Janataa24 NEWS DESK

ತುಮಕೂರು: ನಗರದ ಟೌನ್ ಹಾಲ್ ಸರ್ಕಲ್ ನಲ್ಲಿರುವ ತುಮಕೂರು(Tumkur) ಮಹಾನಗರ ಪಾಲಿಕೆ ಮೇಲೆ ಲೋಕಾಯುಕ್ತ(Lokayukta) ಅಧಿಕಾರಿಗಳು ಶುಕ್ರವಾರ ದಾಳಿ(Raid) ನಡೆಸಿದ್ದಾರೆ.

ಮಹಾನಗರ ಪಾಲಿಕೆಯ ಜನನ ಮರಣ ವಿಭಾಗ, ಕಂದಾಯ ವಿಭಾಗ, ಆರೋಗ್ಯ ಇಲಾಖೆ ವಿಭಾಗ, ರೆಕಾರ್ಡ್ ರೂಂ, ಹಾಗೂ ತಾಂತ್ರಿಕ ಶಾಖೆ ವಿಭಾಗದ ಮೇಲೆ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ತುಮಕೂರು ಮಹಾನಗರ ಪಾಲಿಕೆಯಲ್ಲಿ(Tumkur Mahanagara Palike) ಬ್ರೋಕರ್ ಗಳ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಸಾರ್ವಜನಿಕರು, ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು ಎನ್ನಲಾಗಿದೆ.

ಲೋಕಾಯುಕ್ತ (Lokayukta)ಎಸ್.ಪಿ ವಲೀಂ ಬಾಷ ನೇತೃತ್ವದಲ್ಲಿ ಲೋಕಾಯುಕ್ತ ಡಿವೈಎಸ್ ಪಿ ರಾಮಕೃಷ್ಣ, ಉಮಾಶಂಕರ್, ಹಾಗೂ ಇನ್ಸ್ಪೆಕ್ಟರ್ ಶಿವರುದ್ರಪ್ಪ ಸೇರಿದಂತೆ ಒಟ್ಟು 6 ಅಧಿಕಾರಿಳು ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ.