Janataa24 NEWS DESK
Koratagere: ಗೌರಿ ಹಬ್ಬದಂದೇ ಗೋಮಾಂಸ ರಫ್ತು.!
Koratagere: ಗೋಮಾಂಸ ಸಾಗಾಟ ಮಾಡುತ್ತಿದ್ದ ವಾಹನ ಕೊರಟಗೆರೆ ಬಳಿ ಪಲ್ಟಿ.

ಕೊರಟಗೆರೆ: ಇಂದು ಬೆಳ್ಳಂ ಬೆಳಗ್ಗೆ ಕೊರಟಗೆರೆ ತಾಲೂಕಿನ ಮುಗ್ಗೊಂಡನಹಳ್ಳಿಯ ಸಮೀಪ ರಾಜ್ಯ ಹೆದ್ದಾರಿ 3 ರಲ್ಲಿ ಗೋಮಾಂಸ ತುಂಬಿದ್ದ ಆಂಧ್ರಪ್ರದೇಶ ಮೂಲದ AP39 UK3285 ಟಾಟಾ ಇಂಟ್ರ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಆಗಿರುತ್ತದೆ.
ವಾಹನ ಪಲ್ಟಿಯಾದ ಸದ್ದು ಕೇಳಿ ಸ್ಥಳೀಯರು ಜಮಾವಣೆ ಆಗುವಷ್ಟರಲ್ಲಿ ವಾಹನದಲ್ಲಿದ್ದ ಇಬ್ಬರು ವ್ಯಕ್ತಿಗಳು ಅಪಘಾತವಾದ ಸ್ಥಳದಿಂದ ಪರಾರಿಯಾಗಿರುತ್ತಾರೆ ಎಂದು ಸ್ಥಳೀಯರು ಮಾಹಿತಿ ನೀಡಿರುತ್ತಾರೆ.
ಹಿಂದೂಪುರ ಮೂಲದಿಂದ ಮಧುಗಿರಿ ಕೊರಟಗೆರೆ ಮಾರ್ಗವಾಗಿ ಬೆಂಗಳೂರಿಗೆ ಗೋಮಾಂಸ ರಫ್ತಾಗುವ ಜಾಲ ಇದೀಗ ಬೆಳಕಿಗೆ ಬಂದಿದೆ.
ಗೋಮಾಂಸವನ್ನು ಬಟ್ಟೆಯಲ್ಲಿ ಸುತ್ತಿ ಅದರ ಮೇಲೆ ಹಣ್ಣಿನ ಕ್ರೇಟ್ ಗಳನ್ನು ಇಟ್ಟು ಹಣ್ಣು ಸಾಗಿಸುವ ವಾಹನದ ರೀತಿ ಬಿಂಬಿಸಿ ಗೋಮಾಂಸವನ್ನು ಸಾಗಾಟ ಮಾಡುತ್ತಿರುವ ಬೃಹತ್ ಜಾಲವೊಂದು ಇದೀಗ ಬೆಳಕಿಗೆ ಬಂದಿದೆ.

ವಿಷಯ ತಿಳಿದ ತಕ್ಷಣ ಕೊರಟಗೆರೆ ಆರಕ್ಷಕ ವೃತ್ತ ನಿರೀಕ್ಷಕರಾದ ಅನಿಲ್ ಕುಮಾರ್ ರವರು ಸ್ಥಳಕ್ಕೆ ಆಗಮಿಸಿ ವಾಹನವನ್ನು ಪರಿಶೀಲಿಸಿ ವಾಹನದಲ್ಲಿ ಗೋಮಾಂಸ ಪತ್ತೆಯಾಗಿದ್ದನ್ನು ಕಂಡು ತಕ್ಷಣವೇ ವಾಹನ ಮಾಲಿಕ ಮತ್ತು ಗೋಮಾಂಸ ಸಾಗಣೆ ಮಾಡುತ್ತಿದ್ದವರ ಸೆರೆ ಹಿಡಿಯುವಂತೆ ಸೂಚಿಸಿರುತ್ತಾರೆ.
ಇದೀಗ ಅಪರಾಧಿಗಳನ್ನು ಸೆರೆ ಹಿಡಿಯಲು ಕೊರಟಗೆರೆ ಠಾಣೆಯ ಸಬ್ ಇನ್ಸ್ಪೆಕ್ಟರ್ ತಿರ್ಥೇಶ್ ರವರು ಅಪರಾಧಿಗಳ ಜಾಡು ಹಿಡಿದು ಹಿಂದೂಪುರಕ್ಕೆ ತೆರಳಿರುತ್ತಾರೆ.
ಇನ್ನು ಮುಂದುವರೆದಂತೆ ಸ್ಥಳದಲ್ಲೇ ಪಲ್ಟಿಯಾಗಿದ್ದ ವಾಹನ ಮತ್ತು ಗೋಮಾಂಸವನ್ನು ಪೊಲೀಸರು ವಶಪಡಿಸಿಕೊಂಡಿದ್ದು ಕೊರಟಗೆರೆ ಠಾಣೆಯ ಸಬ್ ಇನ್ಸ್ಪೆಕ್ಟರ್ ಬಸವರಾಜು ರವರ ನೇತೃತ್ವದಲ್ಲಿ ಕಾರ್ಯಾಚರಣೆ.
ಈ ಬಗ್ಗೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
2024 ಭಾರತದಲ್ಲಿ 4.57 MMT ಇದ್ದ ಗೋಮಾಂಸ ಉತ್ಪಾದನೆ ಈ ವರ್ಷ 4.64 ಮಿಲಿಯನ್ ಮೆಟ್ರಿಕ್ ಟನ್ ಗೆ ಏರಿಕೆಯಾಗಲಿದ್ದರೆ, ಕಳೆದ ವರ್ಷ 1.56 ಮೆಟ್ರಿಕ್ ಟನ್ ಇದ್ದ ರಫ್ತು ಈ ವರ್ಷ 1.64 ಮೆಟ್ರಿಕ್ ಟನ್ ಗೆ ಏರಿಕೆಯಾಗಲಿದೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.