Document

ನಿಮ್ಮನ್ನು ನಂಬಿಕೊಂಡಿರುವ ಕುಟುಂಬದ ಸದಸ್ಯರಿಗಾಗಿ ವಿದ್ಯಾರ್ಥಿಗಳು ಹೆಲ್ಮೆಟ್ ಧರಿಸಿ, ಸಂಚಾರಿ ನಿಯಮ ಪಾಲಿಸಿ, ಸಿಪಿಐ ಸುರೇಶ್

Janataa24 NEWS DESK

IMG 20240120 WA0023

ಕುಟುಂಬದ ಸದಸ್ಯರಿಗಾಗಿ ವಿದ್ಯಾರ್ಥಿಗಳು ಸಂಚಾರಿ ನಿಯಮ ಪಾಲಿಸಿ, ಸಿಪಿಐ ಸುರೇಶ್

ಪಾವಗಡ: ವಿದ್ಯಾರ್ಥಿಗಳು ತಮ್ಮ ಕುಟುಂಬಗಳಲ್ಲಿ ಇರುವಂತಹ ಸದಸ್ಯರ ಶ್ರೇಯೋಭಿವೃದ್ಧಿಗಾಗಿ ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದು ಪಾವಗಡ ಪೊಲೀಸ್ ಠಾಣೆಯ ಸಿಪಿಐ ಸುರೇಶ್ ತಿಳಿಸಿದ್ದಾರೆ.

IMG 20240120 WA0018



ಗುರುವಾರ ಪಾವಗಡ ಪಟ್ಟಣದ ಶ್ರೀಮತಿ ಮತ್ತು ಶ್ರೀ ವೈ ರಂಗಯ್ಯ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು

ಕಾನೂನು ಇತ್ತೀಚಿನ ದಿನಗಳಲ್ಲಿ ಕಠಿಣವಾಗುತ್ತಿದೆ, ಸಂಸಾರಿ ನಿಯಮಗಳಲ್ಲಿ ಅನೇಕ ಬದಲಾವಣೆಗಳಾಗಿದ್ದು ದಂಡದ ಪ್ರಮಾಣವು ಸಹ ಹೆಚ್ಚಾಗುತ್ತಿದೆ, ವಿದ್ಯಾರ್ಥಿಗಳು ಪರವಾನಗಿ ಇಲ್ಲದೆ ವಾಹನವನ್ನು ಚಲಾಯಿಸುವುದು ಕಾನೂನು ರೀತಿ ಅಪರಾಧವಾಗಿದ್ದು ಇಂತಹ ಕೆಲಸಕ್ಕೆ ಮುಂದಾಗಬೇಡಿ, ನಿಮ್ಮ ಕುಟುಂಬದ ಸದಸ್ಯರ ಹಿತದೃಷ್ಟಿಯಿಂದ ಅವರು ನಿಮ್ಮ ಮೇಲೆ ಇಟ್ಟಿರುವಂತಹ ವಿಶ್ವಾಸಕ್ಕೆ ನೀವು ಧಕ್ಕೆ ತರದ ಹಾಗೆ ನಿಮ್ಮ ಜೀವನಕ್ಕೆ ಯಾವುದೇ ಅಪಾಯ ಬಾರದ ಹಾಗೆ ಎಚ್ಚರ ವಹಿಸಲು ಎಲ್ಲಾ ನಿಯಮಗಳನ್ನು ಪಾಲಿಸಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

IMG 20240120 WA0021



ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಪ್ರೊ ಪಿ ಲಿಂಗರಾಜು
ವಿದ್ಯಾರ್ಥಿಗಳು ಕಾನೂನನ್ನು ಗೌರವಿಸಿದರೆ ಕಾನೂನು ವಿದ್ಯಾರ್ಥಿಗಳನ್ನು ಗೌರವಿಸುತ್ತದೆ, ದೇಶದ ಒಳಭಾಗದಲ್ಲಿರುವ ಜನರು ನೆಮ್ಮದಿಯಿಂದ ಜೀವನ ಸಾಗಿಸಲು ಮಿಲಿಟರಿ ಮತ್ತು ಪೊಲೀಸರ ಪಾತ್ರ ಅಗ್ರಗಣ್ಯ, ಅಪ್ರಾಪ್ತರು ಯಾರು ಸಹ ವಾಹನವನ್ನು ಚಲಾಯಿಸಬೇಡಿ, ಇತ್ತೀಚಿಗಷ್ಟೇ ಕಾಲೇಜಿನ ವಿದ್ಯಾರ್ಥಿಯೊಬ್ಬ ಹೆಲ್ಮೆಟ್ ಹಾಕದೆ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ ಎಂದು ನೆನಪಿಸಿಕೊಂಡು ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿದರು

ಕಾರ್ಯಕ್ರಮದಲ್ಲಿ ಪಾವಗಡ ಪೊಲೀಸ್ ಠಾಣೆಯ ಪಿಎಸ್ಐ ಗುರುನಾಥ್ ಮಾತನಾಡಿದರು.

IMG 20240120 WA0022



ಈ ಸಂದರ್ಭದಲ್ಲಿ ಎಎಸ್ಐ ಈಶ್ವರಪ್ಪ, ಕಾಲೇಜಿನ ವ್ಯವಸ್ಥಾಪಕರಾದ ಬಿಪಿ ಪ್ರಹ್ಲಾದ್, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕೆಂಪಯ್ಯ, ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಮಹಾಲಕ್ಷ್ಮಿ, ದೈಹಿಕ ನಿರ್ದೇಶಕರಾದ ಹನುಮಂತರಾಯಪ್ಪ, ಸಹಾಯಕ ಪ್ರಾಧ್ಯಾಪಕರುಗಳಾದ ಮಹೇಶ್ ಗಿರೀಶ್ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

IMG 20240120 WA0019

ವರದಿ: ಇಮ್ರಾನ್ ಉಲ್ಲಾ. ಪಾವಗಡ

Document

Leave a Reply

Your email address will not be published. Required fields are marked *