Janataa24 NEWS DESK
ಜಿಲ್ಲಾ ಉಪಾಧ್ಯಕ್ಷರಾಗಿ ಎನ್ ಅಟ್ಟಯ್ಯ, ಜಿಲ್ಲಾ ಸಂಘಟನಾ ಅಧ್ಯಕ್ಷರಾಗಿ ಪುಟ್ಟಸ್ವಾಮಿ ಆಯ್ಕೆ.
ಡಿಎಸ್ಎಸ್ ಪುನಶ್ಚೇತನ ಸಭೆ ಹಾಗೂ ಅಭಿನಂದನಾ ಕಾರ್ಯಕ್ರಮ

ತುರುವೇಕೆರೆ: ದಾದಾಸಾಹೇಬ್ ಎನ್ ಮೂರ್ತಿ ಸ್ಥಾಪಿತ ಸಂಘರ್ಷ ಸಮಿತಿ. ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಪ್ರವಾಸಿ ಮಂದಿರದಲ್ಲಿ ಎನ್ ಮೂರ್ತಿ ಬಣದಿಂದ ತಿಪಟೂರು ಹಾಗು ತುರುವೇಕೆರೆ ತಾಲೂಕಿನ ಪದಾಧಿಕಾರಿಗಳ ಪುನಶ್ಚೇತನ ಸಭೆ ಹಾಗೂ ಹೊಸದಾಗಿ ಆಯ್ಕೆಯಾದ ಜಿಲ್ಲಾ ಸಂಘಟನಾ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಅಭಿನಂದನ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಅಧ್ಯಕ್ಷರು ಪುಟ್ಟರಾಜು ಮತ್ತು ಜಿಲ್ಲಾ ಉಪಾಧ್ಯಕ್ಷರಾದ ಎನ್ ಅಟ್ಟಯ್ಯನವರನ್ನು ಅಭಿನಂದಿಸಿ ಮಾತನಾಡಿದ ಜಿಲ್ಲಾಧ್ಯಕ್ಷರಾದ ಪಿಎನ್ ರಾಮಯ್ಯನವರು,
ಹೊಸದಾಗಿ ಆಯ್ಕೆಯಾದ ಪದಾಧಿಕಾರಿಗಳು ರೈತರು, ಮಹಿಳೆಯರು, ನೊಂದವರ, ವಿದ್ಯಾರ್ಥಿಗಳ , ಸಾಮಾಜಿಕವಾಗಿ ಹಿಂದುಳಿದ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಕೆಲಸ ಮಾಡುವಂತೆ ಸಂಘಟನೆಯ ಹೊಸ ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷರಾದ ಎನ್ ಅಟ್ಟಯ್ಯನವರು ಸಾಮಾಜಿಕವಾಗಿ ಹಿಂದುಳಿದವರು, ಅಂಬೇಡ್ಕರ್ ಬರೆದ ಸಂವಿಧಾನವನ್ನು ಓದಿಕೊಂಡು ಪ್ರತಿಯೊಂದು ಮನೆಯಲ್ಲಿ ಒಬ್ಬೊಬ್ಬ ಅಂಬೇಡ್ಕರ್ ಉದಯಿಸಿದಾಗ ಆಗ ಮಾತ್ರ ಸಾಮಾಜಿಕವಾಗಿ ಬದಲಾವಣೆ ಸಾಧ್ಯಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಸಂಘಟನಾ ಅಧ್ಯಕ್ಷರಾಗಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪುಟ್ಟರಾಜರವರು ದಲಿತರು ಮೊದಲು ಊಟ ಮತ್ತು ಬಟ್ಟೆ ಹೊಂದಿಸಿಕೊಳ್ಳಲಾಗದೆ ತುಂಬಾ ಶೋಚನೀಯ ಸ್ಥಿತಿಯಲ್ಲಿದ್ದರು. ಅದರಿಂದ ಇಂದಿನ ಯುವ ಪೀಳಿಗೆಯ ಯುವಕರು ಅಂಬೇಡ್ಕರ್ ರಂತೆ ಸೂಟು ಬೂಟು ಧರಿಸಿ ಆಧುನಿಕತೆ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ತಿಪಟೂರು ತಾಲೂಕಿನ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಸಿದ್ದಿಕ್ ಪಾಷಾ ಮಾತನಾಡಿ ಮನುಷ್ಯರಾದ ನಾವೆಲ್ಲರೂ ಯಾವುದೇ ಜಾತಿ ಮತ ಬೇರೆ ಎನಿಸದೆ ಒಗ್ಗಟ್ಟಾಗಿ ಎಲ್ಲಾ ವರ್ಗದ ಜನತೆಯ ಅಭಿವೃದ್ಧಿಗಾಗಿ ಶ್ರಮಿಸಬೇಕೆಂದರು.

ಇದೆ ವೇಳೆ, ತಿಪಟೂರು ತಾಲೂಕು ಕಾರ್ಯದರ್ಶಿ ಕೆಂಪಯ್ಯ, ಗಜೇಂದ್ರಕುಮಾರ್ ತಿಪಟೂರು, ತಾಲೂಕು ಸಂಚಾಲಕರು . ಗೋಪಾಲ ಹಿಂದುಳಿದ ವರ್ಗದ ಅಧ್ಯಕ್ಷರು . ಹೋಬಳಿ ಕಾರ್ಯದರ್ಶಿಯಾದ ಲಕ್ಷ್ಮಣ್, ತುರುವೇಕೆರೆ ಉಪಾಧ್ಯಕ್ಷರಾದ ಪ್ರಧಾನ ಕಾರ್ಯದರ್ಶಿ ಯತೀಶ್, ಮಹಿಳಾ ಘಟಕದ ಅಧ್ಯಕ್ಷ ಲಕ್ಷ್ಮಮ್ಮ, ಈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.