Janataa24 NEWS DESK
ಖಚಿತ ಮಾಹಿತಿ ಮೇರೆಗೆ ಅಕ್ರಮ ಮಧ್ಯವಶ- ಆರೋಪಿ ಸೆರೆ.
ಗುಬ್ಬಿ: ತಾಲೂಕಿನ ಕಡಬ ಹೋಬಳಿಯ ಗೂರಜಿಹಳ್ಳಿ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಖಚಿತ ಮಾಹಿತಿ ಆದರಿಸಿ ಅಬಕಾರಿ ಅಧಿಕಾರಿಗಳು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗೊರಜಿಹಳ್ಳಿ ಗ್ರಾಮದ ಬಸವರಾಜು ಬಿನ್ ರಾಮಣ್ಣ ರವರಿಗೆ ಸೇರಿದ ಮನೆಯ ಮೇಲೆ ದಾಳಿ ನಡೆಸಿದಾಗ ಮನೆಯಲ್ಲಿ ಅಕ್ರಮವಾಗಿ ಶೇಖರಿಸಿದ್ದ ಸುಮಾರು5.400 ಲೀಟರ್ ಮದ್ಯವನ್ನು ಆರೋಪಿಯು ಮಾರಾಟಕ್ಕೋಸ್ಕರ ಶೇಖರಣೆ ಮಾಡಿರುವುದು ಕಂಡು ಬಂದಿದ್ದು ಆರೋಪಿ ಬಸವರಾಜು ನನ್ನು ಬಂದಿಸಿ ಆರೋಪಿತನ ವಿರುದ್ಧ ಮೊಕದ್ದಮೆ ದಾಖಲಸಿ ಗುಬ್ಬಿ JMFC ನ್ಯಾಯಾದೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ.
ಈ ಸಂದರ್ಭದಲ್ಲಿ ಅಬಕಾರಿ ಉಪನಿರೀಕ್ಷಕಿ ಪುಷ್ಪ ಪಿ, ತಿಮ್ಮಯ್ಯ ಬಿ ಟಿ, ರಮೇಶ್, ವಿಶ್ವರೂಪ ಇತರರು ಹಾಜರಿದ್ದರು.
ವರದಿ: ಶ್ರೀಕಾಂತ್ ಗುಬ್ಬಿ