Document

ShivaRajkumar: ಶಿವಣ್ಣ  ಫೈನ್, ಅಭಿಮಾನಿಗಳ ಆಶೀರ್ವಾದ ಎಂದ ಗೀತಾ ಶಿವರಾಜ್ ಕುಮಾರ್.

Janataa24 NEWS DESK 

 

ShivaRajkumar: ಶಿವಣ್ಣ  ಫೈನ್, ಅಭಿಮಾನಿಗಳ ಆಶೀರ್ವಾದ ಎಂದ ಗೀತಾ ಶಿವರಾಜ್ ಕುಮಾರ್.

ShivaRajkumar: ಶಿವಣ್ಣ  ಫೈನ್, ಅಭಿಮಾನಿಗಳ ಆಶೀರ್ವಾದ ಎಂದ ಗೀತಾ ಶಿವರಾಜ್ ಕುಮಾರ್.
ಡಾ.ಶಿವರಾಜ್​ ಕುಮಾರ್ ಅವರು ಅಮೆರಿಕದಲ್ಲಿ ಈಗಾಗಲೇ ಚಿಕಿತ್ಸೆ ಪಡೆದು ಆರೋಗ್ಯವಾಗಿದ್ದಾರೆ. ಆದರೆ ಅಮೆರಿಕದಲ್ಲಿ ಶಿವಣ್ಣ ಹೇಗಿದ್ದಾರೆ ಎನ್ನುವುದು ಅವರ ಅಭಿಮಾನಿಗಳನ್ನ ಕಾಡುತ್ತಿತ್ತು. ಸದ್ಯ ಈ ಸಂಬಂಧ ಅಮೆರಿಕಾದಿಂದ ಶಿವಣ್ಣ ಅವರ ಆರೋಗ್ಯ ಕುರಿತು ಬಿಗ್ ಅಪ್​ಡೇಟ್ಸ್​ ಅನ್ನು ಕೊಡಲಾಗಿದೆ.

 

ಸರ್ಜರಿ ಕುರಿತು ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾದಲ್ಲಿ ಶಿವಣ್ಣ ದಂಪತಿ ಮಾತನಾಡಿದ್ದಾರೆ. ವಿಡಿಯೋದಲ್ಲಿ ಗೀತಾ ಶಿವರಾಜ್​ ಕುಮಾರ್ ಅವರು ಮಾತನಾಡಿ, ಮೊದಲು ಎಲ್ಲ ಕನ್ನಡಿಗರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯ ತಿಳಿಸಿದ್ದಾರೆ. ನೀವೆಲ್ಲ ಮಾಡಿದ ಆಶೀರ್ವಾದದಿಂದ ಎಲ್ಲ ರಿಪೋರ್ಟ್​​ಗಳು ನೆಗೆಟಿವ್ ಬಂದಿವೆ. ಕೊನೆಯಲ್ಲಿ ಪೈಥೋಲಾಜಿ ರಿಪೋರ್ಟ್​ ಬಗ್ಗೆ ಕಾಯುತ್ತಿದ್ದೆವು. ಅದು ಕೂಡ ನೆಗೆಟಿವ್ ಬಂದಿದ್ದು ಶಿವರಾಜ್​ ಕುಮಾರ್ ಅವರು ಕ್ಯಾನ್ಸರ್​ ಫ್ರಿ ಆಗಿದ್ದಾರೆ ಎಂದು ಹೇಳಿದ್ದಾರೆ.

 

ಆಸ್ಪತ್ರೆಯವರು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ಇದಕ್ಕೆಲ್ಲ ಕಾರಣ ದೊಡ್ಡವರ ಹಾಗೂ ನಿಮ್ಮೆಲ್ಲರ ಆಶೀರ್ವಾದವಾಗಿದೆ. ನಾನು ಇದನ್ನು ನನ್ನ ಜೀವನದಲ್ಲಿ ಯಾವತ್ತೂ ಮರೆಯುವುದಿಲ್ಲ ಅಂತ ಗೀತಾ ಶಿವರಾಜ್​ಕುಮಾರ್ ಅವರು ಹೇಳಿದ್ದಾರೆ. ಗೀತಕ್ಕ ಮಾತನಾಡುವಾಗ ಶಿವರಾಜ್​ ಕುಮಾರ್ ಅವರು ಪಕ್ಕದಲ್ಲೇ ಕುಳಿತುಕೊಂಡಿದ್ದರು. ಅವರು ಮಾತನಾಡಿ ನಿಮ್ಮ ಆಶೀರ್ವಾದಿಂದ ಆರೋಗ್ಯವಾಗಿದ್ದೇನೆ ಎಂದಿದ್ದಾರೆ.

 

 

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.

Document

Leave a Reply

Your email address will not be published. Required fields are marked *