Pavagada: ಗುರು ಶಿಷ್ಯರ ಸಮ್ಮಿಲನ ಕಾರ್ಯಕ್ರಮ.

ಪಾವಗಡ ತಾಲೂಕಿನ ಕೆಟಿಹಳ್ಳಿ ಗ್ರಾಮದ ಶ್ರೀ ರಾಮ ಗ್ರಾಮಾಂತರ ಪ್ರೌಢಶಾಲೆಯ 1996-97ನೇ ಸಾಲಿನ 10ನೇ
ತರಗತಿಯ ವಿದ್ಯಾರ್ಥಿಗಳು ಆಯೋಜನೆ ಮಾಡಲಾಗಿದ್ದ
ಗುರುವಂದನಾ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನಡೆಯಿತು. ಶಿಕ್ಷಕರನ್ನು ಹಾಗೂ ಗಣ್ಯರನ್ನುಮೆರವಣಿಗೆಯ ಮೂಲಕ ವೇದಿಕೆಗೆ ಕರೆತರಲಾಯಿತು.
ಆಗಮಿಸಿದ ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ಟಿ. ಸಣ್ಣರಂಗಪ್ಪ,ನಿವೃತ್ತ ಶಿಕ್ಷಕರಾದ ಲೇ/ಚಿನ್ನಸ್ವಾಮಿ ಯವರ ಸುಪುತ್ರ,ಬಿ. ತಿಮ್ಮಯ್ಯ, ಪಿ.ಜಿ.ಶ್ರೀನಿವಾಸ್, ದೈಹಿಕ ಶಿಕ್ಷಕರಾದ ಆರ್. ಕೃಷ್ಣಾರೆಡ್ಡಿ, ಕುಮಾರ್, ಸಹಾಯಕರಾದ
ರಂಗನಾಥ್, ನರಸಯ್ಯ ಲೇ//ಬೈಯ್ಯಪ್ಪ ರವರಿಗೆ
ಪುಷ್ಪಾರ್ಚನೆ ಮೂಲಕ ಬೆಳ್ಳಿ ಕಾಣಿಕೆಯೊಂದಿಗೆ ವಿಶೇಷ
ಗೌರವ ಸಮರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳು ಸಾಲು ಸಾಲಾಗಿ ಗುರುಗಳಪಾದಗಳಿಗೆ ನಮನ ಸಲ್ಲಿಸಿದರು. 22ವರ್ಷಗಳ ನಂತರ ಸಮಾಗಮವಾದ ಈ ಗುರುಶಿಷ್ಯರ ಭಾವುಕತೆ ಎಲ್ಲರ
ಕಣ್ಣಂಚಲ್ಲಿ ಹನಿ ತರಿಸಿತು. ಇತ್ತೀಚೆಗೆ ನಿವೃತ್ತರಾದ ಜಿ. ಕೆ.
ಕಾಂತರಾಜ್ ಹಾಗೂ ಮುಖ್ಯ ಶಿಕ್ಷಕರಾದ ಟಿ. ನಾಗರಾಜ್ ಹಳೆ ವಿದ್ಯಾರ್ಥಿಗಳು ಅದ್ದೂರಿಯಾಗಿ ಸನ್ಮಾನಿಸಿ ಗೌರವಿಸಿದರು.
ಇವಳೆ ಮಾಜಿ ಶಾಸಕ ಕೆಂ ತಿಮ್ಮರಾಯಪ್ಪ.ಹಳೆ ವಿದ್ಯಾರ್ಥಿ ಕ.ಟಿ .ಹಳ್ಳಿ ಮಂಜುನಾಥ್ ಸಮಾಜ ಸೇವಕ ಹಾಗೂ ಗುತ್ತಿಗೆದಾರ ಅಥವಾ ಸ್ಥಳೀಯ ಪಂಚಾಯಿತಿ ಸದಸ್ಯರು ಹಿರಿಯ ಮುಖಂಡರು ಹಾಗೂ ಹಳೇ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ: ಇಮ್ರಾನ್ ಉಲ್ಲಾ ಪಾವಗಡ.