Document

Turuvekere: ತಾಲೂಕು ಕಚೇರಿ ಎದುರು ರೈತ ಮುಖಂಡನ ಉಪವಾಸ ಸತ್ಯಾಗ್ರಹ- ಸ್ಪಂದಿಸಿದ ತಹಸೀಲ್ದಾರ್

Turuvekere: Farmer Leader Viji kumar Started a Hunger Strike Infront of taluk office – Tahsildar Responded.

ತುರುವೇಕೆರೆ: ತಾಲೂಕು ಆಡಳಿತದ ಅಧಿಕಾರಿಗಳಿಗೆ ಮತ್ತು ಸಿಬ್ಬಂ

Hunger strike infront of turuvekeretaluk office

ದಿಗಳಿಗೆ ಉಪವಾಸ ಸತ್ಯಾಗ್ರಹದ ಮುಖೇನ ಬಿಸಿ ಮುಟ್ಟಿಸಿದ ರೈತ ಮುಖಂಡ ವಿಜಿ ಕುಮಾರ್ ಎ ಎಸ್. ಸ್ಥಳಕ್ಕೆ ಧಾವಿಸಿದ ತಾಲೂಕು ದಂಡಾಧಿಕಾರಿ ದಾಖಲೆಗಳನ್ನು ಶೀಘ್ರವೇ ನೀಡಲು ಭರವಸೆ. ತುರುವೇಕೆರೆ .ತಾಲೂಕು ಕಚೇರಿಯ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಮುಖ್ಯ ಕಾರ್ಯದರ್ಶಿ, ರೈತ ಹೋರಾಟಗಾರ ವಿಜಿ ಕುಮಾರ್ ಎ ಎಸ್ ಅವರು,ನಂಜುಂಡಸ್ವಾಮಿ(Prof.MD Nanjundaswamy) ಮತ್ತು ಅಂಬೇಡ್ಕರ್(Ambedkar) ಭಾವಚಿತ್ರವನ್ನು ಇಟ್ಟು ಹೋರಾಟಕ್ಕಿಳಿದಿದ್ದಾರೆ.

ಏನಿದು ಹೋರಾಟ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರ ನೀಡಿದ ವಿಜಿಕುಮಾರ್ ಎ ಎಸ್, ತಾಲೂಕು ಕಚೇರಿಗೆ ಈ ಆಫೀಸ್ ಬಗ್ಗೆ ದಾಖಲೆ ಪತ್ರಗಳನ್ನು ಮಾಹಿತಿ ಹಕ್ಕು ಅದಿನಿಯ(Right To Information Act)ಮದಡಿ ಮಾಹಿತಿ ಕೇಳಲಾಗಿತ್ತು, ಅದರಂತೆ ತಾಲೂಕು ಆಡಳಿತದ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಾಹಿತಿ ಹಕ್ಕು ಅದಿನಿಯಮದ ಅರ್ಜಿ ಗೆ 50 ಪುಟಗಳಿಗೆ 2ರೂನoತೆ ಹಣ ಸಂದಾಯ ಮಾಡಲು. ಅರ್ಜಿದಾರನಿಗೆ ತಾಲೂಕು ಕಚೇರಿ ವತಿಯಿಂದ ಹಿಂಬರಹವನ್ನು ನೀಡಿದ್ದಾರೆ, ಅದರಂತೆ ಅರ್ಜಿದಾರನು ಕೂಡ ಹಿಂಬರಹದ ಪ್ರತಿಯನ್ನು ಪಡೆದು ದಿನಾಂಕ ಮೇ 9 ರಂದು ಒಂದು ಪುಟಕ್ಕೆ 2 ರೂ ನಂತೆ 100 ರೂ ಹಣ ಸಂದಾಯ ಮಾಡಿದ್ದು, ಒಂದು ವಾರ ಕಳೆದರೂ ಅರ್ಜಿದಾರನಿಗೆ. ಅರ್ಜಿದಾರನು ಕೇಳಿದ್ದ ಯಾವುದೇ ಸಂಬಂದ ಪಟ್ಟ ದಾಖಲೆಗಳನ್ನು ನೀಡಿರುವುದಿಲ್ಲ, ತಾಲೂಕು ಕಚೇರಿ ಗೆ ಸಂಬಂದ ಪಟ್ಟ ಸಿಬ್ಬಂದಿಗಳನ್ನು ವಿಚಾರಿಸಿದರೆ ಒಬ್ಬರ ಮೇಲೆ ಒಬ್ಬರು ನೆಪಹೇಳಿಕೊಂಡು ಕಾಲ ಕಳೆಯುತ್ತಿದ್ದಾರೆ ಎಂದು ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾರೆ, ಜೊತೆಗೆ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಳ್ಳಾಟಕ್ಕೆ ಬೇಸತ್ತು ಶುಕ್ರವಾರ ಬೆಳಿಗ್ಗೆ ಸುಮಾರು 7 ಗಂಟೆ ಇಂದ ತಾಲೂಕು ಆಡಳಿತದ ಕಚೇರಿಯ ಆವರಣದಲ್ಲಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತಿದ್ದಾರೆ.

ಮಧ್ಯಾಹ್ನದ ನಂತರ ತಾಲೂಕು ದಂಡಾಧಿಕಾರಿ ವೈ ಎಂ ರೇಣುಕುಮಾರ್ ಸ್ಥಳಕ್ಕೆ ಆಗಮಿಸಿ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ರೈತ ಮುಖಂಡ ವಿಜಿ ಕುಮಾರ್ ಅವರಿಗೆ ನೀವು ಕೇಳಿರುವ ಮಾಹಿತಿಯನ್ನು ಒಮ್ಮೆ ಪರಿಶೀಲಿಸಿ ಆಡಳಿತದ ಸುಧಾರಣೆ ಮತ್ತು ಪಾರದರ್ಶಕ ಆಡಳಿತಕ್ಕೆ ಒತ್ತು ಕೊಡುತ್ತೇನೆ ಎಂಬ ಮಾತಿನೊಂದಿಗೆ ನೆಪಹಟ್ಟಿದ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಸ್ಥಳದಲ್ಲೇ ತರಾಟೆ ತೆಗೆದುಕೊಂಡು ಕೂಡಲೇ ಮಾಹಿತಿ ಕೇಳಿರುವ ರೈತ ಮುಖಂಡನಿಗೆ ಎಲ್ಲಾ ದಾಖಲೆಗಳನ್ನು ಒದಗಿಸಿ ಕೊಡಬೇಕೆಂದು ತಾಕೀತು ಮಾಡಿದರು.

ನಂತರ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ರೈತ ಮುಖಂಡ ವಿಜಿ ಕುಮಾರ್ ಅವರು ತಾಲೂಕು ದಂಡಾಧಿಕಾರಿಯವರ ಕಾರ್ಯನಿಷ್ಠೆಯನ್ನು ಮೆಚ್ಚಿ ಸಂಜೆ ಆರು ಗಂಟೆಗೆ ಉಪವಾಸ ಸತ್ಯಾಗ್ರಹವನ್ನು ಕೈ ಬಿಡುತ್ತೇನೆಂದು ಭರವಸೆ ನೀಡಿದ್ದಾರೆ.

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://www.janataa24.com/tumkur-animal-is-burnt-alive-by-a-thunderbolt/

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

Document

Leave a Reply

Your email address will not be published. Required fields are marked *