Document

Tumkur: ಸಿಡಿಲಿನ ಹೊಡೆತಕ್ಕೆ ಮೂಕ ಪ್ರಾಣಿಗಳು ಸಜೀವ ದಹನ.

Janataa24 NEWS DESK

Tumkur: Animals are burnt alive by Lightning Strike.

Pavagada tumkurnews Cow animals are burnt alive by lightning strike

ಪಾವಗಡ: ಸಿಡಿಲಿಗೆ ಹಸು ಕರು ಸುಟ್ಟು ಕರಕಲಾಗದ ಘಟನೆ ತಾಲೂಕಿನ ರಂಗಸಮುದ್ರ ಗ್ರಾಮದಲ್ಲಿ ಸಂಭವಿಸಿದೆ.

ಸಿಡಿಲಿಗೆ ಒಂದು ಹಸು ಕರು ಸುಟ್ಟಿಹೋಗಿ ಮೂರು ಹಸುಗಳಿಗೆ ಗಾಯಗಳಾಗಿವ ಹಾಗೂ ಇಬ್ಬರು ವ್ಯಕ್ತಿಗಳಿಗೆ ಸಣ್ಣಪುಟ್ಟ ಗಾಯಗಳಾಗಿ ಕೂದಲೆಳೆಯ ಅಂತರದಿಂದ ಪ್ರಾಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪಾವಗಡ ತಾಲೂಕಿನ ರಂಗಸಮುದ್ರ ಗ್ರಾಮದಲ್ಲಿ ಗುರುವಾರ ಕರಿಯಪ್ಪ ಎಂಬವವರ ಜಮೀನಿನಲ್ಲಿ ರಾತ್ರಿ ಮಳೆ ಬರುವ ಸಮಯದಲ್ಲಿ ಗುಡುಗು ಸಿಡಿಲು ಬಡಿದು ನಾಲ್ಕು ಜಾನುವಾರುಗಳು ಗಾಯಗೊಂಡಿದ್ದು ಒಂದು ಜಾನುವಾರು ಸಂಪೂರ್ಣವಾಗಿ ಸುಟ್ಟ ಹೋಗಿದೆ. ಈ ಅವಘಡದಿಂದ ಇಬ್ಬರು ಪ್ರಾಣಾಪಾಯದಿಂದ ಪರಗಿದ್ದಾರೆ. ಗುಡಿಸಲು(Shade) ಸಂಪೂರ್ಣವಾಗಿ ಭಸ್ಮ ವಾಗಿದೆ. ರೈತ ಕರಿಯಪ್ಪ ತೋಟದ ಮನೆ(Farm House)ಯಲ್ಲಿ ವಾಸವಾದ ಹಿನ್ನೆಲೆಯಲ್ಲಿ ಗುಡಿಸಿನಲ್ಲಿ ಇದ್ದಂತಹ ರೈತ ಬಳಕೆಯಾಗುವಂತಹ ಸಲಕರಣೆಗಳು ಹಾಗೂ ಅದರಲ್ಲಿ ದವಸ ಧಾನ್ಯಗಳು ಸಹ ಇದ್ದ ಹಿನ್ನೆಲೆಯಲ್ಲಿ ಸಿಡಿಲಿಗೆ ಸಂಪೂರ್ಣ ನಾಶವಾಗಿದೆ ಇದರಿಂದಾಗಿ ರೈತ ಕರಿಯಪ್ಪನಿಗೆ ಸುಮಾರು ಒಂದು ಲಕ್ಷದಷ್ಟು ನಷ್ಟ ಉಂಟಾಗಿದೆ ಎಂಬುದಾಗಿ ಮಾಹಿತಿ ತಿಳಿದು ಬಂದಿದೆ.ಕರಿಯಪ್ಪ ಎಂಬುವರು ಊರಿನ ಹೊರ ತೋಟದ ಮನೆಯಲ್ಲಿ ವಾಸವಾಗಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಹಾಗೂ ವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳಕ್ಕೆ ಪೊಲೀಸರು ಬೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವರದಿ: ಇಮ್ರಾನ್ ಉಲ್ಲಾ. ಪಾವಗಡ

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://www.janataa24.com/tumkur-taluk-administration-opened-second-fodder/

Document

Leave a Reply

Your email address will not be published. Required fields are marked *