತಾ ಇನ್ನು ಮುಂದಾದರು ದಯಮಾಡಿ ತಾವುಗಳು ಅರ್ಥ ಮಾಡಿಕೊಂಡು ಇಂತಹ ವಿಜಯೋತ್ಸವದ ಕಾರ್ಯಕ್ರಮದಲ್ಲಿ ಮುಂದಿನ ದಿನಗಳಲ್ಲಿ ಭಾಗಿಯಾಗಿ ಎಂದರು ಜೊತೆಗೆ ಈ ಬಾರಿ ಈ ವಿಜಯೋತ್ಸವವನ್ನು ವಿಶೇಷವಾಗಿ 15 ಅಡಿ ಎತ್ತರದ ತದ್ರೂಪಿ ವಿಜಯ ಸ್ತಂಭವನ್ನು ಸ್ಥಾಪನೆ ಮಾಡಿ ಈ ಆಚರಣೆಯನ್ನು ಆಚರಿಸುತ್ತಿರುವುದು ನಮ್ಮ ಪುಣ್ಯ ಎಂದರು,

 

ಇದೆ ವೇಳೆ ಸಮಾಜ ಸೇವಕರಾದ ರಾಘು ಮಾತನಾಡಿ , ಭೀಮಾ ಕೋರೇಗಾoವ್ ಒಂದು ನೆನಪು ಬಾಬಾ ಸಾಹೇಬರು ಪ್ರತಿಬಾರಿ ಭೇಟಿ ನೀಡುತ್ತಿದ್ದ ಸ್ಥಳಗಳ ಪೈಕಿ ಕೋರೇಗಾoವ್ ಕೂಡಾ ಒಂದು.ದಾಸ್ಯದ ವಿರುದ್ಧ ಹಾಗೂ ಮನುವಾದಿಗಳ ಅಮಾನವೀಯ ಶೋಷಣೆಯ ವಿರುದ್ಧ ಮೊಟ್ಟ ಮೊದಲ ಬಾರಿಗೆ ಸ್ಪೋಟಗೊಂಡ ಈ ಹೋರಾಟವು ಭಾರತದ ಪಾಲಿಗೆ ಮೊದಲನೇ ಸಾಮಾಜಿಕ ಸ್ವಾತಂತ್ರ್ಯ ಸಂಗ್ರಾಮವೆಂದೇ ಹೆಸರಾಗಿದೆ ಎಂದರು,

 

ಛಲವಾದಿ ಕುಣಿಕೇನಹಳ್ಳಿ ಜಗದೀಶ್ ಮಾತನಾಡಿ, 2 ನೆ ಪೇಶ್ವೆ ಬಾಜಿರಾವ್ ವಿರುದ್ಧ 28000 ಪಡೆಯನ್ನು ಕೇವಲ ಐದುನೂರು ಮಹರ್ ಪಡೆಯು ಸೋಲಿಸಿದ್ದರ ಸ್ಮರಣಾರ್ಥಕವಾಗಿ ಕೋರೆಗಾoವ್ ವಿಜಯಸ್ತಂಬವನ್ನು ಸ್ಥಾಪಿಸಲಾಯಿತು, ಜೊತೆಗೆ 1818ರ ಈ ಕೋರೆಗಾoವ್ ಕದನವು ದಲಿತರಿಗೆ ಪ್ರಾಮುಖ್ಯವಾದ ಕದನವು ಕೂಡ ಹಾಗಾಗಿ ಜನವರಿ ಒಂದರಂದು ಮೇಲ್ಜಾತಿ ಆಡಳಿತದ ವಿರುದ್ಧ ತಮ್ಮ ಪ್ರತಿರೋಧವನ್ನು ತೋರಿಸಲು ಈ ದಿನವನ್ನು ಆಚರಿಸಲಾಗುತ್ತದೆ ಎಂದರು.

 

ನಿವೃತ್ತ ಶಿಕ್ಷಕ ನೀರಗುಂದ ಮಹೇಶ್ ಮಾತನಾಡಿ ಇತಿಹಾಸದಲ್ಲಿ ಮುಚ್ಚಿಹೋದ ಸಾಹಸದ ಘಟನೆ 28,000 ಸೈನಿಕರನ್ನು ಕೇವಲ ಐದುನೂರು ಜನ ಸೈನಿಕರು ಸೇರಿಕೊಂಡು ಸೋಲಿಸಿದ ಕದನ ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ ಅಸ್ಪೃಶ್ಯತೆ ಮೇಲು ಕೀಳುಗಳ ವಿರುದ್ಧ ಸೆಟೆದು ನಿಂತು ಮಾನವೀಯ ಮೌಲ್ಯಗಳನ್ನು ಪಡೆದುಕೊಳ್ಳಲು ಹಂಬಲಿಸುವ ಮಹರ್ ಸೈನಿಕರ ಧೈರ್ಯ, ಸಾಹಸ, ಕೆಚ್ಚೆದೆಯ ಹೋರಾಟ, ಶೋಷಿತರು, ಮೇಲ್ಜಾತಿ ಶೋಷಕರ ವಿರುದ್ಧ ಅವರ ಶೋಷಣೆಯ ನಡವಳಿಕೆಯ ವಿರುದ್ಧ ಯುದ್ಧವನ್ನು ನಡೆಸಿ ಗೆಲುವನ್ನು ಸಾಧಿಸಲಾಯಿತು ಈ ಯುದ್ಧ ಭೀಮಾತೀರದಲ್ಲಿ ನಡೆದಿದ್ದರಿಂದ ಇತಿಹಾಸದಲ್ಲಿ ಭೀಮ ಕೋರೆಗಾoವ್ ಯುದ್ಧವೆಂದೆ ಪ್ರಸಿದ್ಧವಾಗಿತ್ತು ಎಂದು ವಿವರಿಸಿದರು.

ಈ ಕಾರ್ಯಕ್ರಮದಲ್ಲಿ ಸೋಮೇನಹಳ್ಳಿ ಜಗದೀಶ್, ಸೋಮಣ್ಣ ಮಾರಪ್ಪನಹಳ್ಳಿ , ಅನ್ನಪೂರ್ಣಮ್ಮ ಜಗದೀಶ್ ಡಿಎಸ್ಎಸ್ ಮಹಿಳಾ ಸಂಘಟನೆಯ ಸಂಚಾಲಕರು, ಸಮಾಜ ಸೇವಕರು ಜಗದೀಶ್ ಸೋಮನಹಳ್ಳಿ, ಮಹಾದೇವಯ್ಯ ಬೀಚನಹಳ್ಳಿ,

ಶಿವಣ್ಣ ಟೌನ್ ಬ್ಯಾಂಕ್ ನಿರ್ದೇಶಕರು ,

ಸೋಮಶೇಖರಯ್ಯ ಬಾಳೆಕಾಯಿ,

ಪುಟ್ಟರಾಜು ಬಿಗ್ಗೆನಹಳ್ಳಿ,

ಕುಮಾರ್ ಕಡಬ, ರಾಮಚಂದ್ರಯ್ಯ, ವಿಜಯ್ ಕುಮಾರ್ ರೈತ ಸಂಘಟನೆ,

ಶೇಖರ್ ಅರಳಿಕೆರೆ,ರಾಯಣ್ಣತುರುವೇಕೆರೆ, ನರಸಿಂಹಯ್ಯ,ತಿಮ್ಮಯ್ಯ,

ಶಿವಶೇಖರ್,ಪ್ರಸನ್ನಕುಮಾರ್,

ಲೋಕೇಶ್(ರಂಗನಾಥ ಪುರ)

ಲೋಕೇಶ್(ಅಜ್ಜನಹಳ್ಳಿ)

ಲೋಕೇಶ್(ಗೋವಿಂದಘಟ್ಟ)

ಆಕಾಶ್, ಶಶಿಧರ್, ಸತೀಶ್ ಕಾರ್ಮಿಕ ಮುಖಂಡರು ಮಾರುತಿ ತುರುವೇಕೆರೆ, ಕೇಶವ ಕೋಲಘಟ್ಟ ,

ಪುಟ್ಟರಾಜು,ದೇವರಾಜು,

ಸಾವಿತ್ರಮ್ಮ,ನಂದಿನಿ, ಇನ್ನು ಅನೇಕ ದಲಿತ ಪರ, ವಿವಿಧಪರ ,ರೈತಪರ ಮುಖಂಡರುಗಳು ಉಪಸ್ಥಿತರಿದ್ದರು,

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.

Document

Leave a Reply

Your email address will not be published. Required fields are marked *