JANATAA24 NEWS DESK
Pavagada: ಭ್ರಷ್ಟಾಚಾರ ತಡೆಗೆ ಮುಂದಾದ ಇಓ ಉತ್ತಮ್ ಅವರಿಗೆ ಕಂಟಕವೇ?

ಪಾವಗಡ: ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಂಡ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ (ಇಓ) ಉತ್ತಮ್ ಅವರು ಇದೀಗ ಕಂಟಕಕ್ಕೆ ಸಿಲುಕಿದ್ದಾರೆಯೇ ಎಂಬ ಪ್ರಶ್ನೆ ಪಾವಗಡ ತಾಲ್ಲೂಕಿನಲ್ಲಿ ಉದ್ಭವಿಸಿದೆ.
ಪಾವಗಡ ತಾಲ್ಲೂಕಿನ 34 ಗ್ರಾಮ ಪಂಚಾಯಿತಿಗಳ ಪಿಡಿಒಗಳು, ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿಗಳು ಒಟ್ಟಾಗಿ ಸೇರಿ ಶಾಸಕರನ್ನೇ ತಮ್ಮ ಬಳಿ ಕರೆಸಿ ಇಓ ಉತ್ತಮ್ ವಿರುದ್ಧ ದೂರು ಸಲ್ಲಿಸಿರುವುದು ತಾಲ್ಲೂಕಿನಲ್ಲಿ ಹಿಂದೆಂದೂ ಕಾಣದ ಅಪರೂಪದ ಬೆಳವಣಿಗೆಯಾಗಿದೆ. ಈ ಘಟನೆಯಿಂದಾಗಿ ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳು ಮೂಡಿವೆ.
ದೂರುಗಳ ಹಿಂದಿನ ಕಾರಣವೇನು?
34 ಪಂಚಾಯಿತಿಗಳ ಪಿಡಿಒಗಳು ಮತ್ತು ಸಿಬ್ಬಂದಿಗಳು ಶಾಸಕರಿಗೆ ನೀಡಿದ ದೂರಿನಲ್ಲಿ, ಸಭೆಗಳಲ್ಲಿ ಇಓ ಅವರು ಏಕವಚನದಲ್ಲಿ ಮಾತನಾಡುತ್ತಾರೆ, ಪಿಡಿಒಗಳ ಮೇಲೆ ಕ್ರಮ ಕೈಗೊಳ್ಳುತ್ತಾರೆ ಎಂಬ ಆರೋಪಗಳು ಕೇಳಿಬಂದಿವೆ. ಇದಲ್ಲದೆ, ಇಓ ಉತ್ತಮ್ ಅವರು 24 ಪಿಡಿಒಗಳ ದಾಖಲೆಗಳನ್ನು ಸಂಗ್ರಹಿಸಿ, ಸುಮಾರು 1ಟೂ4 ನೋಟಿಸ್‌ಗಳನ್ನು ಜಾರಿ ಮಾಡಿರುವುದು ಕೂಡ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಭ್ರಷ್ಟಾಚಾರಕ್ಕೆ ಕಡಿವಾಣವೇ ಕಂಟಕವಾಯಿತೇ?
ತಾಲ್ಲೂಕಿನ ಕೆಲ ಪಂಚಾಯಿತಿಗಳಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಈ ಸಂಬಂಧ ಇಓ ಉತ್ತಮ್ ಅವರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದು ಕೆಲವರಿಗೆ ಅಸಹ್ಯವಾಗಿದೆಯೇ ಎಂಬ ಪ್ರಶ್ನೆ ಮೂಡಿದೆ.
ಪಿಡಿಒಗಳು ತಮ್ಮ ಇಷ್ಟಬಂದಂತೆ ಕಚೇರಿಗೆ ಬಂದು ಹೋಗುತ್ತಿದ್ದ ಪ್ರಕರಣಗಳಲ್ಲಿ ಹಾಜರಾತಿ ಪರಿಶೀಲನೆ ನಡೆಸಿ, ಗೈರು ಹಾಜರಿದ್ದವರಿಗೆ ‘ಆಬ್ಸೆಂಟ್’ ಹಾಕಿರುವುದೂ ವಿವಾದಕ್ಕೆ ಕಾರಣವಾಗಿದೆ. ಇದೇ ರೀತಿ, ಕೆಲ ಪಂಚಾಯಿತಿಗಳಲ್ಲಿ ಅನುದಾನ ದುರ್ಬಳಕೆ ತಡೆಯಲು ಡ್ಯಾಗಲ್ ಲಾಕ್ ಮಾಡಿದ ಪರಿಣಾಮ ಹಣದ ದುರುಪಯೋಗಕ್ಕೆ ಅವಕಾಶ ಇಲ್ಲದಂತಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಉದಾಹರಣೆಗಳೇನು?
ಕೂಟಗುಡ್ಡ ಪಂಚಾಯಿತಿಯಲ್ಲಿ ಡ್ಯಾಗಲ್ ದುರ್ಬಳಕೆ ಮೂಲಕ ಲಕ್ಷಾಂತರ ರೂ. ಹಣ ಡ್ರಾ ಮಾಡಿರುವ ಆರೋಪಗಳು, ಪಟ್ಟಣದ ರೊಪ್ಪ ಪಂಚಾಯಿತಿಯಲ್ಲಿ ಇತ್ತೀಚೆಗೆ ನಡೆದ ಅಧ್ಯಕ್ಷರ ಅವಿಶ್ವಾಸ ಪ್ರಸ್ತಾವದ ವೇಳೆ ಲಕ್ಷಾಂತರ ರೂ. ಗಿಫ್ಟ್‌ಗಳ ಕುರಿತು ಗುಸುಗುಸುಗಳು ಕೇಳಿಬಂದಿವೆ.
ಈ ಹಿಂದೆ ಗುಜನಾಡು, ಕನ್ನಮೇಡಿ, ಬ್ಯಾಡನೂರು ಪಂಚಾಯಿತಿಗಳಲ್ಲಿ ಪಿಡಿಒಗಳು ಸಸ್ಪೆಂಡ್ ಆಗಿರುವ ನಿದರ್ಶನಗಳೂ ಇವೆ.
ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘನೆ?
ಬಹುತೇಕ ಪಂಚಾಯಿತಿಗಳಲ್ಲಿ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಕೇಳಿದ ಮಾಹಿತಿಯನ್ನು ನೀಡದೆ ಇರುವ ದೂರುಗಳು ಹೆಚ್ಚಾಗಿ ಕೇಳಿಬಂದಿವೆ. ಅಲ್ಲದೆ, ಹಲವಾರು ಪಿಡಿಒಗಳು ತುಮಕೂರು ಜಿಲ್ಲೆಯಿಂದ ಓಡಾಟ ಮಾಡುತ್ತಿರುವುದೂ ಆಡಳಿತಾತ್ಮಕ ಸಮಸ್ಯೆಯಾಗಿ ಪರಿಣಮಿಸಿದೆ.
Pavagada: ಶಾಸಕರ ಪಾತ್ರವೇನು?
ಇಂತಹ ಗಂಭೀರ ಆರೋಪಗಳ ನಡುವೆ, ಭ್ರಷ್ಟಾಚಾರ ತಡೆಯಲು ಮುಂದಾದ ಇಓ ವಿರುದ್ಧ ದೂರು ಸಲ್ಲಿಸಿರುವುದು ಸರಿಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ. ದೂರು ಸ್ವೀಕರಿಸುವ ಮೊದಲು ಶಾಸಕರು ಎರಡೂ ಕಡೆಗಳ ವಿಚಾರ ತಿಳಿದು ಸಮಗ್ರ ತನಿಖೆ ನಡೆಸಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.
ಪ್ರಶ್ನಾರ್ಥಕ ಸ್ಥಿತಿ
ಎಲ್ಲಾ ಪಂಚಾಯಿತಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೆ ಪಿಡಿಒಗಳ ಮೇಲೆ 1ಟೂ 4ರ ತನಕದ ನೋಟಿಸ್‌ಗಳು ಹಾಗೂ ಗೈರು ಹಾಜರಿ ಕ್ರಮ ಏಕೆ? ಸಭೆಗಳಲ್ಲಿ ಪಿಡಿಒಗಳು ಮತ್ತು ಸಿಬ್ಬಂದಿಗಳು ಇಓ ವಿರುದ್ಧ ದೂರು ನೀಡಲು ನಿಜವಾದ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಒಟ್ಟಿನಲ್ಲಿ, ಭ್ರಷ್ಟಾಚಾರದ ವಿರುದ್ಧ ಕೆಲಸ ಮಾಡುವ ಅಧಿಕಾರಿಗಳಿಗೆ ಅಡೆತಡೆಗಳು ಸಹಜವಾಗಿ ಬಿಟ್ಟಿವೆಯೇ ಎಂಬ ಅನುಮಾನ ಪಾವಗಡ ತಾಲ್ಲೂಕಿನಲ್ಲಿ ಗಟ್ಟಿಯಾಗಿ ಕೇಳಿಬರುತ್ತಿದೆ.
ವರದಿ: ಇಮ್ರಾನ್ ಉಲ್ಲಾ ಪಾವಗಡ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.