Janataa24 NEWS DESK

Pavagada: ಬೈಕ್ ಗೆ ಕಾಡು-ಹಂದಿ ಅಡ್ಡಗಟ್ಟಿ ಅಪಘಾತ ಗ್ರಾ.ಪಂ. ಸದಸ್ಯ ಕೃಷ್ಣಪ್ಪ ಮೃತ್ಯು.
ಪಾವಗಡ: ತಾಲೂಕಿನ ಬೆಳ್ಳಿಬಟ್ಟಲು ಗ್ರಾಮದ ಕಾಂಗ್ರೆಸ್ ಬೆಂಬಲಿತ ನ ಗ್ರಾಮ ಪಂಚಾಯಿತಿ ಸದಸ್ಯರಾದ ಕೃಷ್ಣಪ್ಪ ಎನ್ನುವವರು ನೆನ್ನೆ ರಾತ್ರಿ ಸುಮಾರು 9 ರಿಂದ 9 30 ಗಂಟೆಯಲ್ಲಿ ಸಂಬಂಧಿಕರ ಊರಿಗೆ ಹೋಗಿ ಮತ್ತೆ ಅಚ್ಚಮ್ನಳ್ಳಿ ಗೆ ಗಂಡ ಹೆಂಡತಿ ಇಬ್ಬರೂ ತೆರಳುತ್ತಿರುವಾಗ ಶೈಲಾಪುರ ಮತ್ತು ಕೋಟಗುಡ್ಡ ಮಧ್ಯೆ ಮದ್ರೇನಳ್ಳಿ ಫಾರೆಸ್ಟ್ ಬಳಿ ಆಕಸ್ಮಿಕವಾಗಿ ಕಾಡಂದಿಗಳು ನುಗ್ಗಿದ ಕಾರಣ ಬೈಕ್ ನಿಯಂತ್ರಣ ತಪ್ಪಿ ನೆಲಕ್ಕುರುಳಿ ಕೃಷ್ಣಪ್ಪನವರು ಸರ್ಕಾರಿ ಆಸ್ಪತ್ರೆಯಲ್ಲಿ ಕೊನೆಯ ಉಸಿರೆಳಧಿದ್ದಾರೆ. ಪತ್ನಿ ಮಗುವಿಗೆ ತಲೆಗೆ ಪೆಟ್ಟು ಬಿದ್ದಿದ್ದು ಹೆಚ್ಚಿನ ಚಿಕಿತ್ಸಗಾಗಿ ತುಮಕೂರು ಸರ್ಕಾರಿ ಆಸ್ಪತ್ರೆಗೆ ರಾವನೆಸಿದ್ದಾರೆ. ಕೃಷ್ಣಪ್ಪನವರಿಗೆ ಎರಡು ಗಂಡು ಒಂದು ಹೆಣ್ಣು ಮಗು ಹಾಗೂ ಆಪಾರ ಬಂಧುಗಳನ್ನು ಅಗಲಿದ್ದಾರೆ.
ಅರಸೀಕೆರೆ ಪೊಲೀಸ್(Police) ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಂಡು ತನಿಖೆಗೆ ಮುಂದಾದ ಪೊಲೀಸ್ ಅಧಿಕಾರಿಗಳು.
ಮೃತ ಕೃಷ್ಣಪ್ಪನವರಿಗೆ ಸ್ಥಳೀಯ ಶಾಸಕ ಎಚ್. ವಿ. ವೆಂಕಟೇಶ್ ಮಾಜಿ ಸಚಿವ ವೆಂಕಟರಮಣಪ್ಪ. ಇತರೆ ಸ್ಥಳೀಯ ಮುಖಂಡರು ಹಾಗೂ ಅಭಿಮಾನಿಗಳು ಸಂತಾಪ ವೆಕ್ತಪಡಿಸಿದ್ದಾರೆ.
ವರದಿ: ಇಮ್ರಾನ್ ಉಲ್ಲಾ. ಪಾವಗಡ
https://www.janataa24.com/officials-and-staff-who-mix-water-in-pavagada-mi/
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en