Janataa24 NEWS DESK

Pavagada:ಬಸ್ ಆಟೋ ಡಿಕ್ಕಿ ಎಂಟು ಮಂದಿ ಕೂಲಿ ಕಾರ್ಮಿಕರಿಗೆ ಗಾಯ.
ಪಾವಗಡ: ತಾಲ್ಲೂಕಿನ ದೊಮ್ಮತಮರಿ ಗ್ರಾಮದ ಬಳಿ ಖಾಸಗಿ ಬಸ್ಸು ತ್ರಿಚಕ್ರ ಆಟೋಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಜನ ಕೂಲಿ ಕಾರ್ಮಿಕರು ಗಾಯಗೊಂಡ ಘಟನೆ ನಡೆದಿದೆ.
ರೊದ್ದಂ ಮಾರ್ಗವಾಗಿ ದೊಮ್ಮತಮರಿಯಿಂದ ಹಿಂದೂಪುರ ಕಡೆ ಹೋಗುವ ಖಾಸಗಿ ಎಸ್. ಎಲ್.ವಿ ಬಸ್ಸು ಆಟೋ ಹಿಂಬದಿಗೆ ಡಿಕ್ಕಿ ಹೊಡೆದಿರುತ್ತದೆ, ಇದರಿಂದ ಯಾವುದೇ ಪ್ರಾಣಾಪಾಯ ನಡೆದಿರುವುದಿಲ್ಲ
ಎಂಟು ಜನ ಕೂಲಿ ಕಾರ್ಮಿಕರನ್ನು ಪಾವಗಡ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ.
ಆಟೋ ಚಾಲಕನಾದ ಗಿರೀಶ್ ಗೆ ಗಂಭೀರ ಗಾಯಗಳಾಗಿರುವುದರಿಂದ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಪಾವಗಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಇಮ್ರಾನ್ ಉಲ್ಲ ಪಾವಗಡ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://www.janataa24.com/turuvekere-former-mla-masala-jairam-warns-that/
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en