Document

Turuvekere: ಪಿಎಸ್ಐ ಸಂಗಮೇಶ್ ಮೇಟಿ ಅವರ ನೇತೃತ್ವದಲ್ಲಿ ತಾಲೂಕಿನಲ್ಲಿ ಮೊದಲ ಬಾರಿ ಮಾಕ್ ಡ್ರಿಲ್

Janataa24 NEWS DESK 

 

Turuvekere: ಪಿಎಸ್ಐ ಸಂಗಮೇಶ್ ಮೇಟಿ ಅವರ ನೇತೃತ್ವದಲ್ಲಿ ತಾಲೂಕಿನಲ್ಲಿ ಮೊದಲ ಬಾರಿ ಮಾಕ್ ಡ್ರಿಲ್.
Turuvekere: ಪಿಎಸ್ಐ ಸಂಗಮೇಶ್ ಮೇಟಿ ಅವರ ನೇತೃತ್ವದಲ್ಲಿ ತಾಲೂಕಿನಲ್ಲಿ ಮೊದಲ ಬಾರಿ ಮಾಕ್ ಡ್ರಿಲ್

ತುರುವೇಕೆರೆ: ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿರುವ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಮೊದಲ ಬಾರಿಗೆ ತುರುವೇಕೆರೆ ಪಿ ಎಸ್ ಐ ಸಂಗಮೇಶ್ ಮೇಟಿ ನೇತೃತ್ವದಲ್ಲಿ ಅಗ್ನಿಶಾಮಕ ದಳ ಸಹಯೋಗದೊಂದಿಗೆ ಮಾಕ್ ಡ್ರಿಲ್ ಮಾಡಲಾಯಿತು, ಇದೇ ಸಂದರ್ಭದಲ್ಲಿ ಮೊದಲಿಗೆ ಬಸ್ ನಿಲ್ದಾಣದಲ್ಲಿ ಇದ್ದಂತಹ ಪ್ರಯಾಣಿಕರಿಗೆ ಪಿಎಸ್ಐ ಸಂಗಮೇಶ್ ಮೇಟಿ ಅವರು ಈಗಾಗಲೇ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತಿದ್ದು, ವಾಯು ದಾಳಿ, ಅಗ್ನಿ ದಾಳಿ, ನಡೆದಂತಹ ಸಂದರ್ಭದಲ್ಲಿ ಯಾವ ರೀತಿ ರಕ್ಷಣಾ ಕಾರ್ಯಗಳನ್ನು ಮಾಡಬೇಕೆಂಬುದನ್ನು ಮನದಟ್ಟು ಮಾಡಿದರು.

 

ನಂತರ ಅವಶೇಷದಡಿ ಸಿಲುಕಿದವರನ್ನು ಎತ್ತರ ಪ್ರದೇಶದಲ್ಲಿ ಇರುವವರನ್ನು ಹೇಗೆ ರಕ್ಷಿಸಬೇಕು ವೈದ್ಯಕೀಯ ತುರ್ತು ಸೇವೆಗಳನ್ನು ಹೇಗೆ ಒದಗಿಸಬೇಕು ಎಂದು ತಿಳಿಸಿಕೊಟ್ಟರು ಜೊತೆಗೆ ಸೈರನ್ ಮೊಳಗಿದ ಕೂಡಲೇ ನಾಗರಿಕರು ಕೈಗೊಳ್ಳಬೇಕಾದ ಎಚ್ಚರಿಕೆ ಹಾಗೂ ದುರ್ಘಟನೆಯಿಂದ ಕಟ್ಟಡಗಳಲ್ಲಿ ಸಿಲುಕಿರುವ ನಾಗರಿಕರನ್ನು ಸುಸಜ್ಜಿತವಾದ ಆಂಬುಲೆನ್ಸ್ ವಾಹನದ ಮೂಲಕ ಹೇಗೆ ರಕ್ಷಣೆ ಮಾಡಬೇಕು ಇದರ ಜೊತೆಗೆ ಅಗ್ನಿ ಶಾಮಕ ದಳ ಸಿಬ್ಬಂದಿಗಳಿಂದ ತುರ್ತು ಸೇವೆಗಳನ್ನು ಹೇಗೆ ಒದಗಿಸಿ ಕೊಡಲಾಗುತ್ತದೆ ಎಂಬುದನ್ನ ಪ್ರದರ್ಶಿಸಿದರು,

 

ಇದೆ ವೇಳೆ ಆರಕ್ಷಕ ಇಲಾಖೆಯ ಸಿಬ್ಬಂದಿಗಳಾದ ಏ ಎಸ್ ಐ ಶಂಕರಪ್ಪ, ಪೇದೆಯಾದ ಅರುಣ್, ರವಿಕುಮಾರ್, ಹಾಗೂ ಸಿಬ್ಬಂದಿಗಳು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು, ಆರೋಗ್ಯ ಇಲಾಖೆಯ ಆಂಬುಲೆನ್ಸ್ ಸೇವೆ ಒದಗಿಸುವ ಸಿಬ್ಬಂದಿಗಳು ಹಾಗೂ ನೂರಾರು ನಾಗರಿಕರು ಈ ಮಾಕ್ ಡ್ರಿಲ್ ಗೆ ಸಾಕ್ಷಿಯಾದರು.


ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *