Janataa24 NEWS DESK

ಗ್ರಂಥಾಲಯಕ್ಕೆ ಸಾಲು ಸಾಲು ಮಕ್ಕಳ ಆಗಮನ, ಪೋಷಕರಿಗೆ ಖುಷಿಯೋ ಖುಷಿ.
ತುರುವೇಕೆರೆ: ತಾಲೂಕಿನ ಮಾಯಸಂದ್ರ ಹೋಬಳಿ ಸೊರವನಹಳ್ಳಿ ಗ್ರಾಮ ಪಂಚಾಯಿತಿಗೆ ಹೊಂದಿಕೊಂಡಂತೆ ಇರುವ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಕ್ಕೆ ಪುಟ್ಟ ಮಕ್ಕಳ ಆಗಮನದಿಂದ ಗ್ರಂಥಾಲಯಕ್ಕೆ ಮೆರಗು ಕೊಟ್ಟಂತಾಗಿದೆ.

ಈ ಗ್ರಂಥಾಲಯಕ್ಕೆ ಇನ್ನು ಎಂಟನೇ ತರಗತಿಯಿಂದ 11ನೇ ತರಗತಿಯವರೆಗೂ ವಿದ್ಯಾರ್ಥಿಗಳು ಆನ್ಲೈನ್ ಪಾಠಗಳಿಗೆ ಬರಬಹುದು ಎಂದು ನಿರೀಕ್ಷಣೆಯಲ್ಲಿದ್ದಾರೆ ಗ್ರಂಥಾಲಯದ ಮೇಲ್ವಿಚಾರಕರು.
ಒಟ್ಟಾರೆ ಪುಟ್ಟ ಮಕ್ಕಳ ಆಗಮನದಿಂದ ಈ ಗ್ರಂಥಾಲಯವಂತು ಜಗಮಗಿಸುತ್ತಿದ್ದು, ಈ ಗ್ರಂಥಾಲಯಕ್ಕೆ ಬೇಕಾದ ಮೂಲಸೌಕರ್ಯಗಳನ್ನು ಗ್ರಾಮ ಪಂಚಾಯಿತಿ ಒದಗಿಸಿ ಕೊಡಬೇಕಾಗಿರುವುದರಿಂದ ಎಲ್ಲಾ ಪೋಷಕರು ಮತ್ತು ಸಾರ್ವಜನಿಕರಲ್ಲಿ ಹೆಚ್ಚು ನಿರೀಕ್ಷೆ ಮೂಡಿಸಿದೆ.
ಒಟ್ಟಾರೆ ನೂತನ ಡಿಜಿಟಲ್ ಗ್ರಂಥಾಲಯ ಪುನರ್ ನಿರ್ಮಾಣ ಮಾಡಿರುವ ಸೊರವನಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಮತ್ತು ಜನಪ್ರತಿನಿಧಿಗಳು, ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಿರುವುದು ಸ್ವಾಗತರ್ಹವಾಗಿದೆ.

ನಮ್ಮ ಸುದ್ದಿ ವಾಹಿನಿ ಕಡೆಯಿಂದ ಪಂಚಾಯತಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಮಕ್ಕಳ ಶಿಕ್ಷಣಕ್ಕಾಗಿ ಇನ್ನೂ ಹೆಚ್ಚು ಹೆಚ್ಚು ಒತ್ತುಕೊಟ್ಟು ಅವರ ವಿದ್ಯಾಭ್ಯಾಸಕ್ಕೆ ನೆರವಾಗಲಿ ಎಂದು ಆಶಿಸೋಣ.
ವರದಿ
Qತುರುವೇಕೆರೆ: ಮಂಜುನಾಥ್