Document

ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆ ಆಲಿಸಿ ಜನರ ಮನಸ್ಸು ಗೆಲ್ಲಬೇಕು: ಜಿಲ್ಲಾಧಿಕಾರಿ ಶುಭ ಕಲ್ಯಾಣ್

ಜಿಲ್ಲಾಧಿಕಾರಿ ಜನ ಸಂಪರ್ಕ ಸಭೆಗೆ ಅರ್ಜಿಗಳ.ಸುರಿಮಳೆ

Janataa24 NEWS DESK

IMG 20240109 WA0013

ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆ ಆಲಿಸಿ ಜನರ ಮನಸ್ಸು ಗೆಲ್ಲಬೇಕು:ಜಿಲ್ಲಾಧಿಕಾರಿ ಶುಭ ಕಲ್ಯಾಣ್.

IMG 20240109 WA0012





ಪಾವಗಡ: ಜಿಲ್ಲಾಧಿಕಾರಿ ಜನ ಸಂಪರ್ಕ ಸಭೆಗೆ ಅರ್ಜಿ ನೀಡಲು ನೂರಾರು ಮಂದಿ ಸರದಿ ಸಾಲಿನಲ್ಲಿ ನಿಂತು ಅರ್ಜಿ ನೀಡಿದ್ದು ವಿಶೇಷವಾಗಿತ್ತು.

IMG 20240109 WA0015



ಪಾವಗಡ ಪಟ್ಟಣದ ಎಸ್.ಎಸ್.ಕೆ.ಬಯಲು ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳು ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ತುಮಕೂರು ಜಿಲ್ಲೆಗೆ 138ಕೋಟಿ ಬರ ಪರಿಹಾರಕ್ಜಾಗಿ ಹಣ ಮೀಸಲಿಡಲಾಗಿದೆ ಜಿಲ್ಲಾಧಿಕಾರಿ ಸಂಕ್ರಾಂತಿ ಹಬ್ಬದ ಒಳಗೆ ರೈತರ ಖಾತೆಗೆ ಹಣ ಜಮೆ ಮಾಡಲಾಗುತ್ತದೆ ಎಂದರು.
ತಾಲೂಕಿನ ಬರ ವಿಚಾರವಾಗಿ ತಾಲ್ಲೂಕು ಆಡಳಿತ ಕೆಲಸ ಮಾಡುತ್ತಿದ್ದು 85% ಬರದ ಸಮೀಕ್ಷೆ ಕೈಗೊಳ್ಳಲು ಮುಂದಾಗಿದೆ. ಈಗಾಗಲೇ ಜಿಲ್ಲೆಯ ಹಲವುಕಡೆಗಳಲ್ಲಿ ಜನತಾ ದರ್ಶನ ಕಾರ್ಯಗಳನ್ನು ಮಾಡಲಾಗುತ್ತಿದೆ ಇದರಿಂದ ಸಾರ್ವಜನಿಕರಿಂದ ಉತ್ತಮ ಮೆಚ್ಚುಗೆ ವ್ಯೆಕ್ತವಾಗಿದೆ. ಹಾಸ್ಟೆಲ್ ಗಳ ಬಗ್ಗೆ ಸಮಸ್ಯೆಗಳು ಇದ್ದಲ್ಲಿ ತಿಳಿಸಿ ಎಂದರು.



ಸಾರ್ವಜನಿಕರಿಂದ ಬಂದ ಪ್ರಮುಖ ದೂರುಗಳ ಪಾರ್ಕ್ ಒತ್ತುವರಿ,ರಾಜಕಾಲುವೆ ಒತ್ತುವರಿ,ಬೈಪಾಸ್ ವ್ಯವಸ್ಥೆ ಕಲ್ಪಿಸಬೇಕು.

IMG 20240109 WA0014

ಅವೈಜ್ಞಾನಿಕ ರೀತಿಯಲ್ಲಿ ನಿರ್ಮಾಣ ಮಾಡಿರುವ ಚರಂಡಿ ಕಾಮಗಾರಿ,ರೈತರ ಬೆಳೆ ನಷ್ಟ ಪರಿಹಾರ,ಪುರಸಭೆಯ ವಾಣಿಜ್ಯ ಮಳಿಗೆಗಳು ಕಳೆದ ಇಪ್ಪತ್ತು ವರ್ಷಗಳಿಂದ ಹರಾಜು ಪ್ರಕ್ರಿಯೆ ಮಾಡದೆ ಇರುವ ಬಗ್ಗೆ,ದೇವಸ್ಥಾನ ಒತ್ತುವರಿ, ಸರ್ಕಾರದ ಗ್ಯಾರಂಟಿ ಯೋಜನೆ ಗೃಹ ಲಕ್ಷ್ಮಿ ಯೋಜನೇಯ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಬಾರದ ವಿಷಯ ಬಗ್ಗೆ, ಗ್ರಾಮೀಣ ಪ್ರದೇಶದ ದೇವರಬೆಟ್ಟ ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂಬುದರ ಬಗ್ಗೆ, ಸೋಲಾರ್ ಗಾಗಿ ನೀಡಿದ ಜಮೀನಿನ ರೈತರಿಗೆ ಸರಿಯಾದ ಹಣ ಕೊಡದೇ ಸತಾಯಿಸುತ್ತಿರುವ ಬಗ್ಗೆ ಮಹಿಳಾ ರೈತರಿಂದ ದೊರು.

ಮಹಿಳಾ ಸಂಘಟನೆ ಕಾರ್ಯಕರ್ತರಿಗೆ ಕಾರ್ಯಚಟುವಟಿಕೆಗಳನ್ನು ಮಾಡಲು ಅವರದೇ ಯಾದ ಕಚೇರಿ ವ್ಯವಸ್ಥೆ ಮಾಡಿಕೊಡಬೇಕು ಎಂಬುದಾಗಿ ಮಹಿಳಾ ಸ್ತ್ರೀಶಕ್ತಿ ಸಂಘಗಳು ಒತ್ತಾಯ.

IMG 20240109 WA0017

ಶಾಸಕ ಹೆಚ್.ವಿ.ವೆಂಕಟೇಶ್ ಮಾತನಾಡಿ ಈಗಾಗಲೇ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜನತಾ ದರ್ಶನ ಕಾರ್ಯಕ್ರಮ ಮಾಡುತ್ತಿದ್ದೆನೆ. ಜಿಲ್ಲಾಧಿಕಾರಿ ಪಾವಗಡ ಆಯ್ಕೆ ಮಾಡಿದ್ದಾರೆ ಇದರಿಂದಾಗಿ ಜಿಲ್ಲಾ ಮಟ್ಟದ ಅಧಿಕಾರಿ ಬರುವ ಕಾರಣ ಬಹುತೇಕ ಜನರ ಸಮಸ್ಯೆಗಳನ್ನು ಸ್ಥಳದಲ್ಲಿ ಬಗಿಹರಿಸುತ್ತಾರೆ ಎಂಬುದಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಇದರ ಸದುಪಯೋಗ ಪಡಿಸಿಕೊಳ್ಳ ಬೇಕು ಎಂದರು. ಪಿಡಿಓಗಳು ಅವರವರ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿಲ್ಲ ಕಂಪ್ಯೂಟರ್ ಆಪರೇಟರ್ ಡಾಂಗಲ್(Dongle) ದುರುಪಯೋಗ ಪಡಿಸಿಕೊಂಡು ಬಹಳಷ್ಟು ಲೋಪಗಳನ್ನು ಎಸಗಿದ್ದಾರೆ. ವಿವಿಧ ಇಲಾಖೆಕೆಗಳಲ್ಲಿ ಬ್ರೋಕರ್ ಗಳ ಹಾವಳಿ ಜನರಿಂದ ಸಾವಿರಾರು ಹಣ ಪಡೆದು ಕೆಲಸ ಮಾಡಿಕೊಡುವುದಾಗಿ ವಂಚಿಸುತ್ತಿದ್ದಾರೆ ಎಂಬುದಾಗಿ ತಿಳಿಸಿದರು.

IMG 20240109 WA0011

ಈ ವೇಳೆ ಸಿ.ಎಸ್.ಪ್ರಭು ಜಿಲ್ಲಾ ಪಂಚಾಯತ್ ಕಾರ್ಯನಿರ್ವಣಾ ಅಧಿಕಾರಿ,ಅನುಪಮಾ ಜಿಲ್ಲಾ ಅರಣ್ಯ ಅಧಿಕಾರಿ,ಶಿವಾನಂದ ಕರಳೆ ಅಪಾರ ಜಿಲ್ಲಾಧಿಕಾರಿ, ರಿಷಿ ಅನಂದ್ ಉಪವಿಭಾಗಧಿಕಾರಿಗಳು ಮಧುಗಿರಿ,ತಹಶಿಲ್ದಾರ್ ವರದರಾಜ್, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ವರದಿ: ಇಮ್ರಾನ್ ಉಲ್ಲಾ.ಪಾವಗಡ

Document

Leave a Reply

Your email address will not be published. Required fields are marked *