Janataa24 NEWS DESK

ತುರುವೇಕೆರೆ: ತಾಲೂಕಿನ ದಬ್ಬೆಘಟ್ಟ ಹೋಬಳಿ, ಮುದಿಗೆರೆ ಗ್ರಾಮದಲ್ಲಿ ಇದೇ ತಿಂಗಳು 13ನೇ ತಾರೀಖಿನ ಮಂಗಳವಾರದಂದು ಶ್ರೀ ವೀರಭದ್ರೇಶ್ವರ ಸ್ವಾಮಿ ಮತ್ತು ಶ್ರೀ ಭದ್ರಕಾಳಿ ದೇವಿ ಹಾಗೂ ನವಗ್ರಹ ನೂತನ ದೇವಸ್ಥಾನದ ಶಿಲಾಮಂಟಪ ಉದ್ಘಾಟನಾ ಸಮಾರಂಭ. ಮಾಜಿ ಶಾಸಕ ಎಂ ಡಿ ಲಕ್ಷ್ಮೀನಾರಾಯಣ್ ಸುದ್ದಿಗೋಷ್ಠಿ.
ಇದೇ ವೇಳೆ ಮಾತನಾಡಿದ ಲಕ್ಷ್ಮೀನಾರಾಯಣ್ ಅವರು ಈ ಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರು ಆಗಮಿಸಲಿದ್ದು, ಈ ಸಮಾರಂಭದ ಅಧ್ಯಕ್ಷತೆಯನ್ನು ತುರುವೇಕೆರೆ ಶಾಸಕರಾದ ಎಂ ಟಿ ಕೃಷ್ಣಪ್ಪನವರು ಅಧ್ಯಕ್ಷತೆ ವಯಸ್ಸಲ್ಲಿದ್ದು,ರಾಜ್ಯದ ಮೂಲೆ ಮೂಲೆಗಳಿಂದ ಭಕ್ತಾದಿಗಳು ಆಗಮಿಸುವ ಹಿನ್ನೆಲೆಯಲ್ಲಿ ನಮ್ಮ ಮಾಧ್ಯಮದ ಮುಖಾಂತರ ತಾಲೂಕಿನ ಜನತೆಗೆ ಈ ಸಮಾರಂಭಕ್ಕೆ ಆಹ್ವಾನ ನೀಡಿದರು.

ಇನ್ನು ಈ ದೇವಸ್ಥಾನದ ಕಟ್ಟಡ ಕಾಮಗಾರಿಯ ಬಗ್ಗೆ ಎಂ ಜಿ ಕೆಂಪೇಗೌಡ ಅವರು ಮಾಹಿತಿ ನೀಡಿ, ಶ್ರೀ ವೀರಭದ್ರೇಶ್ವರ ಮತ್ತು ಭದ್ರಕಾಳಿ ದೇವಸ್ಥಾನವನ್ನು ಎರಡು ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಕೇವಲ ಎರಡೇ ವರ್ಷದಲ್ಲಿ ಈ ದೇವಾಲಯ ಲೋಕಾರ್ಪಣೆಗೆ ಸಿದ್ಧವಾಗಿದೆ, ಪ್ರತಿಷ್ಠಾಪನೆ ಆಗಲಿರುವ ಮೂರ್ತಿಗಳು ಉತ್ತರ ಕರ್ನಾಟಕ ಭಾಗದಿಂದ ತರಲಾಗಿದ್ದು, ದೇವಸ್ಥಾನದ ಮುಂಭಾಗ 21 ಅಡಿ ಎತ್ತರದ ತ್ರಿಶೂಲ ಕಂಬವನ್ನು ಸಹ ನಿರ್ಮಿಸಲಾಗಿದೆ , ಜೊತೆಗೆ ದೇವಸ್ಥಾನದ ಶಿಲ್ಪಿಗಳನ್ನು ಅಜಿಂ ಚಿಕ್ಕಹಳ್ಳಿ ,ಮತ್ತು ಮೂರ್ತಿ ಕೆತ್ತನೆಯ ಶಿಲ್ಪಿ ,ಕಿರಣ್, ಹಾಗೂ ಶಿಖರ ಮತ್ತು ಬಣ್ಣದ ಲೇಪನ ಮಾಡಿರುವ, ರವಿ ಹಾಗೂ ರಾಜೇಶಚಾರ್ ಅವರಿಗೆ ಅಭಿನಂದನೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷರು ಎಂ ಬಿ ಚಿಕ್ಕವೀರಯ್ಯ, ಕಾರ್ಯದರ್ಶಿಗಳಾದ ಎಂ ಸಿ ಶಿವಲಿಂಗೇಗೌಡ, ಖಜಾಂಚಿಗಳಾದ ಎಂ ಸಿ ನಾರಾಯಣ್, ಊರಿನ ಪ್ರಮುಖರುಗಳಾದ ಬಸವರಾಜು, ಮಂಜಣ್ಣ, ಪ್ರದೀಪ್, ರಾಮಣ್ಣ, ಈಶ್ವರಯ್ಯ, ಜಗದೀಶ್, ಹೊನ್ನಪ್ಪ, ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ
ತುರುವೇಕೆರೆ: ಮಂಜುನಾಥ್