Janataa24 NEWS DESK
ಹುಚ್ಚುನಾಯಿ ಕಡಿತಕ್ಕೆ ಗಂಗಮ್ಮ ಎಂಬ ವೃದ್ಧೆ ಸಾವು.
ಜಿಲ್ಲಾಧಿಕಾರಿ ಮನೆಗೆ ನಾಯಿಗಳನ್ನು ತಂದು ಬಿಡಲಾಗುವುದು ಮಾಜಿ ಶಾಸಕ ಮಸಾಲ ಜೈರಾಮ್ ಎಚ್ಚರಿಕೆ.

ತುರುವೇಕೆರೆ: ಗುಬ್ಬಿ ತಾಲೂಕು ಕಲ್ಲೂರು ಗ್ರಾಮದಲ್ಲಿ ಹುಚ್ಚುನಾಯಿ ಕಡಿತದಿಂದಾಗಿ 60 ವಯಸ್ಸಿನ ವೃದ್ಧೆ ಗಂಗಮ್ಮ ಎಂಬುವರು ಇಂದು ಮೃತಪಟ್ಟಿದ್ದಾರೆ, ಇದರ ಹಿನ್ನೆಲೆ ಇಂದು ತುರುವೇಕೆರೆ ಮಾಜಿ ಶಾಸಕರಾದ ಮಸಾಲ ಜಯರಾಮ್ ಅವರು ತಮ್ಮ ಫಾರಂ ಹೌಸ್ ನಲ್ಲಿ ಪತ್ರಿಕಾ ಮಾಧ್ಯಮ ಗೋಷ್ಟಿ ನಡೆಸಿ ಮಾತನಾಡಿದ ಅವರು, ಕಲ್ಲೂರು ಗ್ರಾಮದಲ್ಲಿ ಸುಮಾರು 400 ಹೆಚ್ಚು ಬೀದಿ ನಾಯಿಗಳ ಇರುವುದರಿಂದ ಅದರಲ್ಲಿ ಐದರಿಂದ ಆರು ನಾಯಿಗಳಿಗೆ ಹುಚ್ಚು ಹಿಡಿದಿದ್ದು, ಹುಚ್ಚುನಾಯಿ ಕಡಿತದಿಂದಾಗಿ ಗಂಗಮ್ಮ (60)ವರ್ಷ ಎಂಬುವರು ಇಂದು ಮೃತಪಟ್ಟಿದ್ದಾರೆ , ಅದಲ್ಲದೆ ಇನ್ನೂ ಐದರಿಂದ ಆರು ಜನರಿಗೆ ಮತ್ತು ಮಕ್ಕಳ ಮೇಲೆ ಹುಚ್ಚುನಾಯಿಗಳು ದಾಳಿ ಮಾಡಿವೆ , ಅವರನ್ನು ಈಗಾಗಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿ ಕೆಲವರ ಸ್ಥಿತಿ ಗಂಭೀರವಾಗಿದೆ, ಈಗಾಗಲೇ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಇದರ ಬಗ್ಗೆ ಈಗಾಗಲೇ ಸ್ಥಳೀಯ ಗ್ರಾಮ ಪಂಚಾಯಿತಿಗೆ ಸಾರ್ವಜನಿಕರು ಮತ್ತು ಶಾಲೆಯ ಶಿಕ್ಷಕರು ಸಹ ಪಂಚಾಯಿತಿಗೆ ದೂರು ನೀಡಿದ್ದರು ಅಲ್ಲಿರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಂಡಿಲ್ಲ.
ಮುಂದುವರೆದು ಮಾತನಾಡಿದ ಅವರು, ಇದಕ್ಕೆ ನೇರವಾಗಿ ಹೊಣೆಯಾಗುವುದು ಜಿಲ್ಲಾಧಿಕಾರಿಗಳು ಮತ್ತು ಸಿಇಒ ಪ್ರಭು ಅವರೇ ಹೊಣೆಗಾರರು, ಕಾರಣ ಜಿಲ್ಲಾಧಿಕಾರಿಯವರ ಸೂಚನೆಯಂತೆ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಮತ್ತು ತಾಲೂಕು ಪಂಚಾಯಿತಿಗಳಿಗೆ ಜಿಲ್ಲಾ ಸಿಇಒ ಮೂಲಕ ಎಲ್ಲಾ ತಾಲೂಕು ಪಂಚಾಯಿತಿಗಳ ಮೂಲಕ ಗ್ರಾಮ ಪಂಚಾಯಿತಿಗಳಿಗೆ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಸೂಚನೆ ಸಹ ನೀಡಲಾಗುವುದು, ಆದರೆ ಏನು ಪ್ರಯೋಜನವಿಲ್ಲ ಬೀದಿ ನಾಯಿಗಳ ಹಾವಳಿಗಳಿಂದ ಬೇಸತ್ತ ಕಲ್ಲೂರು ಗ್ರಾಮದ ಸಾರ್ವಜನಿಕರು, ಶಾಲಾ ಶಿಕ್ಷಕರು, ಗ್ರಾಮ ಪಂಚಾಯಿತಿಗಳಿಗೆ ದೂರು ನೀಡಿದರು ಸಹ ಗ್ರಾಮ ಪಂಚಾಯಿತಿ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ, ಗಮನ ಹರಿಸದೇ ಇಂದು ಒಬ್ಬ ವೃದ್ದೆ ಸಾವಿಗೆ ನೇರವಾಗಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಸಿಇಒ ಅವರೇ ನೇರ ಹೊಣೆಯಾಗಿದ್ದಾರೆ ಎಂದು ದೂರಿದರು. ನಮ್ಮ ತುಮಕೂರು ಜಿಲ್ಲೆಯ ಸಿ ಈ ಓ ಪ್ರಭು ಅವರು ಗ್ರಾಮ ಪಂಚಾಯಿತಿಗಳ ಪಿಡಿಓ ವರ್ಗಾವಣೆಗಾಗಿ ಬಹುಬೇಗನೆ ಕಾದು ಕುಳಿತಿರುತ್ತಾರೆ, ಇಂತಹ ಪ್ರಾಣ ಕಳೆದುಕೊಳ್ಳುವಂತಹ ಸಮಸ್ಯೆಗಳ ಬಗ್ಗೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಯಾವುದೇ ಸೂಚನೆ ಕೊಡದೆ ಇಂದು ಈ ಅನಾಹುತಗಳು ಸಂಭವಿಸಿರುವುದೇ ಇಂತಹ ಅಧಿಕಾರಿಗಳಿಂದಲೇ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳೇ ನೆನಪಿಟ್ಟುಕೊಳ್ಳಿ ನೀವೇನಾದರೂ ಹಿಟ್ಲರ್ ರೀತಿ ಅಧಿಕಾರ ನಡೆಸುತ್ತಿದ್ದೀರಾ, ಕೂಡಲೇ ಗುಬ್ಬಿ ತಾಲೂಕಿನ ಕಲ್ಲೂರು ಗ್ರಾಮಕ್ಕೆ ಭೇಟಿ ಕೊಟ್ಟು ಅಲ್ಲಿನ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಿ, ಈಗಾಗಿರುವ ಅನಾಹುತಗಳಿಗೆ ನೀವೇ ಹೊಣೆ ಹೀಗೆ ಮುಂದುವರೆದರೆ ಕಲ್ಲೂರು ಗ್ರಾಮದಲ್ಲಿ ಇನ್ಯಾರಿಗಾದರೂ ಹುಚ್ಚು ನಾಯಿ ಕಡಿತದಿಂದ ಸಾವಾಗಿದೆ ಎಂಬುದು ತಿಳಿದರೆ ನೇರವಾಗಿ ಎಲ್ಲಾ ನಾಯಿಗಳನ್ನು ಹಿಡಿದು ತಂದು ನಿಮ್ಮ ಮನೆ ಒಳಗೆ ಕೂಡಿಹಾಕಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en