JANATAA24 NEWS DESK
Tiptur: ರೈತ ಕವಿ ಡಾ. ಪಿ.ಶಂಕರಪ್ಪ ಬಳ್ಳೇಕಟ್ಟೆರವರ ಜನ್ಮದಿನದ ಪ್ರಯುಕ್ತ ಕವಿಗೋಷ್ಠಿ,ಕರೋಕೆ ಗಾಯನ ನೃತ್ಯ,ನಾಟಕ ಪ್ರದರ್ಶನ.

ಬೆಂಗಳೂರಿನ ಬಸವೇಶ್ವರ ನಗರದ ಸಾಹಿತ್ಯ ಆಡಿಟೋರಿಯಂನಲ್ಲಿ ವಿಶ್ವಕರ್ಮ ಕಲಾತಂಡ ಶಿಡ್ಲಘಟ್ಟ ಮತ್ತು ಭಾರತೀಯ ಸಾಹಿತ್ಯ ಪರಿಷತ್ ಬೆಂಗಳೂರು ಇವರ ಸಹಯೋಗದಲ್ಲಿ ಕಲ್ಪತರು ನಾಡು ತಿಪಟೂರಿನ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ರೈತ ಕವಿ ಡಾ. ಪಿ ಶಂಕ್ರಪ್ಪ ಬಳ್ಳೇಕಟ್ಟೆ ರವರ 54ನೇ ಜನ್ಮ ದಿನಾಚರಣೆ ಕವಿಗೋಷ್ಟಿ, ಕರೋಕೆ ಗಾಯನ ನೃತ್ಯ,ನಾಟಕ ಪ್ರದರ್ಶನ ಗಳನ್ನು ಖ್ಯಾತ ನಟರು ಸಂಗೀತ ನಿರ್ದೇಶಕರು ಆದ ಶಶಿಧರ್ ಕೋಟೆ ಅವರು ಕಾರ್ಯಕ್ರಮ ಉದ್ಘಾಟಿಸಿ.. ತಮ್ಮ ಉದ್ಘಾಟನಾ ಭಾಷಣದಲ್ಲಿ ಕಲೆ ಸಾಹಿತ್ಯ ಸಂಸ್ಕೃತಿಯನ್ನು ಮೈಗೋಡಿಸಿಕೊಂಡಿರುವ ಗ್ರಾಮೀಣ ಸೊಗಡಿನ ರೈತ ಕವಿಯ ಹುಟ್ಟುಹಬ್ಬದಲ್ಲಿ ಇಂಥಹ ಸಮಾರಂಭವನ್ನು ಹಮ್ಮಿಕೊಂಡಿರುವುದು ತುಂಬಾ ಸಂತಸತಂದಿದೆ. ಗ್ರಾಮೀಣ ಪ್ರತಿಭೆಗಳು ಮುಂದೆ ಬಂದು ಇನ್ನು ಹೆಚ್ಚಿನ ಸಾಧನೆಯನ್ನು ಮಾಡಲು ಇಂಥ ಸಮಾರಂಭಗಳು ಭದ್ರಬುನಾದಿ ಎಂದು ಸಮಾರಂಭದಲ್ಲಿ ಕನ್ನಡ ಹಾಡುಗಳ ಹಾಡುತ್ತ ಕುಣಿದು ಕುಪ್ಪಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೈತಕವಿ ರೈತರೇ ಈ ಜಗದ ಜೀವಾಳ, ನಮಗೆಲ್ಲ ಅನ್ನ ನೀಡುವ ಪುಣ್ಯಾತ್ಮರು ಅವರನ್ನು ಮರೆತರೆ ನಾವೆಲ್ಲ ಮಣ್ಣು ತಿನ್ನಬೇಕಾಗುತ್ತದೆ ಅನ್ನದಾತೋ ಸುಖಿಭವ; ಸರ್ವೇ ಜನೋ ಸುಖಿನೋ ಭವಂತು; ಎಂದು ಹುಟ್ಟುಹಬ್ಬದ ಶುಭಾಶಯಗಳು ಸರ್ವರಿಗೂ ಕೋರಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಿರ್ದೇಶಕರಾದ ಭಾರತೇಶ್ ಸಂಗೀತ ನಿರ್ದೇಶಕರಾದ ರಾಮಶೇಷು ಖ್ಯಾತ ಗಾಯಕಿ ರೂಪಶ್ರೀ , ಸಮಾಜ ಸೇವಕರಾದ ಬಿಎಸ್ಏನ್ಎಲ್ ಶ್ರೀಧರ್ ಹಿರಿಯ ಪತ್ರಕರ್ತ ಡಾ.ಭಾಸ್ಕರ್, ಶುಭ ವಿಶ್ವಕರ್ಮ ಕಾರ್ಯಕ್ರಮದ ಆಯೋಜಕರಾದ ಶಿಡ್ಲಘಟ್ಟ ಶ್ರೀನಿವಾಸ್ ಸಮಾಜ ಸೇವಕರಾದ ಕೆ ಮುನಿಸ್ವಾಮಿ . ಶೆಟ್ಟಿಹಳ್ಳಿ ನಾಗರಾಜ್ ಬಿಜೇಂದ್ರ ಕುಮಾರ್ ರಂಗಪ್ಪ ಲಿಂಗರಾಜು ಕಲಾವಿದರಾದ,ನಾಗಲಾಭಿಕಾ,ಮೀನಾ ರಾಜೇಶ್ವರಿ, ಹಾಗೂ ರಂಗಭೂಮಿ ನಟ ನಟಿಯರು ಸಾಹಿತ್ಯ ಕಲಾಭಿಮಾನಿ ಭಾಗವಹಿಸಿ ಸಂಭ್ರಮಿಸಿದರು
ವರದಿ :ಮಂಜುನಾಥ್ ಡಿ ತಿಪಟೂರು
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.