Janataa24 NEWS DESK

ಜ21 ರಂದು ಮೌತಾಶಾ ಹಾಗೂ ಪಿತಾಶಾ ದರ್ಗಾದ ಉರುಸ್ ಕಾರ್ಯಕ್ರಮಕ್ಕೆ ಶಾಸಕ ಎಚ್.ವಿ.ವೆಂಕಟೇಶ್‌ರನ್ನು ಆಹ್ವಾನಿಸಿದ ಮುಸ್ಲಿಂ ಯುವಕರು.
ಪಾವಗಡ: ಪಟ್ಟಣದ ಸಿರಾ ರಸ್ತೆಯ ಮೌತಾಶಾ ಹಾಗೂ ಪಿತಾಶಾ ದರ್ಗಾದ ಉರುಸ್ ಕಾರ್ಯಕ್ರಮವನ್ನು ಇದೇ ಜ,21ರಂದು ಬೆಳಗ್ಗೆ 10ಗಂಟೆಗೆ,ಪಟ್ಟಣದ ಮಸೀದಿಯಲ್ಲಿ ಹಮ್ಮಿಕೊಂಡಿದ್ದು ಕಾರ್ಯಕ್ರಮದ ಹಿನ್ನಲೆಯಲ್ಲಿ ಸ್ಥಳೀಯ ಶಾಸಕರಾದ ಎಚ್.ವಿ.ವೆಂಕಟೇಶ್ ಅವರನ್ನು ನಗರದ ಮುಸಲ್ಮಾನ್ ಬಾಂಧವರು ಸೇರಿ ಆಹ್ವಾನ ಪತ್ರ ನೀಡಿ,ಆಹ್ವಾನಿಸಿದರು.
21ರಂದು ಪಾವಗಡ ಪಟ್ಟಣದ ಶಿರಾ ರಸ್ತೆಯ ಹಸರ್ತ್ ಮೌತಶಾವಲ್ಲಿ.ಹಸರ್ತ್ ಫಿದಾಶವಲ್ಲಿ.ಫರಿದುಲ್ಲಾ ಷಾ ಖಾಧರಿ ಸಂದಾಲ್. ಖಾವಲಿ. ಇತರೆ ಅನೇಕ ಮಂದಿ ಗಣ್ಯರು ಭಾಗವಹಿಸಲಿದ್ದಾರೆ. ದಿನಾಂಕ 21-1-2024 ರ ಭಾನುವಾರ ಹಮ್ಮಿಕೊಳ್ಳಲಾಗಿದೆ ಎಂಬುದಾಗಿ ಮಸ್ಸಿದ್ ದೇ ಅಜಾಂ ಯುವ ಕಮಿಟಿ ರವರಿಂದ ಆಯೋಜನೆ ಮಾಡಲಾಗಿದೆ.
ಈ ವೇಳೆ ಮುಖಂಡ ವೆಂಕಟಮ್ಮನಹಳ್ಳಿ ನಾಗೇಂದ್ರರಾವ್ (ನಾನಿ) ಮುಯಿನ್ ಬಶೀರ್ ಹಾಗೂ ಮೋಹಿತ್ ಸೇರಿದಂತೆ ಇತರೆ ಸ್ಥಳೀಯ ಹಜಾರತ್ ಮೌತಷ ಹಾಗೂ ಪಿತಾಶ ಮಸೀದಿಯ ಎಲ್ಲಾ ಮುಸ್ಲಿಂ ಭಾಂಧವರು ಉಪಸ್ಥಿತರಿದ್ದರು.
ವರದಿ: ಇಮ್ರಾನ್ ಉಲ್ಲಾ.ಪಾವಗಡ.