Document

MTK|ಗುರುವಾರದಂದು ನಮ್ಮ ಕಾರ್ಯಕರ್ತರ ಜೊತೆಗೂಡಿ ನಾಮಪತ್ರ ಸಲ್ಲಿಸುತ್ತೇನೆ: ಎಂ ಟಿ ಕೃಷ್ಣಪ್ಪ .

Janataa24 NEWS DESK

IMG 20230418 WA0025

ತುರುವೇಕೆರೆ : ಪಟ್ಟಣದ ತಾಲೂಕು ಕಚೇರಿಯಲ್ಲಿ 20ನೇ ತಾರೀಕು ಗುರುವಾರದಂದು ನಮ್ಮ ಕಾರ್ಯಕರ್ತರ ಜೊತೆಗೂಡಿ ಮೆರವಣಿಗೆಯ ಮುಖಾಂತರ ಹೋಗಿ ನಾಮಪತ್ರ ಸಲ್ಲಿಸುತ್ತೇನೆ .

ಸುಮಾರು 25 ಸಾವಿರದಿಂದ 30,000 ಜನರು ಭಾಗವಹಿಸಲಿದ್ದು ಜೆ ಡಿ ಎಸ್ ಕಾರ್ಯಕರ್ತರು ಹಾಗೂ ಹಿತೈಷಿಗಳು, ಅಭಿಮಾನಿಗಳು ಭಾಗವಹಿಸಿ ಆಶೀರ್ವದಿಸಬೇಕೆಂದು,‌ ಮಾಜಿ ಶಾಸಕ ಜೆ ಡಿ ಎಸ್ ಪಕ್ಷದ ಅಭ್ಯರ್ಥಿ ಎಂ ಟಿ ಕೃಷ್ಣಪ್ಪನವರು ಮನವಿ ಮಾಡಿದ್ದಾರೆ.



ಗುಬ್ಬಿ ಕ್ಷೇತ್ರದಲ್ಲಿ ಯಾದವ ಸಮಾಜದ ಬೆಟ್ಟಸ್ವಾಮಿ ಅವರು ಬಿಜೆಪಿಯನ್ನು ಬಿಟ್ಟು ನಮ್ಮ ಪಕ್ಷಕ್ಕೆ ಬಂದಿರುವುದು ಸ್ವಾಗತ ಅರ್ಹ ವಿಚಾರ, ಇದರಿಂದ ನಮ್ಮ ಪಕ್ಷಕ್ಕೆ ಆನೆ ಬಲಬಂದಂತಾಗಿದೆ ಅವರು ಸಹ ನಾಮಪತ್ರ ಸಲ್ಲಿಸುವ ವೇಳೆ ಯಲ್ಲಿ ಭಾಗವಹಿಸಲಿದ್ದಾರೆ .

ಮಸಾಲ ಜೈರಾಮ್ ರವರು ಬಿಜೆಪಿ ಪಕ್ಷದ ಅಭ್ಯರ್ಥಿ ಆಗಿರುವುದರಿಂದ ಅವರ ಕಂಪನಿಯ ತೇಜು ಮಸಾಲ ಜಾಹೀರಾತನ್ನು ಟಿ ವಿ ಮತ್ತು ಪತ್ರಿಕೆಗಳಲ್ಲಿ ಪ್ರಸಾರವಾಗುತ್ತಿರುವುದರಿಂದ ಅವುಗಳು ಮತದಾರರ ಮೇಲೆ ಪ್ರಭಾವವನ್ನು ಬೀರುತ್ತಿರುವುದರಿಂದ , ಅವುಗಳನ್ನು ತಕ್ಷಣದಿಂದಲೇ ನಿಲ್ಲಿಸಬೇಕೆಂದು, ಚುನಾವಣಾಧಿಕಾರಿಗಳಲ್ಲಿ ಮನವಿ ಮಾಡುತ್ತೇನೆ ಎಂದರು.

ಮೊನ್ನೆ ತಾನೆ ಬಿ ಜೆ ಪಿ ಪಕ್ಷ ಸೇರಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಉಗ್ರಪ್ಪನವರು ನಮ್ಮ ಪಕ್ಷವನ್ನು ಬಿಟ್ಟು 15 ವರ್ಷಗಳಾಗಿವೆ. ಈಗ ಕಾಂಗ್ರೆಸ್ ಬಿಟ್ಟು ಬಿ ಜೆ ಪಿಯನ್ನು ಸೇರಿದ್ದಾರೆ ಅದು ಅವರ ವೈಯಕ್ತಿಕ ವಿಚಾರವಾಗಿದ್ದು, ನಮ್ಮ ಕಾಲದಲ್ಲಿ ಎಲ್ಲಾ ಸವಲತ್ತುಗಳನ್ನು ಪಡೆದು ಅವುಗಳು ಅವರ ಜನಾಂಗಕ್ಕೆ ಒದಗಿಸಿದ್ದಾರೆ , ಆದರೂ ಸಹ ಏನೂ ಗೊತ್ತಿಲ್ಲ ಜಾಣ ಕುರುಡು ನಮ್ಮ ಪಕ್ಷದ ಬಗ್ಗೆ ಮಾತನಾಡಲು ಅವರಿಗೆ ನೈತಿಕತೆ ಇಲ್ಲ , ಇತ್ತೀಚೆಗೆ ಕಾಂಗ್ರೆಸ್ ತೊರೆದುರಿಂದ ಕಾಂಗ್ರೆಸ್ ಬಗ್ಗೆ ಮಾತನಾಡಬಹುದೇ ಹೊರತು ಜೆ ಡಿ ಎಸ್ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಿಲ್ಲಿಸುವುದು ಸೂಕ್ತ ಎಂದು ಹೇಳಿದರು.

ಈಗಾಗಲೇ ಮನೆ ಮನೆಗೆ ತೆರಳಿ ಪ್ರಚಾರವನ್ನು ಮಾಡಿದ್ದೇವೆ ಪಂಚರತ್ನ ಯಾತ್ರೆ ಬಂದಂತಹ ಸಂದರ್ಭದಲ್ಲಿ ಒಂದು ಸುತ್ತು ಪ್ರಚಾರವನ್ನು ಮುಗಿಸಿದ್ದೇವೆ ,ನಮ್ಮ ಕ್ರಮ ಸಂಖ್ಯೆ ಸಿಕ್ಕಿದ ತಕ್ಷಣ ಹಳ್ಳಿಹಳ್ಳಿಗೆ ಮನೆ ಮನೆಗೆ ತೆರಳಿ ಪ್ರಚಾರವನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ್ ಗೌಡ. ರಂಗಸ್ವಾಮಿ. ವೆಂಕಟಾಪುರ ಯೋಗೀಶ್. ಕೃಷ್ಣಪ್ಪ ಹೊನ್ನೇನಳ್ಳಿ. ಹೇಮಂತಕುಮಾರ ದೇವಿಹಳ್ಳಿ. ತಿಮ್ಮೇಗೌಡ ಹುಲಿಕೆರೆ. ರಘು ಕ್ಯಾಮಸಂದ್ರ. ಕುಮಾರಣ್ಣ ಮತ್ತಿತರರಿದ್ದರು.

Document

Leave a Reply

Your email address will not be published. Required fields are marked *