Document

Tumkur: ತುರುವೇಕೆರೆ ತಾಲೂಕಿನಲ್ಲಿ ಜಾನುವಾರುಗಳಿಗಾಗಿ ಎರಡನೇ ಮೇವು ಬ್ಯಾಂಕ್ ತೆರೆದ ತಾಲೂಕು ಆಡಳಿತ.

Janataa24 NEWS DESK

Tumkur: Turuvekere Taluk Administration opened second fodder bank for cattles.

Taluk administration opened second fodder bank for cattle in Turuvekere taluk 1

ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಅರೇಮಲ್ಲೇನಹಳ್ಳಿ ರಂಗನಾಥ ಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ತಾಲ್ಲೂಕು ಆಡಳಿತ ಹಾಗು ತಾಲ್ಲೂಕು ಪಶು ಸಂಗೋಪನಾ ಇಲಾಖಾ ವತಿಯಿಂದ ಮೇವು ಬ್ಯಾಂಕ್ ಸ್ಥಾಪನೆಗೆ ಸೋಮವಾರ ಚಾಲನೆ ನೀಡಲಾಯಿತು.

ಈ ವೇಳೆ ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಮಾತನಾಡಿ, ಕಳೆದ ನವೆಂಬರ್ ನಿಂದ ತಾಲ್ಲೂಕಿನಲ್ಲಿ ಸಮರ್ಪಕವಾಗಿ ಮಳೆಯಾಗದೆ ರೈತರು ಪರದಾಡಿದರು. ಮುಖ್ಯವಾಗಿ ದಬ್ಬೇಘಟ್ಟ(Dabbegatta) ಹೋಬಳಿಯಲ್ಲಿ ಕೆರೆ ಕಟ್ಟೆಗಳು ಬತ್ತಿದ್ದರಿಂದ ಅಲ್ಲಿನ ಜಾನುವಾರುಗಳಿಗೆ ಕುಡಿಯಲು ನೀರಿಗಾಗಿ ತೊಂದರೆ ಉಂಟಾಯಿತು. ಮತ್ತೊಂದೆಡೆ ಮೇವಿಗೂ ಅಭಾವ ಎದುರಿಸಬೇಕಾಯಿತು.ಹಾಗಾಗಿ ಈ ಭಾಗದ ರೈತರು(Farmers) ಮೇವಿಗಾಗಿ ಹೆಚ್ಚು ಪರಿತಪಿಸಿದರು. ಸರ್ಕಾರ ನೀಡಿರುವ ಮೇವು ಬ್ಯಾಂಕ್ ಸೌಲಭ್ಯವನ್ನು ರೈತರು ಉತ್ತಮವಾಗಿ ಬಳಸಿಕೊಂಡು ತಮ್ಮ ರಾಸುಗಳನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಿ ಏಕೆಂದರೆ ರಾಸುಗಳು ರೈತ ಕುಟುಂಬದ ಜೀವನಾಧಾರ ಎಂದ ಅವರುಕಳೆದ ಎರಡು ದಿನಗಳಿಂದ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು ರೈತರ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ ಸಿಗಲಿದೆ ಎಂದರು.ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೇವಣ ಸಿದ್ದಪ್ಪ ಮಾತನಾಡಿ ಒಂದು ರಾಸುವಿಗೆ ಪ್ರತಿ ದಿನಕ್ಕೆ 6 ಕೆ.ಜಿಯಂತೆ ವಾರಕ್ಕೆ ಆಗುವಷ್ಟು ಮೇವನ್ನು ಒದೇ ಬಾರಿ ನೀಡಲಾಗುತ್ತದೆ.

ರೈತರು ತಮ್ಮಲ್ಲಿರುವ ರಾಸುಗಳ ಲೆಕ್ಕದಲ್ಲಿ ಮೇವನ್ನು ಪಡೆಯಬಹುದಾಗಿದೆ. ಅದಕ್ಕಾಗಿ ಪ್ರತಿ ಕೆ.ಜಿಗೆ 2 ರೂಪಾಯಿಗಳನ್ನು ಸಂದಾಯ ಮಾಡಬೇಕಿದೆ. ಮೇವು ಮುಗಿದ ನಂತರ ಮತ್ತೆ ರೈತರು ತಮಗೆ ನೀಡಲಾಗಿರುವ ಮೇವಿನ ಕಾರ್ಡ್ ತಂದು ಮೇವು ಖರೀದಿಸಬಹುದು. ಈಗಾಗಲೇ ಒಟ್ಟು 342 ಜಾನುವಾರುಗಳಿಗೆ 14.5 ಟನ್ ಮೇವು ವಿತರಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಮುಖ್ಯ ಪಶುವೈದ್ಯಾಧಿಕಾರಿ ಡಾ.ಶಶಿಕಿರಣ್, ಜಾನುವಾರು ಅಭಿವೃದ್ಧಿ ಅಧಿಕಾರಿ ಸಿದ್ದಪ್ಪ ಜೆ, ಹಿರಿಯ ಪಶು ವೈದ್ಯಪರಿವೀಕ್ಷಕ ಚಿಕ್ಕರಾಜು, ಕಂದಾಯ ಅಧಿಕಾರಿಗಳು, ಗ್ರಾಮ ಲೆಕ್ಕಿಗರು ಮತ್ತು ರೈತರು ಹಾಜರಿದ್ದರು.

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://www.janataa24.com/pavagada-health-problem-pdo-naveen-untimely-deat/

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

Document

Leave a Reply

Your email address will not be published. Required fields are marked *