Janataa24 NEWS DESK
ಅರ್ಜಿ ಸಲ್ಲಿಸಿದರು ಮಾಹಿತಿ ಸಿಗುತ್ತಿಲ್ಲ, ಸಾರ್ವಜನಿಕರಿಂದ ಜಿಲ್ಲಾ ಕಚೇರಿಗೆ ದೂರು ಹಿನ್ನೆಲೆ.
ತಾಲೂಕು ಕಚೇರಿಗೆ ಭೇಟಿ ಕೊಟ್ಟ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್.

ತುರುವೇಕೆರೆ: ಪಟ್ಟಣದ ತಾಲೂಕು ಆಡಳಿತ ಕಚೇರಿಗೆ ಇಂದು ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ ಭೇಟಿ. ಕಂದಾಯ ಇಲಾಖೆಯಲ್ಲಿ ಜಿಲ್ಲಾ ಆಡಳಿತ ಮತ್ತು ತಾಲೂಕು ಆಡಳಿತ ಸಮಸ್ಯೆ ಇಲ್ಲದೆ ಕೆಲಸ ನಿರ್ವಹಿಸಬೇಕು, ಸಾರ್ವಜನಿಕರಿಂದ ಬಂದಂತಹ ಅರ್ಜಿ(ದೂರುಗಳನ್ನು )ಕೂಡಲೇ ಪರಿಶೀಲನೆ ಮಾಡಿ ವಿಲೇವಾರಿ ಮಾಡಬೇಕು, ಹಾಗಾಗಿ ಇಂದು ನಾವು ಇಲ್ಲಿಗೆ ಭೇಟಿ ಕೊಟ್ಟಿರುವ ಉದ್ದೇಶವಾಗಿದೆ ಎಂದರು.

ಮುಂದುವರೆದು ಮಾತನಾಡಿದ ಅವರು ಮಾಯಸಂದ್ರ ನಾಡಕಚೇರಿಯಲ್ಲಿ 122 ಅರ್ಜಿಗಳು ಬಾಕಿ ಇದ್ದು. ಕೂಡಲೇ ವಿಲೇವಾರಿ ಆಗಬೇಕು ಎಂದು , ವಿ ಎ ಗಳಿಗೆ ಈಗಾಗಲೇ ಸೂಚನೆ ನೀಡಿದ್ದು, ಇನ್ನೆರಡು ದಿನಗಳಲ್ಲಿ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು ಎಂದರು. ಇದರ ಜೊತೆಗೆ
ಸುಮಾರು ವರ್ಷದಿಂದ ಒಂದೇ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಶೀಘ್ರವೇ ಬದಲಾವಣೆ ಮಾಡಲಾಗುವುದು, ಈಗಾಗಲೇ ಇದರ ವಿಷಯವಾಗಿ ಎ,ಸಿ, ಅವರಿಗೆ ಸೂಚಿಸಲಾಗಿದೆ ಎಂದು ಮಾಧ್ಯಮಕ್ಕೆ ಸ್ಪಷ್ಟನೆ ನೀಡಿದರು.

ಇದೆ ಸಂದರ್ಭದಲ್ಲಿ ಜಿಲ್ಲಾಧಿಕಾರಿಯವರು ತಾಲೂಕು ದಂಡಾಧಿಕಾರಿ, ವೈ ಎಂ ರೇಣು ಕುಮಾರ್, ಅವರೊಂದಿಗೆ ತಾಲೂಕು ಕಚೇರಿಯಲ್ಲಿರುವ ಎಲ್ಲಾ ಕಚೇರಿಗಳಿಗೆ ಭೇಟಿಕೊಟ್ಟು ಪರಿಶೀಲಿಸಿದರು.

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.