Janataa24 NEWS DESK
Internal Reservation: ಜಾತಿಗಣತಿಯಲ್ಲಿ ಮೂಲ ಜಾತಿ ಮಾದಿಗ ಎಂದು ನಮೂದಿಸಿ–ವೈ ಕೆ ಬಾಲಕೃಷ್ಣ.

ಗುಬ್ಬಿ : ಒಳ ಮೀಸಲಾತಿ ವರ್ಗಿಕರಣಕ್ಕೆ ಮೇ ಮೊದಲ ವಾರದಿಂದ ಜಾತಿಗಣತಿ ಆರಂಭವಾಗಲಿದ್ದು ಜಾತಿ ಕಲಾಂ (61) ರಲ್ಲಿ ಮಾದಿಗ ಎಂದು ನಮೂದಿಸಬೇಕು. ತಮ್ಮ ಮೂಲ ಜಾತಿಯನ್ನು ನಮೂದಿಸುವ ಮೂಲಕ ಮಾದಿಗ ಜಾತಿಯನ್ನು ಖಾತ್ರಿ ಪಡಿಸಬೇಕೆಂದು ಒಳ ಮೀಸಲಾತಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ವೈ ಕೆ ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಪರಿವೀಕ್ಷಣ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು
ಸುದೀರ್ಘ 35 ವರ್ಷಗಳ ಅವಿರಥ ಹೋರಾಟದ ಪ್ರತಿಫಲವಾಗಿ ಭಾರತ ಸರ್ವೋಚ್ಚ ನ್ಯಾಯಾಲಯವು ಒಳ ಮೀಸಲಾತಿ ವರ್ಗಿಕರಣಕ್ಕೆ ಆಯ ರಾಜ್ಯಗಳಿಗೆ ಬಿಟ್ಟಿದ್ದು ಎಂಬ ಐತಿಹಾಸಿಕ ತೀರ್ಪನ್ನು ನೀಡಿದ್ದು ಇದರ ಬೆನ್ನಲ್ಲೇ ಕರ್ನಾಟಕ ಸರ್ಕಾರ ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರ ಏಕ ಸದಸ್ಯತ್ವ ಆಯೋಗ ರಚನೆ ಮಾಡಿದ್ದು ಜಾತಿ ಗಣತಿದತ್ತಾಂಶದ ಸಂಗ್ರಹಕ್ಕಾಗಿ ಗಣತಿದಾರರು ನಮ್ಮ ಮನೆಯ ಬಾಗಿಲಿಗೆ ಬಂದ ಸಂದರ್ಭದಲ್ಲಿ ತಮ್ಮ ಮೂಲ ಜಾತಿಯನ್ನು ಎ ಕೆ ಎ ಡಿ ಎಂದು ನಮೋದಿಸದೆ ಎಸ್,ಸಿ, ಉಪಜಾತಿಗಳಾದ ಆದಿ ಕರ್ನಾಟಕ ,ಎಡಗೈ, ಮಾತಂಗ, ಉದಾರ,ಎಂದು ನಮೂದಿಸದೆ ಮೂಲ ಜಾತಿ ಮಾದಿಗ ಎಂದು ನಮೂದಿಸಬೇಕು.
ಹೊಲಯರಾಗಿದ್ದಲ್ಲಿ ಹೊಲಯ ಎಂದು ಮಾದಿಗರು ಮಾದಿಗ ಎಂದು ತಮ್ಮ ಮೂಲ ಜಾತಿಯನ್ನು ನಮೂದಿಸಬೇಕು ಇದರಿಂದಾಗಿ ಒಳ ಮೀಸಲಾತಿ ಜಾರಿಗೆ ನಿಖರವಾದ ದತ್ತಾಂಶಗಳು ದೊರೆಯುತ್ತದೆ ಎಂದು ತಿಳಿಸಿದರು.
ಒಳ ಮೀಸಲಾತಿ ಹೋರಾಟ ಸಮಿತಿಯ ತಾಲ್ಲೂಕು ಅಧ್ಯಕ್ಷ ಕೊಡಿಯಾಲ ಮಹದೇವ್ ಮಾತನಾಡಿ ಸುದೀರ್ಘ ಹೋರಾಟದ ಪ್ರತಿಫಲವಾಗಿ ಜಾತಿಗಣತಿ ಆರಂಭವಾಗಿದ್ದು ತಮ್ಮ ಮೂಲ ಜಾತಿಗಳನ್ನು ನಮೂದಿಸಬೇಕು ನಗರ ಪ್ರದೇಶದಲ್ಲಿ ವಾಸಿಸುವ ಗ್ರಾಮೀಣ ಭಾಗದ ಜನರು ತಮ್ಮ ಜಾತಿಯನ್ನು ಮುಚ್ಚಿಡದೆ ತಮ್ಮ ಗ್ರಾಮಗಳಿಗೆ ತೆರಳಿ ಅಥವಾ ಆನ್ಲೈನ್ ಮೂಲಕ ಜಾತಿಯನ್ನು ನಮೂದಿಸಬೇಕು ಭವಿಷ್ಯದ ಪೀಳಿಗೆ ತಲೆಮಾರುಗಳಿಗೆ ಅನುಕೂಲ ಮಾಡಿಕೊಡಬೇಕು ಇದರಿಂದ ಶೈಕ್ಷಣಿಕವಾಗಿ, ಉದ್ಯೋಗಕ್ಕಗಿ,ರಾಜಕೀಯವಾಗಿ,ಆರ್ಥಿಕವಾಗಿ, ಅನುಕೂಲ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಿವನಂಜಪ್ಪ, ಡಾ. ಲಿಂಗಯ್ಯ, ಶಿವಕುಮಾರ್, ನರಸೀಯಪ್ಪ, ಗಂಗಾಧರ್, ನರಸಿಂಹಯ್ಯ, ಮಂಜಣ್ಣ, ಕೃಷ್ಣಪ್ಪ, ದೊಡ್ಡಗುಣಿ ಕೀರ್ತಿ, ಗುಬ್ಬಿ ಬಸವರಾಜು, ಇರಕಸಂದ್ರ ನರಸಿಂಹಮೂರ್ತಿ ಸೇರಿದಂತೆ ಇತರರು ಹಾಜರಿದ್ದರು,
ವರದಿ :ಶ್ರೀಕಾಂತ್ ಗುಬ್ಬಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.