Janataa24 NEWS DESK
Turuvekere: The background of drought is microfinance, and banks cannot compel the public to pay Loan.

ತುರುವೇಕೆರೆ: ಪಟ್ಟಣದ ತಾಲೂಕು ಕಚೇರಿಯಲ್ಲಿ ತಾಲೂಕು ದಕ್ಷ ಅಧಿಕಾರಿ ತಹಶೀಲ್ದಾರ್ ವೈ ಎಂ ರೇಣುಕುಮಾರ್ ಸುದ್ದಿಗೋಷ್ಠಿ ನಡೆಸಿದರು, ಇದೇ ವೇಳೆ ಮಾತನಾಡಿದ ಅವರು ಈಗಾಗಲೇ ಕಳೆದ ವಾರ ಅಷ್ಟೇ ತಿಪಟೂರು ತಾಲೂಕಿನಲ್ಲಿ ಮೈಕ್ರೋ ಫೈನಾನ್ಸ್ ನಿಂದ ಹಣ ಕಟ್ಟಲು ಒತ್ತಾಯ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಕೊಂಡ ಘಟನೆಯ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿಯವರು ಈಗಾಗಲೇ ಜಿಲ್ಲೆಯಲ್ಲಿ ಬರಗಾಲ ಇರುವುದರಿಂದ ಮೈಕ್ರೋ ಫೈನಾನ್ಸ್ , ಮತ್ತು ಇತರ ಯಾವುದೇ ಬ್ಯಾಂಕ್ ಗಳಾಗಲಿ ಯಾವುದೇ ಕಾರಣಕ್ಕೂ ಸಾಲ ಪಡೆದವರ ಬಳಿ ಎರಡು ತಿಂಗಳ ಕಾಲ ಸಾಲದ ಹಣ ಕಟ್ಟುವಂತೆ ಒತ್ತಾಯ ಮಾಡಬಾರದೆಂದು ಆದೇಶ ಹೊರಡಿಸದ್ದಾರೆ.
ಇದರ ಹಿನ್ನೆಲೆಯಲ್ಲಿ ತುರುವೇಕೆರೆ ತಾಲೂಕಿನ ದಕ್ಷ ಅಧಿಕಾರಿ ತಹಶೀಲ್ದಾರ್ ರೇಣು ಕುಮಾರ್ ಸುದ್ದಿಗೋಷ್ಠಿ ನಡೆಸಿ , ತಾಲೂಕಿನಲ್ಲಿರುವ ಯಾವುದೇ ಫೈನಾನ್ಸ್ ಕಂಪನಿಗಳಾಗಲಿ, ಬ್ಯಾಂಕುಗಳಾಗಲಿ, ಗುಂಪಿನ ಸಾಲಗಳ ಫೈನಾನ್ಸ್ ಗಳಾಗಲಿ, ನಿಮ್ಮಗಳ ಬಳಿ ಸಾಲ ಪಡೆದಿರುವವರ ಹತ್ತಿರ ಒತ್ತಾಯಪೂರ್ವಕವಾಗಿ ಎರಡು ತಿಂಗಳ ಕಾಲ ಹಣಕ್ಕೆ ಒತ್ತಾಯ ಮಾಡುವ ಹಾಗಿಲ್ಲ, ಕರ್ನಾಟಕ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಬರಗಾಲ ಇರುವುದರಿಂದ, ರೈತರಿಗೆ ದುಡಿದು ತಿನ್ನುವುದೇ ಕಷ್ಟಕರವಾಗಿರುವ ಈ ಸಂದರ್ಭದಲ್ಲಿ ಎಲ್ಲಾ ರೀತಿಯ ಮೈಕ್ರೋ ಫೈನಾನ್ಸ್ಗಳಾಗಲಿ, ಬ್ಯಾಂಕುಗಳಾಗಲಿ, ಹಣ ಕಟ್ಟುವಂತೆ ಒತ್ತಾಯ ಮಾಡುವಂತಿಲ್ಲ ಎಂದು ಖಡಕ್ ಸೂಚನೆ ಕೊಟ್ಟಿದ್ದಾರೆ. ಜೊತೆಗೆ ಫೈನಾನ್ಸ್ ನವರು, ಖಾಸಾಗಿ ಲೇವಾದೇವಿದಾರರು, ಒತ್ತಾಯಪೂರ್ವಕವಾಗಿ ಹಣ ವಸೂಲಿ ಮಾಡುವುದು ಕಂಡು ಬಂದರೆ ಅವರ ಮೇಲೆ ಕೂಡಲೇ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://www.janataa24.com/fodder-bank-will-be-opened-for-turuvekere-cattle/
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en