Janataa24 NEWS DESK
Pavagada: ಪಾವಗಡ ತಾಲೂಕು ಬಿಜೆಪಿ ನೂತನ ಸಾರಥಿಯಾಗಿ ಮಂಗಳವಾಡ ರಂಗಣ್ಣ ಆಯ್ಕೆ.

ಪಾವಗಡ: ಬಿಜೆಪಿ ಮಂಡಲ ನೂತನ ಪಧಾದಿಕಾರಿಗಳ ಪದಗ್ರಹಣ ಸಮಾರಂಭ ಪಟ್ಟಣದಲ್ಲಿ ಜರುಗಿತು.ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿಗಳಾದ ಶಿವಪ್ರಸಾದ್ ರಂಗಣ್ಣ ಎಂಬ ಸಮರ್ಥ ಕಾರ್ಯಕರ್ತನಿಗೆ ಇವತ್ತು ಜವಾಬ್ದಾರಿ ಲಭಿಸಿದೆ,ಜನನಾಯಕನಾಗಿ ಬೆಳೆಯಬೇಕಾದರೆ ಹುದ್ದೆಯ ಅಗತ್ಯವಿಲ್ಲ. ನಿಮ್ಮ ನಿಮ್ಮ ಸ್ಥಳದಲ್ಲಿ ನೀವು ಜನರ ಸಂಕಷ್ಟಗಳಿಗೆ ಸ್ಪಂದಿಸಿದರೆ ಸಾಕು. ನಿಮ್ಮನ್ನು ಪಕ್ಷದ ಪ್ರಮುಖರು ಗುರುತಿಸುತ್ತಾರೆ.
ಆದ್ದರಿಂದ ಪಕ್ಷದ ಕಾರ್ಯಕರ್ತರು ನಾಯಕತ್ವ ಗುಣವನ್ನು ಬೆಳೆಸಿಕೊಳ್ಳಬೇಕು. ತಳಮಟ್ಟದ ಕಾರ್ಯಕರ್ತರು ಕೆಲಸ ಮಾಡಿದರೆ ಮಾತ್ರ ನಮ್ಮ ಅಭ್ಯರ್ಥಿ ಗೆಲುವು ಸಾಧಿಸಲು ಸಾಧ್ಯ,ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯಾರೇ ಪಕ್ಷದ ಅಭ್ಯರ್ಥಿಯಾದರೂ ಅವರನ್ನು ಗೆಲ್ಲಿಸುವ ಹೊಣೆ ನಮ್ಮದು,
ಬಿಜೆಪಿ ಪಕ್ಷದ ಕಾರ್ಯಕರ್ತರು ಬಾರಿ ವಿಭಿನ್ನವಾಗಿರುತ್ತಾರೆ, ಒಬ್ಬ ಸಾಮಾನ್ಯ ಕಾರ್ಯಕರ್ತರು ಕೂಡ ಉನ್ನತ ಹುದ್ದೆ ಅಲಂಕರಿಸುವ ಏಕೈಕ ಪಕ್ಷ ಬಿಜೆಪಿಯಾಗಿದೆ ಎಂದರು.

ನೂತನ ಅಧ್ಯಕ್ಷರಾದ ರಂಗಣ್ಣರವರಿಗೆ ಬಿಜೆಪಿ ಧ್ವಜ ಹಸ್ತಾಂತರಿಸಿ ಶುಭಹಾರೈಸಿ ಮಾತನಾಡಿದ ಮಧುಗಿರಿ ಸಂಘಟನಾತ್ಮಕ ಜಿಲ್ಲೆಯ ಅಧ್ಯಕ್ಷರಾದ ಹನುಮಂತೇಗೌಡ ರವರು ನೂತನ ತಂಡವು ಸಾಮಾನ್ಯ ಕಾರ್ಯಕತರ ಜತೆಯಾಗಿ ಕೆಲಸ ಮಾಡುವುದೇ ನಮ್ಮ ಗುರಿಯಾಗಿದೆ ಕಾರ್ಯಕರ್ತರು ಮುಖಂಡರು ಪಕ್ಷವನ್ನು ಬೂತ್ ಮಟ್ಟದಿಂದ ಇನ್ನಷ್ಟು ಸಂಘಟಿಸುವ ಕೆಲಸವನ್ನು ಮಾಡಬೇಕು.
ಮುಂಬರುವ ಚುನಾವಣೆಗೆ ಸಜ್ಜಾಗಿ ಪಕ್ಷಕ್ಕಾಗಿ, ರಾಷ್ಟ್ರೀಯ ವಿಚಾರಕ್ಕಾಗಿ ಕೆಲಸ ಮಾಡಬೇಕಾಗಿದೆ, ಕೇಂದ್ರ ಸರ್ಕಾರದ ಸಾಧನೆ ಹಾಗೂ ಕಾಂಗ್ರೆಸ್ ನ ದುರಾಡಳಿತದ ಬಗ್ಗೆ ಜನರಿಗೆ ಮನಮುಟ್ಟುವಂತೆ ಜಾಗೃತಿ ಮೂಡಿಸಬೇಕಾಗಿದೆ, ಆದ್ದರಿಂದ ಮಂಡಲದಲ್ಲಿ ನೂತನ ಪದಾಧಿಕಾರಿಯಾಗಿರುವ ನೀವುಗಳು ಪಕ್ಷ ನಮಗೆ ಕೊಟ್ಟಿರುವ ಜವಾಬ್ದಾರಿ ಅಚ್ಚುಕಟ್ಟಾಗಿ ನಿರ್ವಹಿಸಬೇಕಾಗಿದೆ, ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಬೇಕಾಗಿದೆ, ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಗಿರೀಶ್, ಸಾಕೇಲ್ ಶಿವಕುಮಾರ್, ಕೊತ್ತೂರು ಹನುಮಂತರಾಯಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರುದ್ರೇಶ್, ಜಿಲ್ಲಾ ಕಾರ್ಯದರ್ಶಿಗಳಾದ ಬ್ಯಾಡನೂರು ಶಿವು, ಅರುಣ್ , ಜಿಲ್ಲಾ ವಕ್ತಾರರಾದ ಚೈತನ್ಯ ಪ್ರಭು,ಜಿಲ್ಲಾ ಮೋರ್ಚಾ ಪದಾಧಿಕಾರಿಗಳಾದ ವಿಜಯಲಕ್ಷ್ಮಿ,ಪುರುಷೋತ್ತಮ,ಪ್ರಸಾದ್ ಬಾಬು,
ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಅಲ್ಕುಂದ್ ರಾಜ್, ನವೀನ್ ಸೀತಾರಾಮ್ ಹಾಗೂ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರುಗಳು ಹಾಜರಿದ್ದರು,
ವರದಿ: ಇಮ್ರಾನ್ ಉಲ್ಲಾ ಪಾವಗಡ
https://youtube.com/@janataa24?si=XsFcych2GMH0O6Gv
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv