Document

Mangalore: ಪಿಹೆಚ್‍ಡಿ ವಿದ್ಯಾರ್ಥಿನಿ ನಾಪತ್ತೆ – ಪ್ರಕರಣದ ಹಿಂದೆ ಡ್ರಗ್ಸ್ ಮಾಫಿಯಾ ಶಂಕೆ?

image


ಮಂಗಳೂರು: ಇಲ್ಲಿ (Mangaluru) ಪಿಹೆಚ್‍ಡಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿನಿಯೋರ್ವಳು (Student) ನಾಪತ್ತೆಯಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪುತ್ತೂರಿನ ಪುರುಷರ ಕಟ್ಟೆಯ ವಿದ್ಯಾರ್ಥಿನಿ ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದು, ಪ್ರಕರಣದ ಹಿಂದೆ ಡ್ರಗ್ಸ್ ಮಾಫಿಯಾದ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.

ಆಕೆಯ ಪತ್ತೆಗೆ ಪೊಲೀಸರು (Police) ಹುಡುಕಾಟ ಆರಂಭಿಸಿದ್ದಾರೆ.

ವಿದ್ಯಾರ್ಥಿನಿಯ ತಂದೆ ಸಾವನ್ನಪ್ಪಿದ್ದು, ಮಂಗಳೂರಿನ(Mangalore) ಕದ್ರಿಯಲ್ಲಿರುವ ಆಕೆಯ ದೊಡ್ಡಪ್ಪ ಶಿಕ್ಷಣದ ಜವಾಬ್ದಾರಿ ಹೊತ್ತಿದ್ದರು. ಮಾಡೂರು ಎಂಬಲ್ಲಿನ ಪಿಜಿಯಲ್ಲಿ ತಂಗಲು ಯುವತಿಗೆ ವ್ಯವಸ್ಥೆ ಮಾಡಿದ್ದರು. ಪಿಜಿಗೆ ಅನ್ಯಕೋಮಿನ ಯುವಕನೋರ್ವ ಬರುತ್ತಿದ್ದು ಆತ ಡ್ರಗ್ಸ್(Drugs) ಚಟ ಹತ್ತಿಸಿದ್ದ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಬಜರಂಗದಳ ಕಾರ್ಯಕರ್ತರು ಯುವತಿಯ ದೊಡ್ಡಪ್ಪನಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ.

ಇದೀಗ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಅನ್ಯಕೋಮಿನ ಯುವಕನೊಬ್ಬನ ಜೊತೆ ಬೆಂಗಳೂರಿಗೆ ಯುವತಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಉಳ್ಳಾಲ (Ullal) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

https://www.janataa24.com/turuvekere-sbg-schools-new-mothers-dinner-program/
Document

Leave a Reply

Your email address will not be published. Required fields are marked *