Janataa24 NEWS DESK

ತುರುವೇಕೆರೆ: ಟಿ ಬಿ ಕ್ರಾಸ್ ನಲ್ಲಿ ಭಕ್ತಾದಿಗಳಿಗೆ ಅನ್ನದಾನ ಮಾಡುವ ಮುಖಾಂತರ ಭಕ್ತಿ ಸಮರ್ಪಣೆ ಮಾಡಿ “ರಾಮಸೇವೆ” ಮಾಡಲಾಯಿತು.
ಸೋರವನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುತ್ತಮುತ್ತಲಿನ ಯುವಕ ಮಿತ್ರರು ಹಾಗೂ ಹಿರಿಯರು ಸೇರಿ ಇಂದು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ಶ್ರೀ ರಾಮನ ಭಾವಚಿತ್ರ ಮತ್ತು ಶ್ರೀ ಆಂಜನೇಯ ಸ್ವಾಮಿ ಮೂರ್ತಿಯನ್ನು ಮೆರವಣಿಗೆ ಮಾಡಿ ಪ್ರಮುಖ ಬೀದಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಇದೆ ವೇಳೆ ಟಿ ಬಿ ಕ್ರಾಸ್ ಸರ್ಕಲ್, ಅಯೋಧ್ಯೆಯಲ್ಲಿ ನಡೆಯುತ್ತಿರುವ ಶ್ರೀರಾಮ ಪ್ರತಿಷ್ಠಾಪನ ಹಿನ್ನೆಲೆ ಎಲ್ಲಿ ನೋಡಿದರೂ ಕೇಸರಿಮಯವಾಗಿ ಕಾಣುತ್ತಿದ್ದು, ಸುತ್ತಮುತ್ತಲಿನ ನೂರಾರು ಭಕ್ತಾದಿಗಳು ಈ ಅನ್ನಸಂಪರ್ಪಣೆ ಕಾರ್ಯದಲ್ಲಿ ಭಾಗವಹಿಸಿ ಶ್ರೀರಾಮ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ವರದಿ
ತುರುವೇಕೆರೆ: ಮಂಜುನಾಥ್